»   » ಪ್ರಿಯಾ ವಾರಿಯರ್ ಒಂದು 'ಪೋಸ್ಟ್' ಹಾಕಿದ್ರೆ 8 ಲಕ್ಷ ಸಿಗುತ್ತಂತೆ.!

ಪ್ರಿಯಾ ವಾರಿಯರ್ ಒಂದು 'ಪೋಸ್ಟ್' ಹಾಕಿದ್ರೆ 8 ಲಕ್ಷ ಸಿಗುತ್ತಂತೆ.!

Posted By:
Subscribe to Filmibeat Kannada
ಪ್ರಿಯಾ ಪ್ರಕಾಶ್ ವಾರಿಯರ್ ಇನ್ಸ್ಟಾಗ್ರಾಮ್ ಸಂಭಾವನೆ ಬಿ ಟೌನ್ ನನ್ನೂ ಮೀರಿಸಿದೆ | FIlmibeat Kannada

ಕಣ್ಸನ್ನೆ ಮೂಲಕ ಇಡೀ ಇಂಟರ್ ನೆಟ್ ಜಗತ್ತಿನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಅದೃಷ್ಟದ ಮೇಲೆ ಅದೃಷ್ಟ ಖುಲಾಯಿಸುತ್ತಿದೆ. ಸದ್ಯ ಆನ್ ಲೈನ್ ಜಗತ್ತಿನ ರಾಣಿಯಾಗಿ ಮಿಂಚುತ್ತಿರುವ ಪ್ರಿಯಾ ಮುಟ್ಟಿದ್ದೆಲ್ಲ ಚಿನ್ನವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈಕೆಯ ಕುರಿತು ಏನೇ ಸುದ್ದಿ ಪೋಸ್ಟ್ ಮಾಡಿದರೂ ಜನ ಮುಗಿಬಿದ್ದು ನೋಡುತ್ತಾರೆ.

ಇಷ್ಟರ ಮಟ್ಟಿಗೆ ಖ್ಯಾತಿಗಳಿಸಿಕೊಂಡಿರುವ ಪ್ರಿಯಾ ವಾರಿಯರ್ ಈಗ ಸೋಶಿಯಲ್ ಮೀಡಿಯಾದಲ್ಲಿ ಅತಿ ದೊಡ್ಡ ದಾಖಲೆ ಬರೆದಿದ್ದಾಳೆ. ಬಾಲಿವುಡ್ ಸ್ಟಾರ್ ನಟ-ನಟಿಯರನ್ನ ಹಿಂದಿಕ್ಕಿ ನಂಬರ್ 1 ಸ್ಥಾನದಲ್ಲಿರುವ ಪ್ರಿಯಾ ಸಾಮಾಜಿಕ ಜಾಲತಾಣದ ಸಂಭಾವನೆ ವಿಚಾರದಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಇನ್ನೊಂದು ವಿಡಿಯೋ ವೈರಲ್

ಹೌದು, ಪ್ರಿಯಾ ಪ್ರಕಾಶ್ ವಾರಿಯರ್ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ರೆ 8 ಲಕ್ಷ ಸಂಭಾವನೆ ಸಿಗುತ್ತಂತೆ.! ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ....

ಒಂದು ಪೋಸ್ಟ್ ಹಾಕಿದ್ರೆ 8 ಲಕ್ಷ

ಪ್ರಿಯಾ ಪ್ರಕಾಶ್ ವಾರಿಯರ್ ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ ಹಾಕಿದ್ರೆ 8 ಲಕ್ಷ ಸಂಭಾವನೆ ಪಡೆಯುತ್ತಾರಂತೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಹುಟ್ಟುಹಾಕಿದೆ. ಬಾಲಿವುಡ್ ತಾರೆಗಳು ಕೂಡ ಇಷ್ಟೊಂದು ಮೊತ್ತ ಪಡೆಯುವುದಿಲ್ಲ ಎನ್ನಲಾಗಿದೆ.

ಫೇಸ್ ಬುಕ್, ಟ್ವಿಟ್ಟರ್ ಎಷ್ಟಿರಬಹುದು.?

