Don't Miss!
- Sports
IPL 2023: ರವೀಂದ್ರ ಜಡೇಜಾ CSK ತಂಡವನ್ನ ತೊರೆದ್ರೆ, ಈ ಇಬ್ಬರು ಆಟಗಾರರ ಮೇಲಿದೆ ಫ್ರಾಂಚೈಸಿ ಕಣ್ಣು
- Finance
ಚಿನ್ನದ ಹೂಡಿಕೆ ಯೋಜನೆ ಮತ್ತೆ ಆರಂಭ, ಈ 4 ದಿನಗಳನ್ನು ನೆನಪಿಡಿ!
- News
ಧಾರವಾಡದಲ್ಲಿ ಪ್ರಸಿದ್ಧಿಯಾದ ವಿದೇಶಿಗರ ಉಚಿತ ಸಂಗೀತ ಶಾಲೆ!
- Technology
ಇನ್ಫಿನಿಕ್ಸ್ ನೋಟ್ 12 ಪ್ರೊ 4G ಸ್ಮಾರ್ಟ್ಫೋನ್ ಲಾಂಚ್ ಡೇಟ್ ಫಿಕ್ಸ್!
- Lifestyle
ನಿಮ್ಮ ಲೈಫ್ ಪಾರ್ಟನರ್ ಹತ್ರ ಈ ವಿಷಯಗಳನ್ನು ಹೇಳಲೇಬೇಡಿ
- Automobiles
ಸ್ಟೈಲಿಶ್ ಲುಕ್ ಹೊಂದಿರುವ ಹೋಂಡಾ ಆಕ್ಟಿವಾ 6ಜಿ ಪ್ರೀಮಿಯಂ ಎಡಿಷನ್ ವಿಶೇಷತೆಗಳು
- Education
Online Courses After Class 12 : ಆನ್ಲೈನ್ ಸರ್ಟಿಫಿಕೇಟ್, ಡಿಪ್ಲೋಮಾ ಮತ್ತು ಪದವಿ ಕೋರ್ಸ್ ಗಳ ಪಟ್ಟಿ
- Travel
2022ರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ: ಭಾರತದಲ್ಲಿಯ ಪ್ರಸಿದ್ದ ಕೃಷ್ಣ ದೇವರ ದೇವಾಲಯಗಳಿಗೆ ಭೇಟಿ ಕೊಡಿ
'ಪುಷ್ಪ 2' ರಿಲೀಸ್ ಪೋಸ್ಟ್ ಪೋನ್, ಈ ವರ್ಷ 'ಪುಷ್ಪ 2' ಬರಲ್ಲ!
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ 2' ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ. 'ಪುಷ್ಪ' ಸಿನಿಮಾದ ಯಶಸ್ಸಿನ ಬಳಿಕ 'ಪುಷ್ಪ 2' ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಹಾಗಾಗಿ 'ಪುಷ್ಪ 2' ಚಿತ್ರವನ್ನು ಬಹಳ ದೊಡ್ಡ ಮಟ್ಟದಲ್ಲಿ, ಕಥೆಯನ್ನು ಮತ್ತಷ್ಟು ಡೆವಲಪ್ ಮಾಡಲು ಚಿತ್ರತಂಡ ಮುಂದಾಗಿದೆ.
ಚಿತ್ರದ ಬಗ್ಗೆ ದಿನಕ್ಕೊಂದು ಹೊಸ ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ ಪಾತ್ರವನ್ನು ಚಿತ್ರದಲ್ಲಿ ಕಡಿತಗೊಳಿಸಲಾಗಿದೆ ಎನ್ನುವ ಸುದ್ದಿ ಬಂದಿತ್ತು. ಜೊತೆಗೆ ಈ ಚಿತ್ರದಲ್ಲಿ ಇಂಗ್ಲಿಷ್ ಬೆಡಗಿ ಒಬ್ಬರು ನಟಿಸುತ್ತಾರೆ ಎನ್ನಲಾಗಿತ್ತು.
'ಪುಷ್ಪ'
ಬಳಿಕ
ಊದಿದ
ಅಲ್ಲು
ಅರ್ಜುನ್:
ವಡಾ
ಪಾವ್
ಎಂದ
ನೆಟ್ಟಿಗರು!
ಆದರೆ ಈಗ ಈ ಸಿನಿಮಾದ ರಿಲೀಸ್ ಬಗ್ಗೆ ಹೊಸದೊಂದು ಮಾಹಿತಿ ಹೊರ ಬಂದಿದೆ. ಸಿನಿಮಾ ಚಿತ್ರೀಕರಣಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆಯಂತೆ. ಹಾಗಾಗಿ ಈ ವರ್ಷ ಸಿನಿಮಾ ಬರುವುದಿಲ್ಲ ಎನ್ನಲಾಗುತ್ತಿದೆ. ಮತ್ತಷ್ಟು ಹೆಚ್ಚಿನ ಸಮಯವನ್ನು ಚಿತ್ರ ಬೇಡುತ್ತಿದೆಯಂತೆ.

