For Quick Alerts
  ALLOW NOTIFICATIONS  
  For Daily Alerts

  ನಟಿ ಪ್ರಿಯಾಮಣಿ ದಿನದ ಸಂಭಾವನೆ ಡಬಲ್!

  |

  ಸಿನಿಮಾರಂಗ, ಬಣ್ಣದ ಲೋಕ ಅಂದ್ರೆ ಹಾಗೆ. ಇಲ್ಲಿ ನೇಮು ಫೇಮು ಇದ್ದವರಿಗೆ ಹೆಚ್ಚಿನ ಬೆಲೆ. ಅದರ ಜೊತೆಗೆ ಒಂದಷ್ಟು ಅದೃಷ್ಟವಂತರಾಗಿದ್ದರೆ ಮುಗೀತು. ಅವರು ಹೆಚ್ಚು ಕಾಲ ಬಣ್ಣದ ಲೋಕದಲ್ಲಿ ಉಳಿಯುತ್ತಾರೆ. ಈ ಸಂಭಾವನೆ ವಿಚಾರ ಕೂಡ ಹಾಗೆ. ಸಿನಿಮಾಗಳು ಗೆದ್ದರೇ, ನಟ ನಟಿಯರು ಖ್ಯಾತಿ ಗಳಿಸಿದರೆ ಏಕಾಏಕಿ ಸಂಭಾವನೆ ಕೂಡ ಏರುತ್ತದೆ.

  ಹಾಗೆ ನೋಡಿದರೆ ಸಿನಿಮಾರಂಗದಲ್ಲಿ ನಟರಿಗಿಂತಲೂ ನಟಿಯರಿಗೆ ಸಂಭಾವನೆ ಕಡಿಮೆ ಇದ್ದೇ ಇರುತ್ತದೆ. ಈ ಬಗ್ಗೆ ಹಲವು ಬಾರಿ ಹಲವು ನಟಿಮಣಿಯರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಪಂಚತಾರ ನಟಿ ಪ್ರಿಯಾಮಣಿ ಕೂಡ ಒಬ್ಬರು. ಈಗ ಪ್ರಿಯಾಮಣಿ ತಮ್ಮ ಸಂಭಾವನೆ ವಿಚಾರಕ್ಕೇನೆ ಸುದ್ದಿ ಆಗಿದ್ದಾರೆ.

  ಬಾಲಿವುಡ್‌ಗೆ ತಿವಿದ ಪ್ರಿಯಾಮಣಿ: ಸೌತ್ ತಾರೆಯರನ್ನು ಹೇಗೆ ಅಳೆಯಲಾಗುತ್ತೆ?ಬಾಲಿವುಡ್‌ಗೆ ತಿವಿದ ಪ್ರಿಯಾಮಣಿ: ಸೌತ್ ತಾರೆಯರನ್ನು ಹೇಗೆ ಅಳೆಯಲಾಗುತ್ತೆ?

  ಹೌದು ಪ್ರಿಯಾಮಣಿ ಇತ್ತೀಚೆಗೆ ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ, ಚಿತ್ರದಲ್ಲಿ ಅಭಿನಯಿಸುವುದನ್ನು ಕೊಂಚ ಕಡಿಮೆ ಮಾಡಿಕೊಂಡಿದ್ದಾರೆ. ಆದರೆ ಅವರು ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪ್ರಿಯಾಮಣಿ ಸಂಭಾವನೆ ಎಷ್ಟಿತ್ತು, ಈ ಎಷ್ಟಾಗಿದೆ ಎನ್ನುವ ಬಗ್ಗೆ ಮುಂದೆ ಓದಿ...

  ರಾಜಮೌಳಿಗೆ ಮಹೇಶ್ ಬಾಬು ಜೊತೆ ಮತ್ತೊಬ್ಬ ಸೂಪರ್‌ಸ್ಟಾರ್ ಬೇಕಂತೆ?; ಮತ್ತೊಂದು ಮಲ್ಟಿಸ್ಟಾರರ್ ಸಿನಿಮಾನಾ? ರಾಜಮೌಳಿಗೆ ಮಹೇಶ್ ಬಾಬು ಜೊತೆ ಮತ್ತೊಬ್ಬ ಸೂಪರ್‌ಸ್ಟಾರ್ ಬೇಕಂತೆ?; ಮತ್ತೊಂದು ಮಲ್ಟಿಸ್ಟಾರರ್ ಸಿನಿಮಾನಾ?

  'ಭಾಮಾ ಕಲಾಪಂ' ಚಿತ್ರದ ಬಳಿಕ ಹೆಚ್ಚಿದ ಸಂಭಾವನೆ!

  'ಭಾಮಾ ಕಲಾಪಂ' ಚಿತ್ರದ ಬಳಿಕ ಹೆಚ್ಚಿದ ಸಂಭಾವನೆ!

  ನಟಿ ಪ್ರಿಯಾಮಣಿ ಅಭಿನಯದ 'ಭಾಮಾ ಕಲಾಪಂ' ಚಿತ್ರದ ರಿಲೀಸ್ ಆಗಿದೆ. ಈ ಚಿತ್ರ ಒಟಿಟಿಯಲ್ಲಿ ತೆರೆಕಂಡಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಈ ಚಿತ್ರದ ಮೂಕ ನಟಿ ಪ್ರಿಯಾಮಣಿ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಮಣಿ ಗೃಹಿಣಿಯ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ಭಾಮಾ ಅಡುಗೆ ಮಾಡುವುದರಲ್ಲಿ ಸಿಕ್ಕಾಪಟ್ಟೆ ಫೇಮಸ್. ಆಕೆ ತಮ್ಮ ಯುಟ್ಯೂಬ್ ಚಾನಲ್ ಮೂಲಕ ಅಡುಗೆ ಮಾಡುವುದರಲ್ಲಿ ಬ್ಯುಸಿ ಆದರೆ ಇದ್ದಕ್ಕಿದ್ದ ಹಾಗೆ ಒಂದು ಇಕ್ಕಟ್ಟಿಗೆ ಸಿಲುಕಿ ಬಿಡುತ್ತಾಳೆ. ಹೀಗೆ ಸಿನಿಮಾ ಕತೆ ಸಾಗುತ್ತೆ. ಪ್ರಿಯಾಮಣಿ ಈ ಪಾತ್ರದ ಮೂಲಕ ವಿಭಿನ್ನವಾಗಿ ಗಮನ ಸೆಳೆದಿದ್ದಾರೆ. ಈ ಚಿತ್ರದ ಬಳಿಕ ಈಗ ಪ್ರಿಯಾಮಣಿ ಸಂಭಾವನೆ ಹೆಚ್ಚಿಸಿಕೊಂಡಿದ್ದಾರಂತೆ.

  1.5 ಲಕ್ಷದಿಂದ 4 ಲಕ್ಷಕ್ಕೆ ಸಂಭಾವನೆ ಹೆಚ್ಚಳ!

  1.5 ಲಕ್ಷದಿಂದ 4 ಲಕ್ಷಕ್ಕೆ ಸಂಭಾವನೆ ಹೆಚ್ಚಳ!

  ನಟಿ ಪ್ರಿಯಾಮಣಿ ಅವರು ತಮ್ಮ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಲಿದೆ. ಪ್ರಿಯಾಮಣಿ ಅವರು ಈಗ ತಮ್ಮ ಸಂಭಾವನೆಯನ್ನು 4 ಲಕ್ಷಕ್ಕೆ ಹೆಚ್ಚಳ ಮಾಡಿಕೊಂಡಿದ್ದಾರಂತೆ. ಅಂದರೆ ಅವರ ಸಂಭಾವನೆ ಇಷ್ಟೇನಾ ಅಂತ ಅಚ್ಚರಿ ಪಡಬೇಡಿ. ಯಾಕೆಂದರೆ ಇದು ಅವರ ಒಂದು ದಿನದ ಸಂಭಾವನೆ. ಈ ಮೊದಲು ಪ್ರಿಯಾಮಣಿ ಅವರು ಒಂದು ದಿನಕ್ಕೆ 1.5 ಲಕ್ಷ ಸಂಭಾವನೆ ಪಡೆಯುತ್ತಿದ್ದರಂತೆ. ಈಗ ದಿನಕ್ಕೆ 3 ರಿಂದ 4 ಲಕ್ಷ ರೂ ಸಂಭಾವನೆ ಪಡೆದುಕೊಳ್ಳುತ್ತಾರಂತೆ. ಇದಕ್ಕೆ ಕಾರಣ ಆಗಿರುವುದು 'ಭಾಮಾ ಕಲಾಪಂ' ಸಿನಿಮಾ.

