For Quick Alerts
  ALLOW NOTIFICATIONS  
  For Daily Alerts

  'ಪುಷ್ಪ'ದಲ್ಲಿ ಬಾಲಿವುಡ್ ಬೆಡಗಿ ಡ್ಯಾನ್ಸ್: ಆಕೆ ಕೇಳ್ತಿದ್ದಾಳೆ ದುಬಾರಿ ಹಣ!

  |

  ದಕ್ಷಿಣ ಭಾರತದ ಬಹುನಿರೀಕ್ಷೆಯ ಚಿತ್ರ ಪುಷ್ಪ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈ ಹಂತದಲ್ಲೊಂದು ಸರ್ಪ್ರೈಸ್ ಸುದ್ದಿ ಹೊರಹಾಕಿದೆ. ಪುಷ್ಪ ಸಿನಿಮಾದಲ್ಲಿ ಸ್ಪೆಷಲ್ ನಂಬರ್ ಹಾಡೊಂದು ಇರಲಿದ್ದು, ಅದಕ್ಕಾಗಿ ಬಾಲಿವುಡ್ ಬೆಡಗಿಯಿಂದ ಹೆಜ್ಜೆ ಹಾಕಿಸಲು ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

  ಚಿತ್ರದ ವಿಶೇಷ ಹಾಡಿಗಾಗಿ ಪುಷ್ಪ ನಿರ್ಮಾಪಕರು ಬಿಟೌನ್ ಚೆಲುವೆ ನೋರಾ ಫತೇಹಿ ಸಂಪರ್ಕ ಮಾಡಿದ್ದು, ಸ್ಪೆಷಲ್ ನಂಬರ್ ಹಾಡಿನಲ್ಲಿ ಸೊಂಟ ಬಳಕಿಸುವಂತೆ ಕೇಳಿದ್ದಾರಂತೆ. ನಿರ್ಮಾಪಕರ ಆಫರ್‌ಗೆ ಒಪ್ಪಿರುವ ನಟಿ ದುಬಾರಿ ಸಂಭಾವನೆ ಬೇಡಿಕೆಯಿಟ್ಟಿದ್ದಾರೆ ಎಂಬ ಅಂಶ ಹೊರಬಿದ್ದಿದೆ.

  ಪುಷ್ಪ ಚಿತ್ರತಂಡದಿಂದ ರಶ್ಮಿಕಾ ಫ್ಯಾನ್ಸ್‌ಗೆ ಮತ್ತೊಂದು ಸರ್ಪ್ರೈಸ್ಪುಷ್ಪ ಚಿತ್ರತಂಡದಿಂದ ರಶ್ಮಿಕಾ ಫ್ಯಾನ್ಸ್‌ಗೆ ಮತ್ತೊಂದು ಸರ್ಪ್ರೈಸ್

  ಸದ್ಯದ ಮಾಹಿತಿ ಪ್ರಕಾರ ಪುಷ್ಪ ಚಿತ್ರದ ಹಾಡಿನಲ್ಲಿ ಡ್ಯಾನ್ಸ್ ಮಾಡಲು ಬರೋಬ್ಬರಿ 2 ಕೋಟಿ ಕೇಳಿದ್ದಾರೆ ಎಂದು ಸೌತ್ ಇಂಡಿಯಾದ ಚಿತ್ರ ವಿಶ್ಲೇಷಕ ಮನೋಬಾಲ ವಿಜಯಬಾಲನ್ ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ...

  ಸ್ಪೆಷಲ್ ನಂಬರ್‌ಗೆ ಫೇಮಸ್

  ಸ್ಪೆಷಲ್ ನಂಬರ್‌ಗೆ ಫೇಮಸ್

  ನೋರಾ ಫತೇಹಿ ಸ್ಪೆಷಲ್ ನಂಬರ್ ಹಾಡುಗಳಿಗೆ ಹೆಜ್ಜೆ ಹಾಕುವುದರಲ್ಲಿ ಹೆಚ್ಚು ಖ್ಯಾತಿ ಹೊಂದಿದ್ದಾರೆ. ಹಿಂದಿ, ತೆಲುಗು ಹಾಗೂ ತಮಿಳಿನ ಹಲವು ಚಿತ್ರಗಳಲ್ಲಿ ಸ್ಪೆಷಲ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ನೋರಾ ಫತೇಹಿ ಕುಣಿದ್ರೆ ಆ ಹಾಡಿಗೊಂದು ಚೆಂದ ಎಂದು ನಂಬಿರುವ ನಿರ್ಮಾಪಕ ಇತ್ತೀಚಿನ ವರ್ಷಗಳಲ್ಲಿ ಈಕೆಯನ್ನು ಹೆಚ್ಚು ಅವಲಂಭಿಸಿದ್ದಾರೆ. ಪ್ಯಾನ್ ಇಂಡಿಯಾ ಬಿಡುಗಡೆಯಾಗುತ್ತಿರುವ ಪುಷ್ಪ ಚಿತ್ರ ದೊಡ್ಡ ಬಜೆಟ್ ಪ್ರಾಜೆಕ್ಟ್ ಎನ್ನುವುದನ್ನು ಅರಿತಿರುವ ನಟಿ ನೋರಾ ಫತೇಹಿ ಲೆಕ್ಕಾಚಾರ ಮಾಡಿ ದೊಡ್ಡ ಸಂಭಾವನೆ ಕೇಳಿದ್ದಾರೆ. ಇದಕ್ಕೆ ನಿರ್ಮಾಪಕರು ಒಪ್ಪಿಕೊಳ್ಳುತ್ತಾರಾ ಕಾದು ನೋಡಬೇಕಿದೆ.