'ಪುಷ್ಪ 2' ರಿಲೀಸ್ ಪೋಸ್ಟ್ ಪೋನ್!
ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಸಿನಿಮಾವನ್ನು ನೋಡಲು, ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈ ಅವಧಿ ಮತ್ತಷ್ಟು ಹೆಚ್ಚಾಗಲಿದೆ. ಯಾಕೆಂದರೆ 'ಪುಷ್ಪ 2' ಸಿನಿಮಾ ಈ ವರ್ಷ ರಿಲೀಸ್ ಆಗುವುದಿಲ್ಲ. 'ಪುಷ್ಪ 2' ಚಿತ್ರದ ರಿಲೀಸ್ ದಿನಾಂಕ ಒಂದು ವರ್ಷದ ಮಟ್ಟಿಗೆ ಮುಂದೆ ಹೋಗಿದೆ. ಈ ಸುದ್ದಿ ಟಾಲಿವುಡ್ನಲ್ಲಿ ಹರಿದಾಡುತ್ತಿದೆ.
'ಪುಷ್ಪ
2'
ಚಿತ್ರದಲ್ಲಿ
ರಶ್ಮಿಕಾ
ಎದುರು
ಇಂಗ್ಲಿಷ್
ನಟಿ!

'ಪುಷ್ಪ 2' ರಿಲೀಸ್ 2023- 2024!
'ಪುಷ್ಪ 2' ಸಿನಿಮಾದ ರಿಲೀಸ್ ಡೇಟ್ ಒಂದು ವರ್ಷ ಮುಂದಕ್ಕೆ ಹೋಗಿದೆ. ಹೌದು, 2022 ಅಂತ್ಯ ಅಲ್ಲ, 2023 ಡಿಸೆಂಬರ್ ಅಥವಾ 2024 ಜನವರಿಯಲ್ಲಿ 'ಪುಷ್ಪ 2' ಸಿನಿಮಾ ರಿಲೀಸ್ ಆಗಲಿದೆಯಂತೆ. ಯಾಕೆಂದರೆ ಇನ್ನೂ ಕೂಡ ಸ್ಕ್ರಿಪ್ಟ್ ಕೆಲಸಗಳಲ್ಲಿ ನಿರ್ದೇಶಕ ಸುಕುಮಾರ್ ಬ್ಯುಸಿಯಾಗಿದ್ದು, ಈ ವರ್ಷ ಅಕ್ಟೋಬರ್ನಲ್ಲಿ ಸಿನಿಮಾದ ಶೂಟಿಂಗ್ ಶುರುವಾಗಲಿದೆಯಂತೆ.

ರಶ್ಮಿಕಾ ಮಂದಣ್ಣ ಜೊತೆಗೆ ಇಂಗ್ಲಿಷ್ ನಟಿ!
ಪುಷ್ಪ ರಾಜ್ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರವನ್ನು ವಿಸ್ತರಿಸುತ್ತಾನೆ. ಹಾಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮತ್ತೊಬ್ಬ ನಟಿಯನ್ನು ಆರಿಸಲಾಗಿದೆ. ಹಾಗಾಗಿ ನಟ ಅಲ್ಲು ಅರ್ಜುನ್ ಜೊತೆಗೆ ಮತ್ತೊಬ್ಬ ನಟಿ ಕಾಣಿಸಿಕೊಳ್ಳಲಿದ್ದಾರೆ. ಈ ಕಾರಣಕ್ಕೆ ನಟಿ ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಎದುರು ನಿಲ್ಲಲ್ಲು ಇಂಗ್ಲಿಷ್ ಬೆಡಗಿ ಬರ್ತಿದ್ದಾಳಂತೆ. ಇನ್ನು ಈ ಚಿತ್ರದಲ್ಲಿ 'ಪುಷ್ಪ' ಪಾತ್ರಕ್ಕೆ ಕತ್ತರಿ ಬೀಳುವುದಿಲ್ಲ ಎಂದು ಚಿತ್ರತಂಡ ಹೇಳಿತ್ತು.
'ಪುಷ್ಪ
2'ಗೆ
ಎಂಟ್ರಿಕೊಟ್ಟ
ವಿಜಯ್
ಸೇತುಪತಿ!

'ಪುಷ್ಪ 2' ಚಿತ್ರದಲ್ಲಿ ವಿಜಯ್ ಸೇತುಪತಿ!
'ಪುಷ್ಪ 2' ತಾರ ಬಳಗದ ಬಗ್ಗೆ ಈಗ ಟಾಲಿವುಡ್ನಲ್ಲಿ ಮತ್ತೊಂದು ದಾಖಲೆ ಹಬ್ಬಿದೆ. 'ಪುಷ್ಪ 2' ಚಿತ್ರದಲ್ಲಿ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ನಟಿಸುತ್ತಾರೆ ಎನ್ನುವ ಸುದ್ದಿ ಬಂದಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ ಖಳನಾಯಕನಾಗಿ ಅಬ್ಬರಿಸುತ್ತಾರೆ ಅಥವಾ ಬೇರೆ ರೀತಿಯ ಪಾತ್ರದಲ್ಲಿ ನಟಿಸುತ್ತಾರಾ ಎನ್ನುವ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ.