»   » ಜಂಬದ ಕೋಳಿಗೆ ಕೊಕ್ ಪ್ರಿಯಾಮಣಿ 'ನಾಟಿಕೋಳಿ'

ಜಂಬದ ಕೋಳಿಗೆ ಕೊಕ್ ಪ್ರಿಯಾಮಣಿ 'ನಾಟಿಕೋಳಿ'

Posted By: ಉದಯರವಿ
Subscribe to Filmibeat Kannada

ಚಿತ್ರದ ಹೆಸರೇ 'ನಾಟಿಕೋಳಿ' ಇನ್ನು ಕೋಳಿ ಜಗಳ ಇರದಿರಲು ಸಾಧ್ಯವೇ? ನಿರ್ದೇಶಕ ಶ್ರೀನಿವಾಸರಾಜು ಚಿತ್ರವನ್ನೇನೋ ಭರ್ಜರಿಯಾಗಿ ಆರಂಭಿಸಿದರು. ಆದರೆ ಆರಂಭದಲ್ಲೇ ಕೋಳಿ ಜಗಳ ಶುರುವಾಗಿ ಈ ಪ್ರಾಜೆಕ್ಟ್ ನಿಂದ ರಾಗಿಣಿ ದ್ವಿವೇದಿಯನ್ನು ಕೈಬಿಡಲಾಗಿದೆ.

ನಾಟಿಕೋಳಿ ಚಿತ್ರದ ಫೋಟೋಶೂಟ್ ನಲ್ಲಿ ರಾಗಿಣಿ ಬಾಯ್ ಫ್ರೆಂಡ್ ಶ್ರೀನಿವಾಸರಾಜು ಮೇಲೆ ಕೈಮಾಡಿದ್ದ ಪರಿಣಾಮ ರಾಗಿಣಿಗೆ ಕೊಕ್ ನೀಡಲಾಗಿದೆ. ಇದೀಗ ಹೊಸ ನಾಟಿಕೋಳಿ ಆಗಮನವಾಗಿದೆ. ಅವರು ಬೇರಾರು ಅಲ್ಲ ಪ್ರಿಯಾಮಣಿ. [ರಾಗಿಣಿ ದ್ವಿವೇದಿ 'ನಾಟಿಕೋಳಿ' ಮೇಲೆ ಎರಗಿದ 'ಹುಲಿ']

Priyamani to replace Ragini in 'Nati Koli'

ಇದಿಷ್ಟೇ ಅಲ್ಲದೆ ನಾಟಿಕೋಳಿ ಚಿತ್ರದ ನಿರ್ಮಾಪಕರಾದ ವೆಂಕಟ್ ಅವರು ರಾಗಿಣಿಗೆ ಕೊಟ್ಟಿದ್ದ ರು.10 ಲಕ್ಷ ಮುಂಗಡ ಹಣವನ್ನು ವಾಪಸ್ ಮಾಡುವಂತೆ ಫಿಲಂ ಚೇಂಬರ್ ಮೆಟ್ಟಿಲೇರಿದ್ದಾರೆ. ರಾಗಿಣಿ ಬಾಯ್ ಫ್ರೆಂಡ್ ನಿರ್ಮಾಪಕ ಹಾಗೂ ನಿರ್ದೇಶಕರ ಮೇಲೆ ಕೈಮಾಡಿದಾಗಲೂ ರಾಗಿಣಿ ಮೌನ ವಹಿಸಿದ್ದು, ಅವರ ವಿರುದ್ಧವೇ ಮಾತನಾಡಿದ್ದು ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.

ಶ್ರೀನಿವಾಸರಾಜು ಆಕ್ಷನ್ ಕಟ್ ಹೇಳುತ್ತಿರುವ ನಾಟಿಕೋಳಿ ಚಿತ್ರದ ಹಾಟ್ ಫೋಟೋ ಶೂಟ್ ವಿಲ್ಸನ್ ಗಾರ್ಡನ್ ಸ್ಟುಡಿಯೋದಲ್ಲಿ ಸದ್ದಿಲ್ಲದಂತೆ ನಡೆಯುತ್ತಿತ್ತು. ಅಲ್ಲಿಗೆ ಏಕಾಏಕಿ ಆಗಮಿಸಿದ 'ಹುಲಿ' ಚಿತ್ರದ ನಿರ್ಮಾಪಕ ಶಿವಪ್ರಕಾಶ್ ಅವರು ಶ್ರೀನಿವಾಸರಾಜು ಹಾಗೂ ಚಿತ್ರದ ನಿರ್ಮಾಪಕ ವೆಂಕಟ್ ಮೇಲೆ ಹಲ್ಲೆ ಮಾಡಿದ್ದಾರೆ.

ನಮ್ಮ ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಅವರಿಗೆ 'ರಾಗಿಣಿ ನನ್ನ ಗರ್ಲ್​ಫ್ರೆಂಡ್, ಈ ಚಿತ್ರವನ್ನು ನಿರ್ದೇಶಿಸಿದ್ರೆ ಕೊಲೆ ಮಾಡುತ್ತೇನೆ' ಎಂದು ಅವರ ಕುತ್ತಿಗೆಗೆ ಕೈ ಹಾಕಿರುತ್ತಾನೆ. ತಡೆಯಲು ಬಂದ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ನನ್ನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುತ್ತಾನೆ ಎಂದು ನಿರ್ಮಾಪಕ ವೆಂಕಟ್​ ದೂರು ನೀಡಿದ್ದನ್ನು ಸ್ಮರಿಸಬಹುದು.

English summary
Actress Ragini Dwivedi drop out of the 'Nati Koli' project and Priyamani to replace Ragini. Recently there were clashes with actress Ragini and the makers of the upcoming Kannada movie 'Nati Koli'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada