ಅಪ್ಪು ಜೊತೆಗೆ ಚೇತನ್ : 'ಜೇಮ್ಸ್'ಗೆ ಜೀವ ನೀಡ್ತಾರ ಪುನೀತ್?
Recommended Video

ನಟ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು 'ನಟ ಸಾರ್ವಭೌಮ' ಸಿನಿಮಾ ನೋಡಲು ಕಾಯುತ್ತಿದ್ದಾರೆ. ಈ ಸಿನಿಮಾದ ಪ್ರದರ್ಶನ ಇಂದು ರಾತ್ರಿಯಿಂದಲೇ ಶುರು ಆಗುತ್ತಿದೆ.
ಒಂದು ಕಡೆ 'ನಟ ಸಾರ್ವಭೌಮ' ಸಿನಿಮಾವಾದರೆ, ಮತ್ತೊಂದು ಕಡೆ ಪುನೀತ್ ರಾಜ್ ಕುಮಾರ್ ತಮ್ಮ ಮತ್ತೊಂದು ಸಿನಿಮಾಗೆ ಜೀವ ನೀಡುತ್ತಿದ್ದಾರೆ ಎನ್ನುವ ಸುದ್ದಿ ಬಂದಿದೆ.
'ಜೇಮ್ಸ್' ಸಿನಿಮಾದ ಹೆಸರನ್ನು ಪುನೀತ್ ಫ್ಯಾನ್ಸ್ ಕೇಳಿಯೇ ಇರುತ್ತಾರೆ. ಕೆಲ ವರ್ಷಗಳ ಹಿಂದೆ ಸುದ್ದಿ ಮಾಡಿದ್ದ ಈ ಸಿನಿಮಾ ಹಾಗೆಯೇ ತಣ್ಣಗಾಗಿತ್ತು. ಆದರೆ, ಈಗ ಮತ್ತೆ 'ಜೇಮ್ಸ್' ಆಟ ಶುರು ಆಗುವ ಸಾಧ್ಯತೆ ಹೆಚ್ಚಿದೆ. 'ಯುವರತ್ನ' 'ನಂತರ ಪವರ್ ಸ್ಟಾರ್ 'ಜೇಮ್ಸ್' ಸಿನಿಮಾ ಮಾಡುತ್ತಿದ್ದು, ಇದರ ಅಧಿಕೃತ ಘೋಷಣೆ ಬಾಕಿ ಇದೆ.
''ಅಪ್ಪ ಅಮ್ಮ ಹೆಸರಿಡೋದ್ ವಾಡಿಕೆ... ನಮಗ್ ನಾವ್ ಹೆಸರಿಟ್ಕೋಂದ್ರೆ ಬೇಡಿಕೆ..'' ಎಂದು ಡೈಲಾಗ್ ಹೇಳುತ್ತ ಮತ್ತೆ ಜೇಮ್ಸ್ ಬಂದಿದ್ದಾನೆ. ಮುಂದೆ ಓದಿ...

'ಜೀಮ್ಸ್'ಗೆ ಮರು ಜೀವ
ನಟ ಪುನೀತ್ ರಾಜ್ ಕುಮಾರ್ ತಮ್ಮ 'ಜೀಮ್ಸ್' ಸಿನಿಮಾವನ್ನು ಮತ್ತೆ ಶುರು ಮಾಡುತ್ತಾರೆ ಎನ್ನಲಾಗುತ್ತಿದೆ. ಚೇತನ್ ಕುಮಾರ್ ಈ ಸಿನಿಮಾದ ನಿರ್ದೇಶನ ಮಾಡಲಿದ್ದಾರೆ. ಇತ್ತೀಚಿಗಷ್ಟೆ ಪುನೀತ್ ರನ್ನು ಚೇತನ್ ಭೇಟಿ ಮಾಡಿದ್ದು, ಈ ಸಿನಿಮಾ ಮತ್ತೆ ಟೆಕ್ ಆಫ್ ಆಗಲಿದೆ ಎಂಬ ಸುದ್ದಿ ಇದೆ.

ಪುನೀತ್ ಹುಟ್ಟುಹಬ್ಬಕ್ಕೆ ಅನೌನ್ಸ್
ಪುನೀತ್ ರಾಜ್ ಕುಮಾರ್ ಅವರ ಈ ವರ್ಷದ ಹುಟ್ಟುಹಬ್ಬಕ್ಕೆ ಈ ಸಿನಿಮಾ ಅನೌನ್ಸ್ ಆಗುವ ಸಾಧ್ಯತೆ ಇದೆ. ಪ್ರತಿ ವರ್ಷದ ಪುನೀತ್ ಬರ್ತ್ ಡೇ ಗೆ ಒಂದಲ್ಲ ಒಂದು ಸಿನಿಮಾದ ಉಡುಗೊರೆ ಅಭಿಮಾನಿಗಳಿಗೆ ಸಿಗುತ್ತದೆ. ಈ ವರ್ಷ ಮಾರ್ಚ್ 17 ದಿಂದ 'ಜೇಮ್ಸ್' ಜಮಾನ ಶುರು ಆಗಲಿದೆ.

ಟೀಸರ್ ಸಹ ಬಂದಿತ್ತು
'ಜೇಮ್ಸ್' ಸಿನಿಮಾದ ಒಂದು ಟೀಸರ್ ಸಹ ಈಗಾಗಲೇ ಬಂದಿತ್ತು. ಈ ಟೀಸರ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರ ಎಲ್ಲ ಸಿನಿಮಾಗಳ ಪೋಸ್ಟರ್ ಝಲಕ್ ಬಂದಿದ್ದು, ಅಭಿಮಾನಿಗಳಿಗೆ ಬಹಳ ಇಷ್ಟ ಆಗಿತ್ತು. ಒಂದು ಸಣ್ಣ ವಿಡಿಯೋ ಮೂಲಕವೇ ಚೇತನ್ ಅಭಿಮಾನಿಗಳ ಗಮನ ಸೆಳೆದಿದ್ದರು. ಟೀಸರ್ ನಲ್ಲಿ ಇದ್ದ ಮ್ಯೂಸಿಕ್ ಸಖತ್ ಆಗಿತ್ತು.

ಚೇತನ್ ನಾಲ್ಕನೇ ಸಿನಿಮಾ
ಕನ್ನಡ ಚಿತ್ರರಂಗದಲ್ಲಿ ಚೇತನ್ ಕುಮಾರ್ ಸ್ಟಾರ್ ಡೈರೆಕ್ಟರ್ ಆಗಿದ್ದಾರೆ. 'ಜೇಮ್ಸ್' ಅವರ ನಿರ್ದೇಶಕನ ನಾಲ್ಕನೇ ಸಿನಿಮಾ ಆಗಲಿದೆ. 'ಬಹದ್ದೂರ್' ಹಾಗೂ 'ಭರ್ಜರಿ' ಮೂಲಕ ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದ್ದ ಚೇತನ್ ಸದ್ಯ 'ಭರಾಟೆ'ಯ ತಯಾರಿಯಲ್ಲಿ ಇದ್ದಾರೆ. 'ಜೀಮ್ಸ್' ಸಿನಿಮಾವನ್ನ ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