  ನಟರ ಸಂಭಾವನೆ ವಿರುದ್ಧ ಗುಡುಗಿದ್ದ ಪ್ರಿಯಾಮಣಿ!

  ನಟರ ಸಂಭಾವನೆ ವಿರುದ್ಧ ಗುಡುಗಿದ್ದ ಪ್ರಿಯಾಮಣಿ!

  ಒಂದು ಸಿನಿಮಾ ಅಂತ ಬಂದಾಗ ಸಹಜವಾಗಿ ನಾಯಕರಿಗೆ ಹೆಚ್ಚಿನ ಸಂಭಾವನೆ ನೀಡಲಾಗುತ್ತದೆ. ಆದರೆ ನಾಯಕಿಯರಿಗೆ ನಾಯಕ ನಟರಿಗಿಂದತೂ ಅತಿ ಕಡಿಮೆ ಸಂಭಾನೆ ನೀಡಲಾಗುತ್ತದೆ. ಈ ಬಗ್ಗೆ ಪ್ರಿಯಾಮಣಿ ಈ ಹಿಂದೆ ಮಾತನಾಡಿದ್ದರು. "ಸಿನಿಮಾರಂಗದಲ್ಲಿ ಸಂಭಾವನೆಯ ವಿಚಾರದಲ್ಲಿ ತಾರತಮ್ಯ ನಡೆಯುತ್ತದೆ. ನಾಯಕ ನಟರಿಗೆ ಅತಿ ಹೆಚ್ಚು ಸಂಭಾವನೆ ನೀಡಲಾಗುತ್ತದೆ. ಅದರೆ ನಟಿಯರಿಗೆ ಕಡಿಮೆ ಸಂಭಾವನೆ ಕೊಡಲಾಗುತ್ತದೆ. ನಟಿಯರು ಕೂಡ ಸಿನಿಮಾ ಯಶಸ್ಸಿಗೆ ಕಾರಣ ಆಗಿರುತ್ತಾರೆ. ಸಿನಿಮಾ ಗೆದ್ದರೆ ಅದರಿಂದ ನಟಿಯರಿಗೆ ಯಾವುದೇ ಲಾಭ ಬರುವುದಿಲ್ಲ. ಅದು ಕೂಡ ನಟರ ಪಾಲಾಗುತ್ತದೆ." ಎಂದು ಹೇಳಿದ್ದರು.

  ಪ್ರಿಯಾಮಣಿ ಕೈಯಲ್ಲಿ ಸಾಲು ಸಾಲು ಸಿನಿಮಾಗಳು!

  ಪ್ರಿಯಾಮಣಿ ಕೈಯಲ್ಲಿ ಸಾಲು ಸಾಲು ಸಿನಿಮಾಗಳು!

  ಕೆಲವು ದಿನಗಳು ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದ ಪ್ರಿಯಾಮಣಿ, ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿ ಆಗಿದ್ದಾರೆ. ರಾಣ ದಗ್ಗುಬಾಟಿ ಜೊತೆಗಿನ 'ವಿರಾಟ ಪರ್ವಂ', 'ಮೈದಾನ್' ಸಿನಿಮಾಗಳೂ ರಿಲೀಸ್‌ಗೆ ರೆಡಿ ಇದೆ. ಇವು ಬಿಟ್ಟರೆ, 'ಡಾಕ್ಟರ್ 56', 'ಕೊಟೇಷನ್ ಗ್ಯಾಂಗ್', ಕನ್ನಡದ 'ಕಾಯಿಮಾರಾ', ಮತ್ತು ಇನ್ನು ಹೆಸರಿಡದ ಅಟ್ಲಿ ಸಿನಿಮಾದಲ್ಲಿ ಪ್ರಿಯಾಮಣಿ ಬ್ಯೂಸಿ ಇದ್ದಾರೆ.

  English summary
  Priyamani Hike Her Remuneration After Success Of Bhama Kalapam
  Tuesday, February 15, 2022, 15:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X