100 ಕೋಟಿ ಹಿಡಿದು ಬಂದ ಕಿಚ್ಚನ ಪತ್ನಿ ಪ್ರಿಯಾ

Recommended Video

ವೀರ ಮದಕರಿ ಆದ ಕಿಚ್ಚ ಸುದೀಪ್..! | Filmibeat Kannada

ನಟ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಈಗ ದೊಡ್ಡ ಸಾಹಸ ಮಾಡಲು ಮುಂದಾಗಿದ್ದಾರೆ. ಅವರ ಈ ಸಾಹಸಕ್ಕೆ ಪತಿ ಸುದೀಪ್ ಸಂಪೂರ್ಣ ಸಾಥ್ ನೀಡಿದ್ದಾರೆ.

ಹೌದು, ಪ್ರಿಯಾ ಈಗ 100 ಕೋಟಿ ಬಜೆಟ್ ಚಿತ್ರವನ್ನ ನಿರ್ಮಾಣ ಮಾಡುತ್ತಾರಂತೆ. ಈ ರೀತಿಯ ಸುದ್ದಿಯೊಂದು ಇದೀಗ ಶುರುವಾಗಿದೆ. ಸುದೀಪ್ ಈಗಾಗಲೇ ತಮ್ಮ ಕಿಚ್ಚ ಕ್ರಿಯೇಷನ್ಸ್ ಮೂಲಕ ಕೆಲ ಸಿನಿಮಾಗೆ ಬಂಡವಾಳ ಹಾಕಿದ್ದು, ಇದೇ ಮೊದಲ ಬಾರಿಗೆ ಈ ಮಟ್ಟದ ಸಿನಿಮಾವನ್ನ ನಿರ್ಮಾಣ ಮಾಡುವ ತಯಾರಿ ನಡೆಯುತ್ತಿದೆಯಂತೆ.

ಅಂದಹಾಗೆ, ಪ್ರಿಯಾ ಸುದೀಪ್ ಅವರ ನೂರು ಕೋಟಿ ಚಿತ್ರ ಯಾವುದು?, ಈ ಸಿನಿಮಾ ಬರೋದು ನಿಜಾನಾ? ಎಂಬ ವಿವರ ಮುಂದಿದೆ ಓದಿ...

'ರಾಜಾ ವೀರ ಮದಕರಿ'

'ರಾಜಾ ವೀರ ಮದಕರಿ'

ಸುದೀಪ್ ಈ ಹಿಂದೆ 'ವೀರ ಮದಕರಿ' ಸಿನಿಮಾ ಮಾಡಿದ್ದರು. ಆದರೆ ಈಗ ಅವರು 'ರಾಜಾ ವೀರ ಮದಕರಿ' ಚಿತ್ರವನ್ನ ಮಾಡುವ ಪ್ಲಾನ್ ಮಾಡಿದ್ದಾರಂತೆ. ಚಿತ್ರದುರ್ಗದ ಮದಕರಿ ನಾಯಕರ ಜೀವನಾಧಾರಿತ ಸಿನಿಮಾ ಇದಾಗಿದೆಯಂತೆ. ಮದಕರಿ ನಾಯಕರ ಶೌರ್ಯವನ್ನ ಈ ಸಿನಿಮಾ ಸಾರಲಿದೆಯಂತೆ.

ಪ್ರಿಯಾ ಸುದೀಪ್ ನಿರ್ಮಾಣ

ಪ್ರಿಯಾ ಸುದೀಪ್ ನಿರ್ಮಾಣ

ಸುದೀಪ್ ಅವರ ಈ ಮಹಾ ಸಿನಿಮಾವನ್ನ ಅವರ ಪತ್ನಿ ಪ್ರಿಯಾ ಸುದೀಪ್ ನಿರ್ಮಾಣ‌ ಮಾಡಲಿದ್ದಾರಂತೆ. ಈ ಸಿನಿಮಾದ ಮೂಲಕ ಅವರು ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಈ ಚಿತ್ರದ ಕೆಲಸಗಳು ಈಗಾಗಲೇ ಶುರುವಾಗಿದೆಯಂತೆ.

