twitter
    For Quick Alerts
    ALLOW NOTIFICATIONS  
    For Daily Alerts

    ಪುಷ್ಪ ಚಿತ್ರಕ್ಕೆ 30 ಕೋಟಿ ನಷ್ಟ: ಕಾರಣ ನಿರ್ದೇಶಕ ಸುಕುಮಾರ್‌!

    |

    ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ' ರಿಲೀಸ್ ಆಗಿ ಗೆದ್ದು ಬೀಗುತ್ತಿದೆ. ಮೊದಲ ವಾರ 'ಪುಷ್ಪ' ಬಾಕ್ಸಾಫೀಸ್‌ನಲ್ಲಿ ಹಾವಳಿಯನ್ನು ಹುಟ್ಟಿ ಹಾಕಿತ್ತು. ಬಿಡುಗಡೆಯಾದ ಕಡೆಗಳಲ್ಲೆಲ್ಲಾ ಗಲ್ಲಾಪೆಟ್ಟಿಗೆಯನ್ನು ದೋಚುತ್ತಲೇ ಇದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಬಂದರೂ ಕೂಡ ಚಿತ್ರ ಬಾಕ್ಸಾಫೀಸ್‌ ಗಳಿಕೆಯಲ್ಲಿ ಗೆದ್ದಿದೆ.

    'ಪುಷ್ಪ' ಭಾರತದಲ್ಲಿ ಅಷ್ಟೇ ಅಲ್ಲ, ವಿಶ್ವದಾದ್ಯಂತ ಅಲ್ಲು ಅರ್ಜುನ್ ಸಿನಿಮಾ ಗ್ರ್ಯಾಂಡ್ ಆಗಿ ತೆರೆಕಂಡಿತ್ತು. ಫಸ್ಟ್ ಡೇ ಫಸ್ಟ್ ಶೋ ಇಂದಲೇ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಿದ್ದರೂ, ಮೂರು ದಿನಗಳಲ್ಲಿ ಸಿನಿಮಾ ಗಳಿಕೆಯಲ್ಲಿ ಹಿಂದೆ ಬೀಳಲಿಲ್ಲ. ಕರ್ನಾಟಕದ ಬಾಕ್ಸಾಫೀಸ್‌ನಲ್ಲಿಯೂ ಪುಷ್ಪ ಸಾಕಷ್ಟು ದೋಚಿಕೊಂಡಿದೆ.

    ಪುಷ್ಪ ಚಿತ್ರಕ್ಕೆ ಧಾರಾಳವಾಗಿ ಹಣ ಖರ್ಚು ಮಾಡಲಾಗಿದೆ. ಹಾಗಾಗಿ ಅಷ್ಟೇ ಧಾರಾಳವಾಗಿ ಚಿತ್ರ ಗಳಿಕೆ ಮಾಡಿದೆ. ಸದ್ಯ 'ಪುಷ್ಪ' ಚಿತ್ರ ತಂಡದಿಂದ ಹೊಸದೊಂದು ಸುದ್ದಿ ಹೊರ ಬಂದಿದೆ. ಸಿನಿಮಾಗಾಗಿ ಖರ್ಚು ಮಾಡಿದ್ದು ಒಂದು ಕಡೆ ಆದರೆ. ವ್ಯರ್ಥ ಮಾಡಿರುದ ಹಣದ ಲೆಕ್ಕವೇ ಕೋಟಿ.. ಕೋಟಿ ಆಗಿದೆ.

    ನಿರ್ದೇಶಕನಿಂದ ಪುಷ್ಪ ಚಿತ್ರಕ್ಕೆ 30 ಕೋಟಿ ನಷ್ಟ!

    ನಿರ್ದೇಶಕನಿಂದ ಪುಷ್ಪ ಚಿತ್ರಕ್ಕೆ 30 ಕೋಟಿ ನಷ್ಟ!

    ನಿರ್ದೇಶಕ ಸುಕುಮಾರ್ ಮತ್ತು ಅಲ್ಲು ಅರ್ಜುನ್ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವುದೇ ದೊಡ್ಡ ಮಟ್ಟದ ನಿರೀಕ್ಷೆಗೆ ಕಾರಣ ಆಗಿತ್ತು. ಅಂತೆಯೆ ಚಿತ್ರ ದೊಡ್ಡ ಮಟ್ಟದಲ್ಲಿ ನಿರ್ಮಾಣ ಆಗಿದೆ. ಈ ಚಿತ್ರಕ್ಕೆ ಮೈತ್ರಿ ಮೂವೀಸ್ ಕೋಟಿ, ಕೋಟಿ ಬಂಡವಾಳ ಹೂಡಿದೆ. ಅಂತೆಯೇ ಹಾಕಿದ ಹಣ ಸರಾಗವಾಗಿಯೇ ವಾಪಸ್‌ ಬಂದಿದೆ. ಆದರೆ ಚಿತ್ರ ನಿರ್ಮಾಣದ ವೇಳೆ ನಿರ್ದೇಶಕ ಸುಕುಮಾರ್ ಒಟ್ಟು 30 ಕೋಟಿ ರೂ ನಷ್ಟ ಮಾಡಿದ್ದಾರಂತೆ. ನಷ್ಟ ಆದರು ಚಿತ್ರಕ್ಕಾಗಿ ಅದ್ಧೂರಿಯಾಗಿ ಖರ್ಚು ಮಾಡಿದೆ ಮೈತ್ರಿ ಮೂವೀಸ್.

    ಹೆಚ್ಚುವರಿಯಾಗಿ ಚಿತ್ರೀಕರಿಸಿದ ದೃಶ್ಯಗಳು ವ್ಯರ್ಥ!

    ಹೆಚ್ಚುವರಿಯಾಗಿ ಚಿತ್ರೀಕರಿಸಿದ ದೃಶ್ಯಗಳು ವ್ಯರ್ಥ!

    ಪುಷ್ಪ ಚಿತ್ರದ ಮೇಕಿಂಗ್ ಬಹಳ ಗಮನ ಸೆಳೆದಿದೆ. ಚಿತ್ರೀಕರಣದ ವೇಳೆ ನಿರ್ದೇಶಕ ಸುಕುಮಾರ್ ಸಾಕಷ್ಟು ಹೆಚ್ಚುವರಿ ದೃಶ್ಯಗಳನ್ನು ಚಿತ್ರೀಕರಣ ಮಾಡಿದ್ದಾರಂತೆ. ಆ ದೃಶ್ಯಗಳು ಈಗ 'ಪುಷ್ಪ' ಭಾಗ ಎರಡಕ್ಕೂ ಉಪಯೋಗ ಆಗುತ್ತಿಲ್ಲವಂತೆ. ಸುಮಾರು 30 ಕೋಟಿ ರೂಪಾಯಿ ಮೌಲ್ಯದಲ್ಲಿ ಚಿತ್ರೀಕರಿಸಲಾಗಿದ್ದ ದೃಶ್ಯಗಳು ಯಾವುದೇ ಪ್ರಯೋಜನ ಇಲ್ಲದೆ ವ್ಯರ್ಥ ಆಗಿವೆ. ಈ ವಿಚಾರ ಟಾಲಿವುಡ್‌ನಲ್ಲಿ ಹೆಚ್ಚಾಗಿ ಚರ್ಚೆ ಆಗುತ್ತಿದೆ. ಯಾಕೆಂದರೆ 30 ಕೋಟಿಯಲ್ಲಿ ಏನಿಲ್ಲಾ ಅಂದರು ಚಿಕ್ಕ ಚಿಕ್ಕದಾಗಿ ಎರಡು ಚಿತ್ರಗಳನ್ನು ಮಾಡಬಹುದು. ಆದರೆ ಅಷ್ಟರ ಮಟ್ಟಿಗೆ ಪುಷ್ಪ ಚಿತ್ರತಂಡ ಹಣವನ್ನು ವ್ಯರ್ಥ ಮಾಡಿದೆ ಎನ್ನುವ ಬಗ್ಗೆ ಚರ್ಚೆ ಆಗುತ್ತಿದೆ.

    'ಪುಷ್ಪ' ಚಿತ್ರದ ಒಟ್ಟು ಬಜೆಟ್ 180 ಕೋಟಿ!

    'ಪುಷ್ಪ' ಚಿತ್ರದ ಒಟ್ಟು ಬಜೆಟ್ 180 ಕೋಟಿ!

