ಕನ್ನಡದಲ್ಲಿ ನಟಿಸಿದ್ದ ಈ ನಟಿ 'RRR' ಸಿನಿಮಾದಲ್ಲಿ
ನಿರ್ದೇಶಕ ರಾಜಮೌಳಿ 'RRR' ಸಿನಿಮಾದ ತಯಾರಿಯಲ್ಲಿ ಇದ್ದಾರೆ. ಈ ಸಿನಿಮಾದ ಚಿತ್ರೀಕರಣ ಇತ್ತೀಚಿಗಷ್ಟೆ ಶುರುವಾಗಿದೆ. ಈ ಚಿತ್ರಕ್ಕೆ ಈಗ ಒಬ್ಬ ನಾಯಕಿಯ ಆಯ್ಕೆಯಾಗಿದೆ.
ಸೌತ್ ಸಿನಿತಾರೆ ಪ್ರಿಯಾಮಣಿ ಈಗ 'ಆರ್ ಆರ್ ಆರ್' ಚಿತ್ರದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಈ ಹಿಂದೆ ರಾಜಮೌಳಿ ಅವರ 'ಯಮದೊಂಗ' ಸಿನಿಮಾದಲ್ಲಿಯೂ ಪ್ರಿಯಾಮಣಿ ಕಾಣಿಸಿಕೊಂಡಿದ್ದರು. ಈಗ ಈ ಹೊಸ ಸಿನಿಮಾದಲ್ಲಿಯೂ ಅವರಿಗೆ ಒಂದು ಒಳ್ಳೆಯ ಪಾತ್ರವನ್ನು ನೀಡಿದ್ದಾರಂತೆ.

'ಆರ್ ಆರ್ ಆರ್' ಟಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾವಾಗಿದೆ. ರಾಮ್ ಚರಣ್ ತೇಜ ಹಾಗೂ ಜೂನಿಯರ್ ಎನ್ ಟಿ ಆರ್ ಕಾಂಬಿನೇಷನ್ ನ ಮಹಾ ಸಿನಿಮಾವಾಗಿದೆ. ಇವರಿಬ್ಬರ ಜೊತೆ ಪ್ರಿಯಾಮಣಿ ತೆರೆ ಹಂಚಿಕೊಳುತ್ತಿದ್ದಾರೆ. 300 ಕೋಟಿ ಬಜೆಟ್ ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

ಸದ್ಯಕ್ಕೆ, ಕನ್ನಡದಲ್ಲಿ ಪ್ರಿಯಾಮಣಿ ಹೆಚ್ಚು ಸಿನಿಮಾ ಮಾಡುತ್ತಿದ್ದಾರೆ. ಕಳೆದ ವರ್ಷ 'ಧ್ವಜ' ಚಿತ್ರದಲ್ಲಿ ಪ್ರಿಯಾ ಅಭಿನಯಿಸಿದ್ದರು.
More from Filmibeat
English summary
Actress Priyamani will be a part of Rrajamouli's 'RRR' movie.


Click it and Unblock the Notifications