ಎರಮ್ಮೂರು ಭಾಷೆಗಳಲ್ಲಿ

ಎರಮ್ಮೂರು ಭಾಷೆಗಳಲ್ಲಿ

ಈ ಸಿನಿಮಾ ಕನ್ನಡದ ಜೊತೆಗೆ ಇನ್ನೂ ಎರಡು ಭಾಷೆಗಳಲ್ಲಿ ನಿರ್ಮಾಣ ಆಗಲಿಯಂತೆ. ಕನ್ನಡದಲ್ಲಿ‌ ಈ ಸಿನಿಮಾಗೆ ಸುದೀಪ್ ನಾಯಕರಾಗಿದ್ದು, ಬೇರೆ ಭಾಷೆಯಲ್ಲಿಯೂ ಅವರೇ ಇರುತ್ತಾರ ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಹೊರ ಬಂದಿಲ್ಲ.

ಸಿನಿಮಾ ಬರೋದು ನಿಜನಾ?

ಸಿನಿಮಾ ಬರೋದು ನಿಜನಾ?

ಈ ಸಿನಿಮಾದ ಬಜೆಟ್ ಕೇಳಿದಾಗ ಮೊದಲು ಎಲ್ಲರಿಗೂ ಆಶ್ಚರ್ಯ ‌ಆಗುತ್ತದೆ. 100 ಕೋಟಿ ಬಜೆಟ್ ನಲ್ಲಿ ಕನ್ನಡದಲ್ಲಿ ಸಿನಿಮಾ ಮಾಡಲು ಸಾಧ್ಯನಾ ಎನ್ನುವ ಪ್ರಶ್ನೆ ಮೂಡುತ್ತದೆ. ಈ ಚಿತ್ರದ ಎಲ್ಲಿಯೂ ಯಾರು ಬಹಿರಂಗವಾಗಿ ಮಾತನಾಡದೆ ಇದ್ದರೂ, ಈ ಚಿತ್ರದ ಪ್ಲಾನಿಂಗ್ ನಡೆಯುತ್ತಿರುವುದು ನಿಜ ಎನ್ನಲಾಗುತ್ತದೆ. ಅದೇನೇ ಇದ್ದರೂ ಈ ಮಟ್ಟಕ್ಕೆ ಕನ್ನಡ ಚಿತ್ರರಂಗ ಬೆಳೆಯಬೇಕು ಎನ್ನುವುದು ಎಲ್ಲರ ಆಸೆ.

ಮದಕರಿ ಹಿಂದೆ ದರ್ಶನ್, ಸುದೀಪ್

ಮದಕರಿ ಹಿಂದೆ ದರ್ಶನ್, ಸುದೀಪ್

ಇನ್ನೊಂದು ಕಡೆ ನಟ ದರ್ಶನ್ ಕೂಡ ಮದಕರಿ ನಾಯಕರ ಬಗ್ಗೆ ಸಿನಮಾ ಮಾಡಲು ಮುಂದಾಗಿದ್ದಾರೆ. ರಾಕ್ ಲೈನ್ ವೆಂಕಟೇಶ್ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದು, ಡಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಇರಲಿದೆಯಂತೆ. ದರ್ಶನ್ ಹಾಗೂ ಸುದೀಪ್ ಇಬ್ಬರು ಒಂದೇ ಸಮಯಕ್ಕೆ ಮದಕರಿ ನಾಯಕರ ಬಗ್ಗೆ ಚಿತ್ರವನ್ನ ಮಾಡುವ ಮನಸ್ಸಿನಲ್ಲಿ ಇದ್ದಾರೆ.

More from Filmibeat

English summary
According to the sources actor Sudeep wife Priya Sudeep producing 100 crore movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X