For Quick Alerts
  ALLOW NOTIFICATIONS  
  For Daily Alerts

  ಪುನೀತ್ - ಸಂತೋಷ್ ಹೊಸ ಚಿತ್ರದ ಟೈಟಲ್ 'ಪರಶುರಾಮ'!?

  By Naveen
  |
  ಅಪ್ಪು ಹೊಸ ಸಿನಿಮಾದ ಟೈಟಲ್ ಗೊತ್ತಾಗೋಯ್ತು..! | Filmibeat Kannada

  ನಟ ಪುನೀತ್ ರಾಜ್ ಕುಮಾರ್ 'ರಾಜಕುಮಾರ' ಚಿತ್ರದ ನಂತರ ಬೇರೆ ಬೇರೆ ಸಿನಿಮಾಗಳಲ್ಲಿ ತೊಡಗಿದ್ದಾರೆ. ಇತ್ತ ಆ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತೆ ಪುನೀತ್ ಗಾಗಿ ಒಂದು ಕಥೆ ಸಿದ್ಧ ಮಾಡಿದ್ದಾರೆ.

  ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಶನ್ ಚಿತ್ರದ ಸುದ್ದಿ ಈ ಹಿಂದೆಯೇ ಹರಿದಾಡಿತ್ತು. ಜೊತೆಗೆ ಸಿನಿಮಾದ ಟೈಟಲ್ ಏನು ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಆದರೆ, ಇದೀಗ ಆ ಸಿನಿಮಾದ ಟೈಟಲ್ 'ಪರಶುರಾಮ' ಇರಬಹುದು ಎಂಬ ಪ್ರಶ್ನೆ ಮೂಡಿದೆ.

  ಸಂತೋಷ್-ಪುನೀತ್ ಚಿತ್ರದ ಟೈಟಲ್ ಫಿಕ್ಸ್ ಅಂತೆ ಸಂತೋಷ್-ಪುನೀತ್ ಚಿತ್ರದ ಟೈಟಲ್ ಫಿಕ್ಸ್ ಅಂತೆ

  ಅಂದಹಾಗೆ, ಪುನೀತ್ - ಸಂತೋಷ್ ಹೊಸ ಚಿತ್ರದ ಟೈಟೆಲ್ ಬಗ್ಗೆ ಕೆಲ ಮಾಹಿತಿ ಮುಂದಿದೆ ಓದಿ...

  ಗಣೇಶ ಹಬ್ಬಕ್ಕೆ ಟೈಟಲ್ ರಿಲೀಸ್

  ಗಣೇಶ ಹಬ್ಬಕ್ಕೆ ಟೈಟಲ್ ರಿಲೀಸ್

  ನಿರ್ದೇಶಕ ಸಂತೋಷ್ ಆನಂದ್ ರಾಮ್ ತಮ್ಮ ಹೊಸ ಸಿನಿಮಾದ ಟೈಟಲ್ ಅನ್ನು ಇದೇ ಗಣೇಶನ ಹಬ್ಬಕ್ಕೆ ರಿಲೀಸ್ ಮಾಡಲಿದ್ದಾರಂತೆ. ಹಬ್ಬದ ಖುಷಿಯಲ್ಲಿ ಪುನೀತ್ ಚಿತ್ರದ ಹೆಸರನ್ನು ಸಹ ಘೋಷಣೆ ಆಗಲಿದೆ. ಆದರೆ, ಇದೀಗ ಈ ಸಿನಿಮಾಗೆ 'ಪರಶುರಾಮ' ಎಂಬ ಹೆಸರು ಇಡಬಹುದು ಎಂಬ ಮಾತಿದೆ.

  ಪುನೀತ್ ಆಗ್ತಾರ 'ಪರಶುರಾಮ'

  ಪುನೀತ್ ಆಗ್ತಾರ 'ಪರಶುರಾಮ'

  ಪುನೀತ್ ಜೊತೆ ಮಾಡುತ್ತಿರುವ ಹೊಸ ಸಿನಿಮಾಗೆ ಸಂತೋಷ್ ಆನಂದ್ ರಾಮ್ ಮತ್ತೆ ರಾಜ್ ಕುಮಾರ್ ಅವರ ಸಿನಿಮಾದ ಹೆಸರನ್ನು ಇಡುವ ಸಾಧ್ಯತೆ ಹೆಚ್ಚಿದೆ. ರಾಜ್ ಕುಮಾರ್ ಅವರ 205ನೇ ಸಿನಿಮಾ 'ಪರಶುರಾಮ' ಚಿತ್ರದ ಹೆಸರಿನಲ್ಲಿ ಮತ್ತೆ ಸಂತೋಷ್ ಸಿನಿಮಾ ಮಾಡಲಿದ್ದಾರಂತೆ. ಮತ್ತೊಂದು ದೊಡ್ಡ ವಿಶೇಷ ಅಂದರೆ, ಆಗ 'ಪರಶುರಾಮ' ಸಿನಿಮಾದಲ್ಲಿ ಪುನೀತ್ ಬಾಲನಟನಾಗಿ ನಟಿಸಿದ್ದರು.

  ಮತ್ತೊಮ್ಮೆ ಅಪ್ಪುಗೆ ಆಕ್ಷನ್ ಕಟ್ : ರಾಜಮಾರ್ಗದಲ್ಲಿ ಸಂತೋಷ್ ಆನಂದ್ ರಾಮ್ ಮತ್ತೊಮ್ಮೆ ಅಪ್ಪುಗೆ ಆಕ್ಷನ್ ಕಟ್ : ರಾಜಮಾರ್ಗದಲ್ಲಿ ಸಂತೋಷ್ ಆನಂದ್ ರಾಮ್

  ಸಮಾಜಿಕ ಸಮಸ್ಯೆಯ ಸಿನಿಮಾ

  ಸಮಾಜಿಕ ಸಮಸ್ಯೆಯ ಸಿನಿಮಾ

  ಸಂತೋಷ್ ಸಮಾಜಿಕ ಸಮಸ್ಯೆಯ ಮೇಲೆ ಇರುವ ಒಂದು ಕಥೆ ಮಾಡಿಕೊಂಡಿದ್ದಾರಂತೆ. ಈ ಬಾರಿ ಅವರು ಸಮಾಜದಲ್ಲಿ ನಡೆಯುತ್ತಿರುವ ಒಂದು ವಿಷಯವನ್ನು ತೆರೆ ಮೇಲೆ ತೋರಿಸಲಿದ್ದಾರೆ. ಆ ಕಾರಣ ಈ ಕಥೆಗೆ 'ಪರಶುರಾಮ' ಶೀರ್ಷಿಕೆ ಸೂಕ್ತ ಆಗಲಿದೆಯಂತೆ. ಈ ಹಿಂದೆ ಈ ಚಿತ್ರಕ್ಕೆ 'ದೇವತ ಮನುಷ್ಯ' ಎಂಬ ಹೆಸರು ಸಹ ಕೇಳಿ ಬಂದಿತ್ತು.

  ಪುನೀತ್ ಪಾತ್ರದ ಬಗ್ಗೆ ನಿರೀಕ್ಷೆ

  ಪುನೀತ್ ಪಾತ್ರದ ಬಗ್ಗೆ ನಿರೀಕ್ಷೆ

  'ಪರುಶುರಾಮ' ಸಿನಿಮಾದಲ್ಲಿ ರಾಜ್ ಸೈನಿಕನ ಪಾತ್ರ ಮಾಡಿದ್ದು, 1989ರಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಸೋ, ಈಗ ಪುನೀತ್ ರಾಜ್ ಕುಮಾರ್ ಈ ಸಿನಿಮಾದಲ್ಲಿ ಯಾವ ಪಾತ್ರ ಮಾಡುತ್ತಾರೆ ಎಂಬ ನಿರೀಕ್ಷೆ ಹೆಚ್ಚಾಗಿದೆ. ಇನ್ನು 'ರಾಜಕುಮಾರ' ಸಿನಿಮಾಗೆ ಬಂಡವಾಳ ಹಾಕಿದ್ದ ಹೊಂಬಾಳೆ ಪ್ರೊಡಕ್ಷನ್ಸ್ ನಲ್ಲಿ ಈ ಚಿತ್ರ ಸಹ ನಿರ್ಮಾಣ ಆಗಲಿದೆ. ಸದ್ಯ ಪುನೀತ್ 'ನಟ ಸಾರ್ವಭೌಮ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ.

  English summary
  Kannada actor Puneeth Rajkumar and Santhosh Ananddram's new movie title likely to be 'Parashurama'. The movie will producing by Hombale Films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X