    'ಪುಷ್ಪ' ಚಿತ್ರದ ಒಟ್ಟಾರೆ ಬಂಡವಾಳ 180 ಕೋಟಿ ಎಂದು ಹೇಳಲಾಗುತ್ತಿದೆ. ಚಿತ್ರದ ಮೇಕಿಂಗ್ ಹೆಚ್ಚು ಬಜೆಟ್ ಡಿಮ್ಯಾಂಡ್ ಮಾಡಿದೆ. ಚಿತ್ರವನ್ನು ಈ ಉತ್ತಮ ಕ್ವಾಲಿಟಿಯಲ್ಲಿ ಮಾಡಲು ಅಷ್ಟು ಹಣ ಖರ್ಚು ಆಗಿದೆ. ಆದರೆ ಈಗ ಸಿನಿಮಾದಲ್ಲಿ ಬಳಸಲು ಆಗದೇ ಹಾಗೆ ಉಳಿದಿರುವ ದೃಶ್ಯಗಳನ್ನು ಒಟ್ಟು ಸೇರಿಸಿದರೆ ಅದರ ಮೊತ್ತ 30 ಕೋಟಿ ಆಗಿದೆ. ಇನ್ನೂ ಸಮಂತಾ ಡ್ಯಾನ್ ಮಾಡಿರುವ ವಿಶೇಷ ಹಾಡಿಗಾಗಿ ಕೂಡ ಹೆಚ್ಚುವರಿ ದೃಶ್ಯಗಳನ್ನು ಶೂಟ್‌ ಮಾಡಿ ವ್ಯರ್ಥ ಮಾಡಲಾಗಿದೆಯಂತೆ. ಆದರೆ ಚಿತ್ರದ ಜೊತೆಗೆ ಹಾಡು ಕೂಡ ಹಿಟ್‌ ಲಿಸ್ಟ್‌ ಸೇರಿದೆ.

    ಮೂರು ದಿನಕ್ಕೆ 173 ಕೋಟಿ ಕಲೆ ಹಾಕಿದ 'ಪುಷ್ಪ'!

    ಮೂರು ದಿನಕ್ಕೆ 173 ಕೋಟಿ ಕಲೆ ಹಾಕಿದ 'ಪುಷ್ಪ'!

    'ಪುಷ್ಪ' ರಿಲೀಸ್‌ ಆದ ಮೊದಲ ದಿನವೇ ಉತ್ತಮ ರೆಸ್ಪಾನ್ಸ್ ಪಡೆದಿದೆ. ಬಾಕ್ಸಾಫೀಸ್‌ನಲ್ಲಿ ಇಷ್ಟೊಂದು ಸದ್ದು ಮಾಡುತ್ತೆ ಅನ್ನುವ ಕಲ್ಪನೆ ಸಿನಿಮಾ ಮಂದಿಗೆ ಇರಲಿಲ್ಲ. ಮಿಶ್ರ ಪ್ರತಿಕ್ರಿಯೆಯಿಂದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುತ್ತೆ ಎನ್ನಲಾಗಿತ್ತು. ಆದರೆ, 'ಪುಷ್ಪ' ಈ ಎಲ್ಲಾ ಲೆಕ್ಕಾಚಾರಗಳನ್ನೂ ತಲೆಕೆಳಗಾಗುವಂತೆ ಮಾಡಿದೆ. ಮೂರನೇ ದಿನಕ್ಕೆ 'ಪುಷ್ಪ' ವಿಶ್ವದಾದ್ಯಂತ ಬರೋಬ್ಬರಿ 173 ಕೋಟಿ ಲೂಟಿ ಮಾಡಿದೆ ಎನ್ನಲಾಗಿದೆ. 'ಪುಷ್ಪ' ಎಲ್ಲೆಲ್ಲಿ ತೆರೆಕಂಡಿತ್ತೋ, ಅಲ್ಲೆಲ್ಲಾ ಗಳಿಕೆ ಗಗನಕ್ಕೇರಿದೆ.

    English summary
    Pushpa Loss Rs.30 Crore Because Of Director Sukumar, Know More
    Monday, December 27, 2021, 17:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X