Don't Miss!
- Automobiles
ಭಾರತದದಲ್ಲಿ ಟ್ರೆಂಡಿಂಗ್ನಲ್ಲಿರುವ ಜನಪ್ರಿಯ ಕಾರುಗಳು: ಇವುಗಳಿಗೆ ಸರಿಸಾಟಿಯೇ ಇಲ್ಲ..!
- News
ನನ್ನ ಯೋಗ್ಯತೆಗೆ ಮಿರಿದ ದೊಡ್ಡ ಗೌರವ ಕೇಂದ್ರ ಸರ್ಕಾರ ನೀಡಿದೆ: ಎಸ್.ಎಂ.ಕೃಷ್ಣ
- Sports
ಈ ಹಿಂದಿನಂತೆ ಈ ತಂಡ ಈಗ ಬಲಿಷ್ಠ ತಂಡವಲ್ಲ: ಆಕಾಶ್ ಚೋಪ್ರ ಹೇಳಿದ ಆ ತಂಡ ಯಾವುದು?
- Technology
ChatGPT ಬಳಕೆಯಿಂದ ಏನೆಲ್ಲಾ ಲಾಭ? ಏನೆಲ್ಲಾ ನಷ್ಟ?
- Lifestyle
Shani Asta 2023 : ಶನಿ ಅಸ್ತ 2023: ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಹಾಗೂ ಪರಿಹಾರ
- Finance
ಹಿಂಡೆನ್ಬರ್ಗ್ ವರದಿ ಎಫೆಕ್ಟ್: ಅದಾನಿ ಸ್ಟಾಕ್ ಶೇ.20ರಷ್ಟು ಕುಸಿತ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಬ್ಬಬ್ಬಾ.! 'ಚಕ್ರವ್ಯೂಹ' ಮೊದಲ ದಿನದ ಕಲೆಕ್ಷನ್ ಇಷ್ಟಾ.?
ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಮತ್ತಷ್ಟು ಪವರ್ ಫುಲ್ ಆಗಿ 'ಚಕ್ರವ್ಯೂಹ' ಚಿತ್ರದ ಮೂಲಕ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ನಿನ್ನೆ ತಾನೆ ತೆರೆಕಂಡ ಪುನೀತ್ ಅವರ ಬಿಗ್ ಬಜೆಟ್ ನ ಹಾಗೂ ಬಹುನಿರೀಕ್ಷಿತ ಸಿನಿಮಾ 'ಚಕ್ರವ್ಯೂಹ' ಎಲ್ಲೆಡೆ ಅಬ್ಬರಿಸುತ್ತಿದೆ.
ಹೌದು ಅಭಿಮಾನಿಗಳ ನಿರೀಕ್ಷೆಯನ್ನು ಸುಳ್ಳಾಗಿಸದ ಪುನೀತ್ ಅವರು ಸಾಕಷ್ಟು ಉತ್ತಮ ಚಿತ್ರವನ್ನು ಅಭಿಮಾನಿಗಳಿಗಾಗಿ ನೀಡಿದ್ದಾರೆ. ಎಲ್ಲ ಕಡೆ ಹೌಸ್ ಫುಲ್ ಬೋರ್ಡ್ ನೇತು ಹಾಕಿಕೊಂಡು ಭರ್ಜರಿ ಕಲೆಕ್ಷನ್ ಮಾಡಿರುವ ಚಿತ್ರದ ಮೊದಲ ದಿನದ ಗಳಿಗೆ ಎಷ್ಟು ಗೊತ್ತಾ? ಬರೋಬ್ಬರಿ ಅಂದಾಜು 11 ಕೋಟಿ ರೂಪಾಯಿ.[ಪುನೀತ್ 'ಚಕ್ರವ್ಯೂಹ'ದ ಒಳ ನುಗ್ಗಿದ ವಿಮರ್ಶಕರು ಏನಂತಾರೆ?]
ಮಾಹಿತಿಗಳು ಹೇಳುವ ಪ್ರಕಾರ ಪುನೀತ್ ರಾಜ್ ಕುಮಾರ್ ಮತ್ತು ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದ 'ಚಕ್ರವ್ಯೂಹ' ಸಿನಿಮಾ ಅಂದಾಜು 11 ಕೋಟಿ ಕಲೆಕ್ಷನ್ ಮಾಡುವ ಮೂಲಕ ಎಲ್ಲಾ ದಾಖಲೆಗಳನ್ನು ಪೀಸ್-ಪೀಸ್ ಮಾಡಿದೆ.[ವಿಮರ್ಶೆ; 'ಚಕ್ರವ್ಯೂಹ'ದೊಳ್ ಜನನಾಯಕ ಪುನೀತ್ ಗೆ ಜೈ.!]

ಎಲ್ಲಾ ಕಡೆ ಬಿಗ್ಗೆಸ್ಟ್ ಓಪನಿಂಗ್ ಪಡೆದುಕೊಂಡ 'ಚಕ್ರವ್ಯೂಹ' ಸಿನಿಮಾ ವಿಶ್ವದಾದ್ಯಂತ ಸುಮಾರು 500 ಥಿಯೇಟರ್ ಗಳಲ್ಲಿ ತೆರೆ ಕಂಡಿತ್ತು. ಮೊದಲ ದಿನವೇ ದಾಖಲೆ ಮಟ್ಟದ ಗಳಿಕೆ ಮಾಡುವ ಮೂಲಕ ಇಂಡಸ್ಟ್ರಿಯ ಹಳೇ ದಾಖಲೆಗಳನ್ನು ಪುಡಿಗಟ್ಟಿದ ಪವರ್ ಸ್ಟಾರ್ ಪುನೀತ್ ಅವರು ಮತ್ತೆ ಫಾರ್ಮ್ ಗೆ ಮರಳಿದ್ದಾರೆ.[ಪುನೀತ್ ರ 'ಚಕ್ರವ್ಯೂಹ' ಚಿತ್ರದ ಮೊದಲ ವಿಮರ್ಶೆ ಇಲ್ಲಿದೆ ಓದಿ...]
ಮಾಸ್ ಮತ್ತು ಕ್ಲಾಸ್ ವರ್ಗದ ಜನರನ್ನು ಸೆಳೆದಿದ್ದ 'ಚಕ್ರವ್ಯೂಹ' ಸಿನಿಮಾದಲ್ಲಿ ಪುನೀತ್ ಅವರ ಜೊತೆಗೆ ಖಳನಟನಾಗಿ ಅರುಣ್ ವಿಜಯ್ ಅವರು ಮಿಂಚಿದ್ದರು. ಚಿತ್ರಕ್ಕೆ ತಮಿಳು ನಿರ್ದೇಶಕ ಎಮ್.ಸರವಣನ್ ಆಕ್ಷನ್-ಕಟ್ ಹೇಳಿದ್ದು, ತೆಲುಗು ನಿರ್ಮಾಪಕ ಎನ್.ಕೆ ಲೋಹಿತ್ ಅವರು ಬಂಡವಾಳ ಹೂಡಿದ್ದರು.