"ನಾನಿನ್ನು ಚಿಕ್ಕವಳು ಎನ್ನುತ್ತಲೇ ಮದುವೆಗೆ ರೆಡಿಯಾದ್ರಾ ಪ್ರೇಮಂ ನಟಿ: ರಾಮ್ ಪೋತಿನೇನಿ ಜೊತೆ ಮದ್ವೆ ಅಂತೆ!
'ಪ್ರೇಮಂ' ಮಲಯಾಳಂ ಸಿನಿಮಾ ಆಗಿದ್ದರೂ ಅನುಪಮಾ ಪರಮೇಶ್ವರನ್‌ಗಾಗಿಯೇ ಸಿನಿಮಾ ನೋಡಿದವರು ಅದೆಷ್ಟೋ ಮಂದಿ. ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಜನಪ್ರಿಯತೆ ಗಳಿಸಿಕೊಂಡಿದ್ದರು. ಮೊದಲ ಸಿನಿಮಾದಿಂದಲೇ ದಕ್ಷಿಣ ಭಾರತದಾದ್ಯಂತ ಅಭಿಮಾನಿಗಳನ್ನು ಗಿಟ್ಟಸಿಕೊಂಡಿದ್ದು ಇದೇ ಅನುಪಮಾ ಪರಮೇಶ್ವರನ್.
ಕೇವಲ 19ನೇ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಮಲಯಾಳಿ ಬ್ಯೂಟಿ ಅಭಿಮಾನಿಗಳೇನು ಕಮ್ಮಿಯಿಲ್ಲ. ಸದ್ಯ ಮಲಯಾಳಂ ಸಿನಿಮಾಗಳಿಗಿಂತ ತೆಲುಗು ಚಿತ್ರರಂಗದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅನುಪಮಾ ಸಿನಿಮಾಗಳು ಅದೆಷ್ಟು ಜನಪ್ರಿಯತೆ ಕಂಡಿದ್ದವೋ, ಅಷ್ಟೇ ಪ್ರೀತಿ, ಮದುವೆ ವಿಷಯಗಳಿಂದಲೂ ಸುದ್ದಿಯಾಗುತ್ತಿದ್ದಾರೆ.

ಹಿಂದೊಮ್ಮೆಅನುಪಮಾ ಪರಮೇಶ್ವರನ್ ಹೆಸರು ಭಾರತ ತಂಡದ ಕ್ರಿಕೆಟರ್ ಜಸ್ಪ್ರಿತ್ ಬುಮ್ರಾ ಜೊತೆ ತಳುಕು ಹಾಕಿಕೊಂಡಿತ್ತು. ಜಸ್ಪ್ರೀತ್ ಮದುವೆ ಬಳಿಕ ಆ ಸುದ್ದಿಗೆ ಬ್ರೇಕ್ ಬಿತ್ತು. ಈಗ ತೆಲುಗಿನ ಇಸ್ಮಾರ್ಟ್ ನಟ ರಾಮ್ ಪೋತಿನೇನಿ ಜೊತೆ ಅನುಪಮಾ ಹೆಸರು ಹೇಳಿ ಬರುತ್ತಿದೆ. ಶೀಘ್ರದಲ್ಲೇ ಇಬ್ಬರು ಮದುವೆ ಕೂಡ ಆಗುತ್ತಾರೆ ಅನ್ನೋದು ಸುದ್ದಿ.
ರಾಮ್ ಪೋತಿನೇನಿ ಜೊತೆ ಲವ್
ಅನುಪಮಾ ಪರಮೇಶ್ವರನ್ ದಕ್ಷಿಣ ಭಾರತದ ಫೇವರಿಟ್ ನಟಿಯಾಗಿದ್ದಾರೆ. ಮಲಯಾಳಂ ನಟಿಯಾಗಿದ್ದರೂ ಟಾಲಿವುಡ್ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. ಹೀಗಾಗಿ ತೆಲುಗು ಮಂದಿಯ ಫೇವರಿಟ್ ನಟಿಯೀಕೆ. ಇತ್ತೀಚೆಗೆ ಸಾಕಷ್ಟು ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ಅನುಪಮಾ ಪರಮೇಶ್ವರನ್ ಹೆಸರು ರಾಮ್ ಪೋತಿನೇನಿ ಇಬ್ಬರೂ ಹಲವು ದಿನಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ. ಇಬ್ಬರೂ ಪ್ರೀತಿಯಲ್ಲಿ ಬಿದ್ದಿರೋ ಬಗ್ಗೆ ಗುಸು ಗುಸು ಎದ್ದಿತ್ತು. ಇದೇ ಬೆನ್ನಲ್ಲೇ ಈಗ ಮದುವೆ ಆಗುತ್ತಾರೆ ಅನ್ನೋ ಸುದ್ದಿ ಹಬ್ಬಿದೆ.
ಎರಡೂ ಕುಟುಂಬದ ಒಪ್ಪಿಗೆ
ಅನುಪಮಾ ಪರಮೇಶ್ವರನ್ ಹಾಗೂ ರಾಮ್ ಪೋತಿನೇನಿ ಇಬ್ಬರೂ ಮದುವೆ ಆಗಲು ನಿರ್ಧರಿಸಿದ್ದಾರೆ. ಎರಡೂ ಮನೆಯ ಹಿರಿಯರನ್ನು ಈ ಜೋಡಿ ಒಪ್ಪಿಸಿದ್ದು, ಅವರು ಮದುವೆ ಅಸ್ತು ಎಂದಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿದೆ. ಈ ಬೆನ್ನಲ್ಲೇ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಬಳಿಕ ಮತ್ತೊಂದು ಜೋಡಿ ಸಿಹಿ ಸುದ್ದಿ ನೀಡಲಿದೆ ಎನ್ನುತ್ತಿವೆ. ಆದರೆ, ಈ ಜೋಡಿ ಅಧಿಕೃತವಾಗಿ ಏನನ್ನೂ ಹೇಳಿಲ್ಲ.

ನಾನಿನ್ನು ಚಿಕ್ಕವಳು ಎಂದಿದ್ದ ಪ್ರೇಮಂ ಬ್ಯೂಟಿ
ಕೆಲವೇ ವರ್ಷಗಳ ಹಿಂದೆ ಅನುಪಮಾ ಪರಮೇಶ್ವರನ್‌ಗೆ ಅಭಿಮಾನಿಯೊಬ್ಬರು ಮದುವೆ ಯಾವಾಗ ಅಂತ ಪ್ರಶ್ನೆ ಮಾಡಿದ್ದರು. ಆ ಪ್ರಶ್ನೆಗೆ ಸ್ವೀಟ್ ಆಗಿ ಸಿಡುಕಿದ್ದ ಪ್ರೇಮಂ ಬ್ಯೂಟಿ "ನನಗಿನ್ನೂ ಕೇವಲ 25 ವರ್ಷ. ಮದುವೆ ಬಗ್ಗೆ ಈಗಲೇ ಏನನ್ನೂ ಕೇಳಬೇಡಿ. ಮದುವೆಗೆ ಇನ್ನು ಬಹಳಷ್ಟು ಸಮಯವಿದೆ. ನಾನಿನ್ನು ಚಿಕ್ಕ ಹುಡುಗಿ" ಎಂದು ಅಭಿಮಾನಿಗೆ ಉತ್ತರಿಸಿದ್ದರು. ಈಗ ಮದುವೆ ವಿಷಯ ಓಡಾಡುತ್ತಿದ್ದಂತೆ ಚಿಕ್ಕ ಹುಡುಗಿ ಅಂತಿದ್ದು ಟ್ರೆಂಡಿಂಗ್ ಆಗುತ್ತಿದೆ.
ಅಪ್ಪು ಜೊತೆ ನಟಿಸಿದ್ದ ಅನುಪಮಾ ಪರಮೇಶ್ವರನ್
ಅನುಪಮಾ ಪರಮೇಶ್ವರನ್ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ನಟಸಾರ್ವಭೌಮ'ದಲ್ಲಿ ನಟಿಸಿದ್ದರು. ಹೀಗಾಗಿ ಅನುಪಮಾಗೆ ಕನ್ನಡದಲ್ಲೂ ಅಭಿಮಾನಿಗಳು ಇದ್ದಾರೆ. ಅಂದ್ಹಾಗೆ, ಅನುಪಮಾ ಹಾಗೂ ರಾಮ್ ಪೋತಿನೇನಿ 'ವನ್ನಧಿ ವಕ್ಕಟೆ ಜಿಂದಗಿ' ಹಾಗೂ 'ಹೆಲೋ ಗುರು ಪ್ರೇಮ ಕೊಸಮೆ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು.


Click it and Unblock the Notifications











