»   » ಪ್ರೇಮಾ ಮನೆಯಲ್ಲಿ ದಾಂದಲೆ : ಶ್ರೀನಿವಾಸ್‌ಗೆ 25,000 ದಂಡ

ಪ್ರೇಮಾ ಮನೆಯಲ್ಲಿ ದಾಂದಲೆ : ಶ್ರೀನಿವಾಸ್‌ಗೆ 25,000 ದಂಡ

Posted By:
Subscribe to Filmibeat Kannada

ಬೆಂಗಳೂರು : ಚಿತ್ರನಟಿ ಪ್ರೇಮಾ ಅವರ ಮನೆಗೆ ನುಗ್ಗಿ ದಾಂದಲೆ ನಡೆಸಿದ ಚಿತ್ರ ನಿರ್ಮಾಪಕ ಎಚ್‌.ಸಿ. ಶ್ರೀನಿವಾಸ್‌ ಅಲಿಯಾಸ್‌ ಶಿಲ್ಪ ಶ್ರೀನಿವಾಸ್‌ಗೆ ಕರ್ನಾಟಕ ನಿರ್ಮಾಪಕರ ಸಂಘ 25 ಸಾವಿರ ರುಪಾಯಿ ದಂಡ ವಿಧಿಸಿದೆ. ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತ್‌ ಕುಮಾರ್‌ ಪಾಟೀಲ್‌ ತಿಳಿಸಿದ್ದಾರೆ.


ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರು, ನಟಿ ಪ್ರೇಮಾ ಅವರ ತಂದೆ ಚಂಗಪ್ಪ ಅವರು, ಶ್ರೀನಿವಾಸ್‌ ವಿರುದ್ಧ ಕಲಾವಿದರ ಸಂಘಕ್ಕೆ ದೂರು ನೀಡಿದ್ದಾರೆ. ಹೀಗಾಗಿ ನಿರ್ಮಾಪಕರ ಸಂಘ ಈ ವಿಷಯದಲ್ಲಿ ಹೆಚ್ಚಿನ ವಿಚಾರಣೆ ನಡೆಸುವುದಿಲ್ಲ ಎಂದೂ ಅವರು ಹೇಳಿದರು.

ಆದರೂ, ಘಟನೆ ನಡೆದ ಸಂದರ್ಭದಲ್ಲಿ ನಾವೆಲ್ಲರೂ ಅಲ್ಲಿದ್ದುದರಿಂದ ನೈತಿಕ ಹೊಣೆಗಾರಿಕೆಯ ಮೇಲೆ ನಿರ್ಮಾಪಕರ ಸಂಘದ ವತಿಯಿಂದ ವಿಚಾರಣೆ ನಡೆಸಿ ಶ್ರೀನಿವಾಸ್‌ಗೆ 25 ಸಾವಿರ ರುಪಾಯಿ ದಂಡ ವಿಧಿಸಿದ್ದೇವೆ ಎಂದೂ ಪಾಟೀಲ್‌ ವಿವರಿಸಿದರು.

ಕೈಬಿಟ್ಟ ವಿಚಾರಣೆ: ಈ ಮಧ್ಯೆ ಪ್ರೇಮಾ ಮನೆಯಲ್ಲಿ ನಡೆದ ದಾಂದಲೆ ಸಂಬಂಧ ಸಭೆ ಕರೆದಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಯಾವುದೇ ನಿರ್ಧಾರಕ್ಕೆ ಬರಲಾರದೆ, ವಿಚಾರಣೆಯನ್ನೇ ಕೈಬಿಟ್ಟಿದೆ. ನಟಿ ಪ್ರೇಮಾ ಅವರಾಗಲೀ, ಅವರ ತಂದೆಯಾಗಲೀ ಮಂಡಳಿಗೆ ಲಿಖಿತ ಅಥವಾ ಮೌಕಿಕ ದೂರು ಸಲ್ಲಿಸಿಲ್ಲ. ಹೀಗಾಗಿ ಯಾವ ಆಧಾರದ ಮೇಲೆ ವಿಚಾರಣೆ ನಡೆಸುತ್ತೀರಿ ಎಂಬ ಪ್ರಶ್ನೆಗೆ ಉತ್ತರವಿಲ್ಲದೆ, ಸಭೆ ಯಾವುದೇ ನಿರ್ಧಾರ ತಳೆಯದೆ ವಿಚಾರಣೆ ಕೈಬಿಟ್ಟಿತು ಎಂದು ಮೂಲಗಳು ಹೇಳಿವೆ.

(ಇನ್‌ಫೋ ವಾರ್ತೆ)

ವಾರ್ತಾ ಸಂಚಯ

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada