»   » ಪುನೀತ್ 'ಪವರ್ ಸ್ಟಾರ್' ಟೈಟಲ್ ಗೆ ರು.10 ಲಕ್ಷ

ಪುನೀತ್ 'ಪವರ್ ಸ್ಟಾರ್' ಟೈಟಲ್ ಗೆ ರು.10 ಲಕ್ಷ

By: ಜೀವನರಸಿಕ
Subscribe to Filmibeat Kannada

ಪವರ್ ಸ್ಟಾರ್ ಸಿನಿಮಾ ಟೈಟಲ್ ವಿವಾದ ಎದುರಿಸಿ ಸದ್ಯಕ್ಕೆ ಸೈಲೆಂಟಾಗಿದೆ. ಆದರೆ ಒಳಗೊಳಗೆ ಇನ್ನೂ ಬೆಂಕಿ ಆರಿಲ್ಲ. ಪುನೀತ್ ಅಭಿನಯದ ಪವರ್ ಸ್ಟಾರ್ ಚಿತ್ರತಂಡ ಸಿನಿಮಾ ಶೂಟಿಂಗ್ ಮುಗಿಸ್ತಿದ್ರು ಟೈಟಲ್ ಮಾತ್ರ ಬದಲಾಗ್ತಾನೇ ಇತ್ತು.

ಅಂದುಕೊಂಡ ಹಾಗೆ ಅಶ್ವತ್ಥಾಮ, ರಾಜಕುಮಾರ ಟೈಟಲ್ ಗಳೂ ಓಕೆ ಆಗಲಿಲ್ಲ. ಕೊನೆಗೆ ಚಿತ್ರತಂಡ ಪವರ್ ಅನ್ನೋ ಟೈಟಲ್ ಗೆ ವಾಣಿಜ್ಯ ಮಂಡಳಿಯ ಮುಂದೆ ಬಂದು ನಿಲ್ತು. ಆದ್ರೆ ಅದಾಗಲೇ ಪವರ್ ಅನ್ನೋ ಟೈಟಲ್ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಆಗಿತ್ತು. [ಬಳ್ಳಾರಿಯಲ್ಲಿ ಪುನೀತ್ 'ಪವರ್'ಗೆ ಮಹೇಶ್ ಕರೆಂಟ್]


ವಾಣಿಜ್ಯ ಮಂಡಳಿ ಪವರ್ ಸ್ಟಾರ್ ಅನ್ನೋ ಟೈಟಲ್ ಓಕೆ ಮಾಡ್ತು. ಇದರಿಂದ ನಮ್ಮ ಸಿನಿಮಾಗೆ ಹೊಡೆತ ಬೀಳುತ್ತೆ ಅಂತ 'ಪವರ್' ಅನ್ನೋ ಚಿತ್ರ ಮಾಡ್ತಿದ್ದ ಚಿತ್ರತಂಡ ರು.10 ಲಕ್ಷಕ್ಕೆ ಬೇಡಿಕೆ ಇಟ್ಟಿತ್ತಂತೆ. ಕೊನೆಗೆ ಮೂರು ಲಕ್ಷ ಕೊಡೋದಕ್ಕೆ ಪುನೀತ್ ಟೀಂ ಒಪ್ಪಿದ್ರೂ 'ಪವರ್' ಸಿನಿಮಾ ತಂಡ ಒಪ್ಪಲಿಲ್ಲವಂತೆ.

ಸೋ ಈ ವಿವಾದ ಈಗಲೂ ಹಸಿರಾಗಿದೆ. ಆದರೆ ಉಸಿರೆತ್ತೋರಿಲ್ಲ. ಎತ್ತಿದ್ರೆ ಗೊತ್ತ(ತ್ತಿ)ಲ್ಲ ಅಂತಿದೆ. ಗಾಂಧಿನಗರದ ಗಲ್ಲಿ ಗಾಸಿಪ್. ಅಂದಹಾಗೆ ಪವರ್ ಸ್ಟಾರ್ ಚಿತ್ರ ತೆಲುಗಿನ ಯಶಸ್ವಿ ಚಿತ್ರ ದೂಕುಡು ರೀಮೇಕ್ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಮೂಲ ಚಿತ್ರದಲ್ಲಿ ಮಹೇಶ್ ಬಾಬು, ಸಮಂತಾ ಮುಖ್ಯಭೂಮಿಕೆಯಲ್ಲಿದ್ದಾರೆ. 14 ರೀಲ್ಸ್ ಎಂಟರ್ ಟೈನ್ ಮೆಂಟ್ ಪ್ರೈ ಲಿ ಹಾಗೂ ಕೊಲ್ಲ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಗೋಪಿ ಅಚಂಟ, ರಾಮ್ ಅಚಂಟ ಹಾಗೂ ಅನಿಲ್ ಸುಂಕರ ನಿರ್ಮಿಸುತ್ತಿದ್ದಾರೆ.

English summary
Kannada movie 'Power Star' title controversy still facing trouble. If Sandalwood sources to be belived, the movie title got for giving Rs 10 lakh. Power Star Puneeth Rajkumar and Trisha Krishnan are in lead and the movie directed by K Madesh.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada