Don't Miss!
- News
ಬೆಂಗಳೂರಿನಲ್ಲಿ ಇಂದು ಬುಧವಾರ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ
- Lifestyle
ಪ್ಲಾಸ್ಟಿಕ್ ಸರ್ಜರಿ ಕುರಿತ 10 ಆಸಕ್ತಿಕರ ಸಂಗತಿಗಳು
- Sports
ಟಿ20 ಕ್ರಿಕೆಟ್ನಲ್ಲಿ 250 ವಿಕೆಟ್ ಪಡೆದ ಬುಮ್ರಾ: ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್
- Finance
ಮೇ 17ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಮಾಹಿತಿ ಬಹಿರಂಗ: 528 ಕಿ.ಮೀ ರೇಂಜ್, ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್
- Technology
ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ ಬಿಡುಗಡೆ! ಡೌನ್ಲೋಡ್ ಮಾಡುವುದು ಹೇಗೆ?
- Education
Oil India Recruitment 2022 : 16 ನರ್ಸಿಂಗ್ ಟ್ಯೂಟರ್ ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಪುಷ್ಪ' ನಿರ್ದೇಶಕರಿಗೆ ಬಂತು ಬಾಲಿವುಡ್ ಸ್ಟಾರ್ ಕರೆ: ಬಂಪರ್ ಆಫರ್!
ಅಲ್ಲು ಅರ್ಜುನ್ ನಟಿಸಿ, ಸುಕುಮಾರ್ ನಿರ್ದೇಶಿಸಿರುವ 'ಪುಷ್ಪ' ಸಿನಿಮಾ ಬಹಳ ದೊಡ್ಡ ಹಿಟ್ ಆಗಿದೆ. ಗಳಿಕೆಯಲ್ಲಿ ಬಾಲಿವುಡ್ ಸಿನಿಮಾಗಳನ್ನು ನಿವಾಳಿಸಿ ಎಸೆದಿದೆ. 'ಪುಷ್ಪ' ಸಿನಿಮಾದ ಕತೆ, ಮೇಕಿಂಗ್ ಅನ್ನು ಬಾಲಿವುಡ್ಡಿಗರು ಮೆಚ್ಚಿ, ಚರ್ಚೆಗಳನ್ನು ನಡೆಸಿದ್ದಾರೆ.
ಕರಣ್ ಜೋಹರ್ ಈಗಾಗಲೇ 'ಪುಷ್ಪ' ಸಿನಿಮಾ ನೋಡಿ ಮಾರು ಹೋಗಿದ್ದಾರೆ. ಟ್ವೀಟ್ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕರಣ್ ಮಾತ್ರವೇ ಅಲ್ಲದೆ ಹಲವು ಬಾಲಿವುಡ್ಡಿಗರು 'ಪುಷ್ಪ'ನ ಜೋರಿಗೆ ಮರಳಾಗಿದ್ದಾರೆ. ಅವರಲ್ಲಿ ಸ್ಟಾರ್ ನಟ ಅಕ್ಷಯ್ ಕುಮಾರ್ ಸಹ ಒಬ್ಬರು.
ಅಕ್ಷಯ್ ಕುಮಾರ್ 'ಪುಷ್ಪ' ಸಿನಿಮಾ ವೀಕ್ಷಿಸಿದ್ದು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ವೀಕ್ಷಿಸಿದ ಬಳಿಕ ಕೂಡಲೇ ನಿರ್ದೇಶಕ ಸುಕುಮಾರ್‌ಗೆ ಕರೆ ಮಾಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಒಂದು ಭರ್ಜರಿ ಆಫರ್ ಅನ್ನು ಸಹ ನೀಡಿದ್ದಾರೆ.

ಸುಕುಮಾರ್‌ಗೆ ಅಕ್ಷಯ್ ಕುಮಾರ್ ಕರೆ
ಸುಕುಮಾರ್‌ಗೆ ಕರೆ ಮಾಡಿರುವ ಅಕ್ಷಯ್ ಕುಮಾರ್ ಬಾಲಿವುಡ್ ಸಿನಿಮಾ ನಿರ್ದೇಶಿಸುವ ಆಫರ್ ನೀಡಿದ್ದಾರೆ. ಸುಕುಮಾರ್ ನಿರ್ದೇಶಿಸುವ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರೇ ಹೀರೋ. ಆದರೆ ಇದು ಇನ್ನು ಆಫರ್ ಹಂತದಲ್ಲಿ ಇದೆಯೇ ಹೊರತು ಮಾತುಕತೆ ಆಗಿಲ್ಲ. ಮಾತುಕತೆ ಆಗುವುದುದಾರೂ ಅಕ್ಷಯ್ ಕುಮಾರ್ ಆಗಲಿ ಸುಕುಮಾರ್ ಆಗಲಿ ಈ ವರ್ಷಾಂತ್ಯದ ವರೆಗೆ ಬಿಡುವಾಗಿಲ್ಲ.

ಅಕ್ಷಯ್ ಕುಮಾರ್ ಜೊತೆ ಕೆಲಸ ಮಾಡುವಾಸೆ: ಸುಕುಮಾರ್
ಸುಕುಮಾರ್ ಸಹ 'ಪುಷ್ಪ' ಸಿನಿಮಾದ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡುತ್ತಾ. ''ಯಾವ ನಟ ನಟಿಸಿದರೆ ಉತ್ತಮ ಎಂಬುದನ್ನು ಕತೆಯೇ ನಿಶ್ಚಯಿಸುತ್ತದೆ. ಕತೆ ಯಾರಿಗೆ ಒಪ್ಪುತ್ತದೆ ಎಂಬುದರ ಆಧಾರದಲ್ಲಿ ಮಾತ್ರವೇ ನಾನು ನಟರನ್ನು ಆರಿಸಿಕೊಳ್ಳುತ್ತೇನೆ. ಆದರೆ ಬಾಲಿವುಡ್‌ನಲ್ಲಿ ಯಾರೊಟ್ಟಿಗಾದರೂ ಕೆಲಸ ಮಾಡಬೇಕು ಎಂಬ ಆಸೆಯಿದ್ದರೆ ಅದು ಅಕ್ಷಯ್ ಕುಮಾರ್ ಜೊತೆಗೆ'' ಎಂದಿದ್ದಾರೆ ಸುಕುಮಾರ್.

ಎರಡು ಸಿನಿಮಾಗಳು ಸುಕುಮಾರ್ ಮುಂದೆ
ಸುಕುಮಾರ್ ಪ್ರಸ್ತುತ 'ಪುಷ್ಪ 2' ಸಿನಿಮಾದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 'ಪುಷ್ಪ' ಸಿನಿಮಾದ ಮೊದಲ ಭಾಗದ ಅಂತ್ಯದಲ್ಲಿ ಪುಷ್ಪಗೆ ಹೊಸ ವಿಲನ್ ಒಬ್ಬ ಎದುರಾಗಿದ್ದಾನೆ ಆತನೇ ಬನಾವರ್ ಸಿಂಗ್ ಶೇಕಾವತ್. 'ಪುಷ್ಪ 2' ಸಿನಿಮಾದಲ್ಲಿ ಪುಷ್ಪ ಅನ್ನು ಬನಾವರ್ ಸಿಂಗ್ ಶೇಕಾವತ್ ಹೇಗೆ ಕಾಡಿಸುತ್ತಾನೆ. ಬನಾವರ್ ಸಿಂಗ್ ಹಾಕುವ ಗಾಳಗಳಿಂದ ಪುಷ್ಪ ಹೇಗೆ ತಪ್ಪಿಸಿಕೊಳ್ಳುತ್ತಾನೆ ಎಂಬ ಕತೆಯನ್ನು ಒಳಗೊಂಡಿರಲಿದೆ. 'ಪುಷ್ಪ 2' ಸಿನಿಮಾದಲ್ಲಿ ಇನ್ನಷ್ಟು ಹೊಸ ಪಾತ್ರಗಳ ಸೇರ್ಪಡೆ ಆಗಲಿದೆ ಎನ್ನಲಾಗುತ್ತಿದೆ. 'ಪುಷ್ಪ 2' ಬಳಿಕ ವಿಜಯ್ ದೇವರಕೊಂಡ ನಟನೆಯ 'ರ್ಯಾಂಪೇಜ್' ಹೆಸರಿನ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

ಅಕ್ಷಯ್ ಕುಮಾರ್ ಮುಂದೆ ಇವೆ ಹಲವು ಸಿನಿಮಾಗಳು
ಇನ್ನು ಅಕ್ಷಯ್ ಕುಮಾರ್ ಅಂತೂ ಬಹಳ ಬ್ಯುಸಿ ನಟ. ವರ್ಷಕ್ಕೆ ಕನಿಷ್ಟ 5 ರಿಂದ 6 ಸಿನಿಮಾಗಳಲ್ಲಿ ಅಕ್ಷಯ್ ನಟಿಸುತ್ತಾರೆ. 2022 ರಲ್ಲಿಯಂತೂ ಅಕ್ಷಯ್ ಮುಂದೆ ರಾಶಿ ಸಿನಿಮಾಗಳಿವೆ. ಸದ್ಯಕ್ಕೆ 'ರಾಮ್ ಸೇತು', 'ಪೃಥ್ವಿರಾಜ್' ಹಾಗೂ 'ಬಚ್ಚನ್ ಪಾಂಡೆ' ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಇದೀಗ 'ಸೆಲ್ಫಿ' ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಅದರ ಜೊತೆಗೆ 'ಗೋರ್ಖಾ' ಹೆಸರಿನ ದೇಶ ಪ್ರೇಮದ ಕತೆಯುಳ್ಳ ಸಿನಿಮಾದಲ್ಲಿ ನಟಿಸಲಿದ್ದಾರೆ. 'ರಕ್ಷಾ ಬಂಧನ್', 'ಓ ಮೈ ಗಾಡ್ 2', 'ಮಿಷನ್ ಸಿಂಡ್ರೆಲಾ', 'ಹೇರಾ ಪೇರಿ 3', 'ರೌಡಿ ರಾಥೋಡ್ 2', 'ಬಡೇ ಮಿಯಾ ಚೋಟೆ ಮಿಯಾ', 'ಮಹಿಳಾ ಮಂಡಲಿ', '2 ಎಕ್ಸ್‌ಎಲ್' ಸಿನಿಮಾಗಳಲ್ಲಿ ಅಕ್ಷಯ್ ನಟಿಸಲಿದ್ದಾರೆ.