  ಟೆಂಪರ್ ಚಿತ್ರಕ್ಕೆ ಆಕೆ ಪಡೆದಿದ್ದು 4 ಲಕ್ಷ

  ಟೆಂಪರ್ ಚಿತ್ರಕ್ಕೆ ಆಕೆ ಪಡೆದಿದ್ದು 4 ಲಕ್ಷ

  ಈ ಹಿಂದೆ ನೋರಾ ಫತೇಹಿ ಹೆಜ್ಜೆ ಹಾಕಿರುವ ಹಾಡುಗಳಿಗಾಗಿ ಆಕೆ ಪಡೆದಿರುವ ಸಂಭಾವನೆ ಕೇವಲ ಲಕ್ಷದಲ್ಲಿದೆ. ವರದಿ ಪ್ರಕಾರ ಜೂನಿಯರ್ ಎನ್‌ಟಿಆರ್ ನಟನೆಯ 'ಟೆಂಪರ್' ಚಿತ್ರದ ಹಾಡೊಂದಕ್ಕೆ ಕುಣಿಯಲು ನೋರಾ ಪಡೆದಿದ್ದು ಬರಿ 4 ಲಕ್ಷ. ಆದ್ರೀಗ, ನೋರಾ ಫತೇಹಿ ಸಂಭಾವನೆ ಗಗನಕ್ಕೇರಿದೆ.

  ಕ್ರಿಸ್‌ಮಸ್‌ಗೂ ಮುಂಚೆಯೇ ಬರ್ತಿದೆ ಅಲ್ಲು ಅರ್ಜುನ್ 'ಪುಷ್ಪ'ಕ್ರಿಸ್‌ಮಸ್‌ಗೂ ಮುಂಚೆಯೇ ಬರ್ತಿದೆ ಅಲ್ಲು ಅರ್ಜುನ್ 'ಪುಷ್ಪ'

  ತೆಲುಗಿನಲ್ಲಿ ಬೇಡಿಕೆ ಇದೆ

  ತೆಲುಗಿನಲ್ಲಿ ಬೇಡಿಕೆ ಇದೆ

  ಟೆಂಪರ್, ಬಾಹುಬಲಿ ದಿ ಬಿಗಿನಿಂಗ್, ಕಿಕ್, ಶೇರ್, ಲೋಫರ್, ಊಪಿರಿ ಸಿನಿಮಾಗಳಲ್ಲಿ ನೋರಾ ಫತೇಹಿ ಸ್ಪೆಷಲ್ ನಂಬರ್‌ನಲ್ಲಿ ಹೆಜ್ಜೆ ಹಾಕಿದ್ದರು. ಸಿನಿಮಾಗಳಲ್ಲಿ ನಟಿಸಿರುವುದು ಬಹಳ ಕಡಿಮೆ. ಅಲ್ಲೊಂದು ಇಲ್ಲೊಂದು ಚಿತ್ರದಲ್ಲಿ ಮಾತ್ರ ಅಭಿನಯಿಸಿದ್ದಾರೆ. ಕಳೆದ ಏಳು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ಹೆಚ್ಚಾಗಿ ಸ್ಪೆಷಲ್ ನಂಬರ್‌ಗಳಲ್ಲಿ ಮಾತ್ರ ಹೆಜ್ಜೆ ಹಾಕಿದ್ದಾರೆ.

  'ವಿಕ್ರಾಂತ್ ರೋಣ'ಗೆ ಬರಬೇಕಿತ್ತು

  'ವಿಕ್ರಾಂತ್ ರೋಣ'ಗೆ ಬರಬೇಕಿತ್ತು

  ಕಿಚ್ಚ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಚಿತ್ರಕ್ಕಾಗಿ ಮೊದಲು ನೋರಾ ಫತೇಹಿ ಅವರನ್ನು ಸಂಪರ್ಕಿಸಲಾಗಿತ್ತು. ಸುದೀಪ್ ಜೊತೆ ನೋರಾ ಡ್ಯಾನ್ಸ್ ಮಾಡಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ನಂತರ ಕೊನೆಯ ಘಳಿಗೆಯಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಪ್ರತ್ಯಕ್ಷವಾದರು.

  ಡಿಸೆಂಬರ್ 17ಕ್ಕೆ ಪುಷ್ಪ

  ಡಿಸೆಂಬರ್ 17ಕ್ಕೆ ಪುಷ್ಪ

  ಸುಕುಮಾರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ನಾಯಕನಾಗಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಎರಡು ಭಾಗಗಳಾಗಿ ಪ್ರೇಕ್ಷಕರೆದುರು ಬರಲಿದೆ. ಅಲ್ಲು ಅರ್ಜುನ್ ಜೊತೆ ಮಲಯಾಳಂ ಖ್ಯಾತ ನಟ ಫಾಹದ್ ಫಾಸಿಲ್ ಹಾಗೂ ಕನ್ನಡದ ಡಾಲಿ ಧನಂಜಯ್ ಸಹ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಪುಷ್ಪ ಸಿನಿಮಾದ ಎರಡನೇ ಹಾಡು ಅಕ್ಟೋಬರ್ 13ಕ್ಕೆ ಬರ್ತಿದೆ.

  English summary
  Icon Star Allu Arjun's Pushpa makers are in talks with Nora Fatehi for a special number. She has quoted a whopping ₹2cr for doing the same.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X