Just In
- 31 min ago
ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಯಶ್, ಸುದೀಪ್ ಸುಮಲತಾ; ಫೋಟೋ ವೈರಲ್
- 1 hr ago
ಸುದೀಪ್ ಗೆ ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು? ಇಲ್ಲಿದೆ ಮಾಹಿತಿ
- 2 hrs ago
ಕಂಗನಾ ಮೇಲೆ ಕಥೆ ಕದ್ದ ಆರೋಪ; 72 ಗಂಟೆಯೊಳಗೆ ಉತ್ತರ ನೀಡಬೇಕೆಂದ ಲೇಖಕ
- 3 hrs ago
ಸೋನು ಸೂದ್ ಟೈಲರ್ ಶಾಪ್: ರಸ್ತೆ ಬದಿ ಕುಳಿತು ಬಟ್ಟೆ ಹೊಲಿಯುತ್ತಿರುವ ರಿಯಲ್ ಹೀರೋ
Don't Miss!
- News
ಪತ್ರ ಬರೆದಿಟ್ಟು ಅಭಿಮಾನಿ ಆತ್ಮಹತ್ಯೆ; ಅಂತ್ಯ ಸಂಸ್ಕಾರಕ್ಕೆ ಬಂದ ಎಚ್ಡಿಕೆ
- Sports
ಭಾರತ vs ಆಸ್ಟ್ರೇಲಿಯಾ: ಬ್ರಿಸ್ಬೇನ್ನಲ್ಲಿ ವಾಖಲೆಯ ಜೊತೆಯಾಟವಾಡಿದ ಶಾರ್ದೂಲ್- ಸುಂದರ್
- Finance
ಈ 6 ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ 1,13,018.94 ಕೋಟಿ ರು. ಹೆಚ್ಚಳ
- Automobiles
ಬೈಕ್ ಸವಾರರೇ ಎಚ್ಚರ: ರೇರ್ ವೀವ್ ಮಿರರ್ ಬಳಸದಿದ್ದರೂ ಬೀಳಲಿದೆ ದಂಡ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಯುವರತ್ನ' ಬಿಡುಗಡೆಗೆ ಬಗ್ಗೆ ಬಿಗ್ ನ್ಯೂಸ್, ಅಪ್ಪು ಫ್ಯಾನ್ಸ್ ರೆಡಿಯಾಗಿ?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಬಿಡುಗಡೆಗಾಗಿ ದೊಡ್ಮನೆ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಎದುರು ನೋಡುತ್ತಿದ್ದಾರೆ. ನಿರ್ಮಾಪಕ ಅಥವಾ ನಿರ್ದೇಶಕರು ಬಿಡುಗಡೆ ದಿನಾಂಕ ಘೋಷಿಸಿಬಿಟ್ಟರೆ ಸಾಕು ಎಂದು ಹಬ್ಬ ಆಚರಿಸೋಕೆ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಇದೀಗ, ಯುವರತ್ನ ಸಿನಿಮಾ ಬಿಡುಗಡೆ ಬಗ್ಗೆ ಬಿಗ್ ನ್ಯೂಸ್‌ವೊಂದು ಹೊರಬಿದ್ದಿದೆ. ಎಲ್ಲ ಪ್ಲಾನ್ ಪ್ರಕಾರ ಆದರೆ ಜನವರಿ ತಿಂಗಳಲ್ಲೇ ಯುವರತ್ನ ಚಿತ್ರಮಂದಿರಕ್ಕೆ ಬರಲಿದೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ. ಮುಂದೆ ಓದಿ...

ಜನವರಿ 22ಕ್ಕೆ ಯುವರತ್ನ!
2020ನೇ ವರ್ಷ ಮುಗಿಲಿ, ಚಿತ್ರಮಂದಿರಗಳಲ್ಲಿ ಶೇಕಡಾ 100 ರಷ್ಟು ಅವಕಾಶ ನೀಡಲಿ ಎಂದು ಕಾಯುತ್ತಿರುವ ದೊಡ್ಡ ಸಿನಿಮಾಗಳ ಪೈಕಿ ಯುವರತ್ನ ಚಿತ್ರಮಂದಿರಕ್ಕೆ ಬರಲು ನಿರ್ಧರಿಸಿದಂತಿದೆ. ಸದ್ಯದ ಯೋಜನೆ ಪ್ರಕಾರ ಸಂಕ್ರಾಂತಿ ಹಬ್ಬ ಮುಗಿದ ಒಂದು ವಾರಕ್ಕೆ ಪುನೀತ್ ಹೊಸ ಸಿನಿಮಾ ತೆರೆಗೆ ಬರಲಿದೆಯಂತೆ. ಅಂದ್ರೆ, ಜನವರಿ 22ಕ್ಕೆ ಬಿಡುಗಡೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ ಎಂಬ ಸುದ್ದಿ ಚರ್ಚೆಯಾಗ್ತಿದೆ.
ಯುವರತ್ನ 2ನೇ ಹಾಡಿನ ಬಗ್ಗೆ ಮಾಹಿತಿ ನೀಡಿದ ಎಸ್ ಎಸ್ ತಮನ್

ಎರಡನೇ ಹಾಡಿನ ನಿರೀಕ್ಷೆ
ಇತ್ತೀಚಿಗಷ್ಟೆ ಯುವರತ್ನ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಪವರ್ ಆಫ್ ಯೂತ್ ಸಾಂಗ್ ಕೇಳಿ ಚಿತ್ರಪ್ರೇಮಿಗಳು ಥ್ರಿಲ್ ಆಗಿದ್ದಾರೆ. ಇದೀಗ, ಚಿತ್ರದ ಎರಡನೇ ಹಾಡು ಊರಿಗೊಬ್ಬ ರಾಜ ಸರದಿ. ಈ ಹಾಡನ್ನು ಸ್ವತಃ ಪುನೀತ್ ಹಾಡಿದ್ದು ಸದ್ಯದಲ್ಲೇ ಎರಡನೇ ಹಾಡು ರಿಲೀಸ್ ಆಗಲಿದೆ.

ಪೊಗರು ರಿಲೀಸ್ ಸಿದ್ಧತೆ?
ಹಾಗ್ನೋಡಿದ್ರೆ, ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಬೇಕಿದೆ. ಕ್ರಿಸ್‌ಮಸ್ ಹಬ್ಬವನ್ನು ಪೊಗರು ಚಿತ್ರತಂಡ ಟಾರ್ಗೆಟ್ ಮಾಡಿತ್ತು. ಆದ್ರೆ, ರಾಬರ್ಟ್ ಚಿತ್ರದ ಜೊತೆ ಡೇಟ್ ಕ್ಲಾಶ್ ಆಗಬಹುದು ಎಂಬ ಆಲೋಚನೆಯಲ್ಲಿ ಕಾಯುತ್ತಿದೆ. ಇದೀಗ, ಜನವರಿ ಆರಂಭದಲ್ಲೇ ಪೊಗರು ಎಂಟ್ರಿ ಕೊಡೋಕೆ ಸಜ್ಜಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
'ಪವರ್ ಆಫ್ ಯೂತ್': ಯುವರತ್ನ ಸಿನಿಮಾದ ಪವರ್ಫುಲ್ ಹಾಡು ಬಿಡುಗಡೆ

2020ನೇ ವರ್ಷದ ದೊಡ್ಡ ಚಿತ್ರಗಳು
ಯುವರತ್ನ ಹಾಗೂ ಪೊಗರು ಚಿತ್ರದ ಜೊತೆ ದರ್ಶನ್ ನಟನೆಯ ರಾಬರ್ಟ್, ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3, ದುನಿಯಾ ವಿಜಯ್ ನಟನೆ ಸಲಗ ಚಿತ್ರಗಳು ಸಹ ಬಿಡುಗಡೆಗೆ ತಯಾರಾಗಿದೆ. ಬಹುಶಃ ಒಂದು ದೊಡ್ಡ ಸಿನಿಮಾ ತೆರೆಕಂಡ್ರೆ ಅದರ ಓಪನಿಂಗ್ ನೋಡಿ ಉಳಿದ ಚಿತ್ರಗಳು ಪ್ರೇಕ್ಷಕರೆದುರು ಬರಲು ಧೈರ್ಯ ಮಾಡಲಿವೆ.