For Quick Alerts
  ALLOW NOTIFICATIONS  
  For Daily Alerts

  'ಯುವರತ್ನ' ಬಿಡುಗಡೆಗೆ ಬಗ್ಗೆ ಬಿಗ್ ನ್ಯೂಸ್, ಅಪ್ಪು ಫ್ಯಾನ್ಸ್ ರೆಡಿಯಾಗಿ?

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಬಿಡುಗಡೆಗಾಗಿ ದೊಡ್ಮನೆ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಎದುರು ನೋಡುತ್ತಿದ್ದಾರೆ. ನಿರ್ಮಾಪಕ ಅಥವಾ ನಿರ್ದೇಶಕರು ಬಿಡುಗಡೆ ದಿನಾಂಕ ಘೋಷಿಸಿಬಿಟ್ಟರೆ ಸಾಕು ಎಂದು ಹಬ್ಬ ಆಚರಿಸೋಕೆ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

  ಇದೀಗ, ಯುವರತ್ನ ಸಿನಿಮಾ ಬಿಡುಗಡೆ ಬಗ್ಗೆ ಬಿಗ್ ನ್ಯೂಸ್‌ವೊಂದು ಹೊರಬಿದ್ದಿದೆ. ಎಲ್ಲ ಪ್ಲಾನ್ ಪ್ರಕಾರ ಆದರೆ ಜನವರಿ ತಿಂಗಳಲ್ಲೇ ಯುವರತ್ನ ಚಿತ್ರಮಂದಿರಕ್ಕೆ ಬರಲಿದೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ. ಮುಂದೆ ಓದಿ...

  ಜನವರಿ 22ಕ್ಕೆ ಯುವರತ್ನ!

  ಜನವರಿ 22ಕ್ಕೆ ಯುವರತ್ನ!

  2020ನೇ ವರ್ಷ ಮುಗಿಲಿ, ಚಿತ್ರಮಂದಿರಗಳಲ್ಲಿ ಶೇಕಡಾ 100 ರಷ್ಟು ಅವಕಾಶ ನೀಡಲಿ ಎಂದು ಕಾಯುತ್ತಿರುವ ದೊಡ್ಡ ಸಿನಿಮಾಗಳ ಪೈಕಿ ಯುವರತ್ನ ಚಿತ್ರಮಂದಿರಕ್ಕೆ ಬರಲು ನಿರ್ಧರಿಸಿದಂತಿದೆ. ಸದ್ಯದ ಯೋಜನೆ ಪ್ರಕಾರ ಸಂಕ್ರಾಂತಿ ಹಬ್ಬ ಮುಗಿದ ಒಂದು ವಾರಕ್ಕೆ ಪುನೀತ್ ಹೊಸ ಸಿನಿಮಾ ತೆರೆಗೆ ಬರಲಿದೆಯಂತೆ. ಅಂದ್ರೆ, ಜನವರಿ 22ಕ್ಕೆ ಬಿಡುಗಡೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ ಎಂಬ ಸುದ್ದಿ ಚರ್ಚೆಯಾಗ್ತಿದೆ.

  ಯುವರತ್ನ 2ನೇ ಹಾಡಿನ ಬಗ್ಗೆ ಮಾಹಿತಿ ನೀಡಿದ ಎಸ್ ಎಸ್ ತಮನ್ಯುವರತ್ನ 2ನೇ ಹಾಡಿನ ಬಗ್ಗೆ ಮಾಹಿತಿ ನೀಡಿದ ಎಸ್ ಎಸ್ ತಮನ್

  ಎರಡನೇ ಹಾಡಿನ ನಿರೀಕ್ಷೆ

  ಎರಡನೇ ಹಾಡಿನ ನಿರೀಕ್ಷೆ

  ಇತ್ತೀಚಿಗಷ್ಟೆ ಯುವರತ್ನ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಪವರ್ ಆಫ್ ಯೂತ್ ಸಾಂಗ್ ಕೇಳಿ ಚಿತ್ರಪ್ರೇಮಿಗಳು ಥ್ರಿಲ್ ಆಗಿದ್ದಾರೆ. ಇದೀಗ, ಚಿತ್ರದ ಎರಡನೇ ಹಾಡು ಊರಿಗೊಬ್ಬ ರಾಜ ಸರದಿ. ಈ ಹಾಡನ್ನು ಸ್ವತಃ ಪುನೀತ್ ಹಾಡಿದ್ದು ಸದ್ಯದಲ್ಲೇ ಎರಡನೇ ಹಾಡು ರಿಲೀಸ್ ಆಗಲಿದೆ.

  ಪೊಗರು ರಿಲೀಸ್ ಸಿದ್ಧತೆ?

  ಪೊಗರು ರಿಲೀಸ್ ಸಿದ್ಧತೆ?

  ಹಾಗ್ನೋಡಿದ್ರೆ, ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಬೇಕಿದೆ. ಕ್ರಿಸ್‌ಮಸ್ ಹಬ್ಬವನ್ನು ಪೊಗರು ಚಿತ್ರತಂಡ ಟಾರ್ಗೆಟ್ ಮಾಡಿತ್ತು. ಆದ್ರೆ, ರಾಬರ್ಟ್ ಚಿತ್ರದ ಜೊತೆ ಡೇಟ್ ಕ್ಲಾಶ್ ಆಗಬಹುದು ಎಂಬ ಆಲೋಚನೆಯಲ್ಲಿ ಕಾಯುತ್ತಿದೆ. ಇದೀಗ, ಜನವರಿ ಆರಂಭದಲ್ಲೇ ಪೊಗರು ಎಂಟ್ರಿ ಕೊಡೋಕೆ ಸಜ್ಜಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

  'ಪವರ್ ಆಫ್ ಯೂತ್': ಯುವರತ್ನ ಸಿನಿಮಾದ ಪವರ್‌ಫುಲ್ ಹಾಡು ಬಿಡುಗಡೆ'ಪವರ್ ಆಫ್ ಯೂತ್': ಯುವರತ್ನ ಸಿನಿಮಾದ ಪವರ್‌ಫುಲ್ ಹಾಡು ಬಿಡುಗಡೆ

  ಅದು ನನಗೆ ಬಹಳ ಮುಖ್ಯವಾದ ದಿನ ಎಂದ ಶಕೀಲ | Shakeela | Filmibeat Kannada
  2020ನೇ ವರ್ಷದ ದೊಡ್ಡ ಚಿತ್ರಗಳು

  2020ನೇ ವರ್ಷದ ದೊಡ್ಡ ಚಿತ್ರಗಳು

  ಯುವರತ್ನ ಹಾಗೂ ಪೊಗರು ಚಿತ್ರದ ಜೊತೆ ದರ್ಶನ್ ನಟನೆಯ ರಾಬರ್ಟ್, ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3, ದುನಿಯಾ ವಿಜಯ್ ನಟನೆ ಸಲಗ ಚಿತ್ರಗಳು ಸಹ ಬಿಡುಗಡೆಗೆ ತಯಾರಾಗಿದೆ. ಬಹುಶಃ ಒಂದು ದೊಡ್ಡ ಸಿನಿಮಾ ತೆರೆಕಂಡ್ರೆ ಅದರ ಓಪನಿಂಗ್ ನೋಡಿ ಉಳಿದ ಚಿತ್ರಗಳು ಪ್ರೇಕ್ಷಕರೆದುರು ಬರಲು ಧೈರ್ಯ ಮಾಡಲಿವೆ.

  English summary
  Power star Puneeth Rajkumar's Yuvarathnaa Movie to Release on Jan 22, 2021?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X