ಕೇವಲ ಇನ್ಸ್ಟಾಗ್ರಾಮ್ ನಲ್ಲೇ 8 ಲಕ್ಷ ಪಡೆಯುತ್ತಿರುವ ಪ್ರಿಯಾ, ಇನ್ನು ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಿಂದ ಎಷ್ಟು ಸಂಭಾವನೆ ಪಡೆಯಬಹುದು ಎಂಬ ಲೆಕ್ಕಾಚಾರ ಈಗ ಅಭಿಮಾನಿಗಳನ್ನ ಕಾಡುತ್ತಿದೆ.

ಇಷ್ಟೆಲ್ಲಾ ಸಂಚಲನ ಸೃಷ್ಟಿಸಿದ ಕಣ್ಸನ್ನೆ ಹುಡುಗಿಗೆ ಇನ್ನೊಂದು ಆಸೆ ಇದೆಯಂತೆ.!

ಫೇಸ್ ಬುಕ್ ಮಾಲೀಕನನ್ನೇ ಹಿಂದಿಕ್ಕಿರುವ ಪ್ರಿಯಾ

ಪ್ರಿಯಾ ವಾರಿಯರ್ ಜನಪ್ರಿಯತೆ ಎಷ್ಟು ಇದೆ ಅಂದ್ರೆ, ಫೇಸ್ ಬುಕ್ ಮಾಲೀಕ ಮಾರ್ಕ್ ಜುಕರ್ಬರ್ಗ್ ಅವರನ್ನೇ ಹಿಂದಿಕ್ಕಿದ್ದಾಳೆ.

ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಫಾಲೋವರ್ಸ್

ಫೇಸ್ ಬುಕ್ ಮತ್ತು ಟ್ವಿಟ್ಟರ್ ಗಿಂತ ವೇಗವಾಗಿ ಬೆಳೆಯುತ್ತಿರುವ ಮತ್ತೊಂದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್. ಈ ಇನ್ಸ್ಟಾಗ್ರಾಮ್ ನಲ್ಲೂ ಕೂಡ ಪ್ರಿಯಾಗೆ ಫಾಲೋವರ್ಸ್ ಹೆಚ್ಚಿದ್ದಾರೆ. ದಾಖಲೆಗಳ ಪ್ರಕಾರ ಸದ್ಯ ಲಕ್ಷಕ್ಕಿಂತ ಹೆಚ್ಚು ಜನ ಪ್ರಿಯಾ ಫಾಲೋವರ್ಸ್ ಇದ್ದಾರೆ.

ಸಿನಿಮಾ ಹಿಟ್ ಆಗೋದ್ರೆ, ಅಷ್ಟೇ.!

ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯದ ಚೊಚ್ಚಲ ಸಿನಿಮಾ 'ಒರು ಆದಾರ್ ಲವ್' ಜೂನ್ ತಿಂಗಳಲ್ಲಿ ತೆರೆಕಾಣಲಿದೆ. ಬರಿ ಟೀಸರ್ ಮೂಲಕವೇ ಈ ಮಟ್ಟದ ಯಶಸ್ಸು ಪಡೆದುಕೊಂಡಿರುವ ನಟಿ, ಇನ್ನೇನಾದ್ರೂ ಮೊದಲ ಸಿನಿಮಾ ಹಿಟ್ ಆಗೋದ್ರೆ ಬಹುಶಃ ಈಕೆಯ ಸಂಭಾವನೆ ಗಗನಕ್ಕೇರುವುದಂತೂ ಸುಳ್ಳಲ್ಲ.

ನ್ಯಾಷನಲ್ ಕ್ರಶ್ ಪ್ರಿಯಾ ವಾರಿಯರ್ ಗೆ ತುಂಬಿ ತುಳುಕುತ್ತಿವೆ ಅವಕಾಶಗಳು.!

English summary
Priya Prakash Warrier is charging Rs 8 Lakh per Instagram post of hers. This is more than what top Bollywood celebs charge.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada