400 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಾ 'ಪುಷ್ಪ 2' ?

ಸ್ಟೈಲಿಸ್ಟ್ ಸ್ಟಾರ್ ನಟ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ವಿಶ್ವದಾದ್ಯಂತ ಭಾರೀ ಸೆನ್ಸ್‌ಷನ್ ಮೂಡಿಸಿತ್ತು. ಸಿನಿಮಾದ ಹಾಡು, ಡೈಲಾಗ್‌ಗಳು ವಿದೇಶದಲ್ಲೂ ಹೆಚ್ಚು ಪ್ರಸಿದ್ದಿ ಪಡೆದುಕೊಂಡಿತ್ತು. ಸಿನಿಮಾ ಕೂಡ ಅಷ್ಟೇ ಪ್ರಮಾಣದಲ್ಲಿ ಸಕ್ಸಸ್ ಕಂಡಿತ್ತು.

'ಪುಷ್ಪ' ಸಿನಿಮಾದಲ್ಲಿ ಸ್ಟೈಲಿಶ್ ಸ್ಟಾರ್‌ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್‌ ಆಗಿ ಭರ್ಜರಿ ಯಶಸ್ಸು ಕಂಡಿತ್ತು. ಬಾಕ್ಸಾಫೀಸ್‌ನಲ್ಲೂ ಭರ್ಜರಿ ಕಲೆಕ್ಷನ್‌ ಮಾಡಿಕೊಂಡಿತ್ತು. 'ಪುಷ್ಪ' ಸಿನಿಮಾ ರಿಲೀಸ್ ಸಮಯದಲ್ಲಿ 'ಪುಷ್ಪ ಭಾಗ 2' ಬರುತ್ತದೆ ಎಂಬ ಗುಸುಗುಸು ಹೆಚ್ಚಾಗಿತ್ತು. ಇದಕ್ಕೆ ಚಿತ್ರತಂಡ ಕೂಡ 'ಪುಷ್ಪ' ಸಕ್ಸಸ್‌ ಆದ ಬಳಿಕ 'ಪುಷ್ಪ 2' ಮಾಡುವುದಾಗಿ ಘೋಷಿಸಿದರು. ಅಂದಿನಿಂದ ಇಂದಿನವರೆಗೂ 'ಪುಷ್ಪ 2' ಚಿತ್ರ ಹೇಗೆ ಬರಲಿದೆ ಎಂಬ ಚರ್ಚೆಗಳು ಆಗುತ್ತಲೇ ಇವೆ.

ಸದ್ಯ ಚರ್ಚೆಗಳ ನಡುವೆಯೇ 'ಪುಷ್ಪ' ಸಿನಿಮಾ ತಂಡದಿಂದ ಹೊಸದೊಂದು ವಿಷಯ ಹೊರಬಿದ್ದಿದೆ. 'ಪುಷ್ಪ 2' ಚಿತ್ರ ಇನ್ನು ಸೆಟ್‌ ಏರುವ ಮೊದಲೆಯೇ ಪ್ರೇಕ್ಷಕ ವಲಯದಲ್ಲಿ ಭಾರೀ ಹೈಪ್ ಕ್ರಿಯೇಟ್ ಮಾಡಿಕೊಂಡಿದೆ. ಹೀಗಾಗಿ 'ಪುಷ್ಪ ಭಾಗ 1' ಸಕ್ಸಸ್‌ ಆಗಿರುವ ಹಿನ್ನೆಲೆ ಚಿತ್ರತಂಡಕ್ಕೂ ಕೂಡ 'ಪುಷ್ಪ 2' ಸಿನಿಮಾವನ್ನು ಅದ್ಧೂರಿಯಾಗಿ ಮಾಡಬೇಕಾದ ಒತ್ತಡ ಹೆಚ್ಚಿದೆ. ಪ್ರೇಕ್ಷಕರ ನಿರೀಕ್ಷೆಯೂ ಕೂಡ ಹಾಗೇ ಇದೆ. ಹೀಗಾಗಿ ಚಿತ್ರತಂಡ ಈಗಿನಿಂದಲೇ ಚಿತ್ರದ ಕೆಲಸಗಳನ್ನು ಪ್ರಾರಂಭಿಸಿದೆ.

Pushpa Part 2 With A Budget Of Rs 400 Crore?

ಸದ್ಯ ಈಗ 'ಪುಷ್ಪ 2' ಚಿತ್ರ 400 ಕೋಟಿ ಬಜೆಟ್‌ನಲ್ಲಿ ತಯಾರಾಗಲಿದೆ ಎಂಬ ಚರ್ಚೆ ಶುರುವಾಗಿದೆ. 'ಪುಷ್ಪ' ಕ್ಕೆ 194 ಕೋಟಿ ಬಜೆಟ್ ಹಾಕಿ ಚಿತ್ರ ತಯಾರಿಸಲಾಗಿತ್ತು. ಈಗ 'ಪುಷ್ಪ 2'ಗೆ 400 ಕೋಟಿ ಬಜೆಟ್ ಹಾಕಲಾಗುತ್ತದೆ ಎಂದು ಹೇಳಲಾಗುತ್ತಿದ್ದು, 'ಪುಷ್ಪ 2' ನಲ್ಲೂ ಯಾವುದೇ ಬಾಲಿವುಡ್ ಕಲಾವಿದರು ಇರುವುದಿಲ್ಲ ಎಂದು ಹೇಳಲಾಗುತ್ತಿದೆ.

ಈಗಾಗಲೇ 'ಪುಷ್ಪ ಭಾಗ 2'ಗೆ ಹೈ ವೋಲ್ಟೆಜ್ ಸ್ಕ್ರೀಪ್‌ನ್ನು ಚಿತ್ರದ ನಿರ್ದೇಶಕ ಸುಕುಮಾರ್ ರೆಡಿ ಮಾಡಿದ್ದಾರೆ. ಜೂನ್ ಅಥವಾ ಜುಲೈನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಈ ಹಿಂದೆ 'ಪುಷ್ಪ' ದಲ್ಲಿ ಚಿತ್ರೀಕರಿಸಿದ್ದ ಅರಣ್ಯದಲ್ಲಿ ಭಾಗಶಃ 'ಪುಷ್ಪ 2' ಚಿತ್ರೀಕರಣ ನಡೆಯಲಿದೆ. ಮುಂದಿನ ವರ್ಷ ಜನವರಿ ವೇಳೆಗೆ ಚಿತ್ರೀಕರಣ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದ್ದು, ಇದಾದ ಬಳಿಕ ಪೋಸ್ಟ್ ಪ್ರೊಡೆಕ್ಷನ್ ಕೆಲಸಗಳನ್ನು ಕನಿಷ್ಟ ನಾಲ್ಕು ತಿಂಗಳಲ್ಲಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆಯಂತೆ. 'ಪುಷ್ಪ 2' ಸಿನಿಮಾವನ್ನು ಅದ್ದೂರಿಯಾಗಿ ಮಾಡಲಿದ್ದು, ಇದಕ್ಕಾಗಿ ಚಿತ್ರದ ನಿರ್ಮಾಪಕರು 400 ಕೋಟಿ ಬಂಡವಾಳ ಹಾಕಲು ಮುಂದಾಗಿದ್ದಾರೆ ಎಂಬ ವಿಚಾರ ಈಗ ಚಿತ್ರರಂಗದಲ್ಲಿ ಬಿಸಿ ಬಿಸಿ ಚರ್ಚೆಯಾಗಿದೆ.

Pushpa Part 2 With A Budget Of Rs 400 Crore?

ಒಟ್ಟಿನಲ್ಲಿ 'ಪುಷ್ಪ'ಗಿಂತ 'ಪುಷ್ಪ 2' ಚಿತ್ರದಲ್ಲಿ ಹೆಚ್ಚಿನ ವಿಶೇಷತೆಗಳಿರಲಿದ್ದು, ಸಿನಿಮಾ ತಂಡಕ್ಕೂ ಸಿನಿಮಾವನ್ನು ಪ್ರೇಕ್ಷಕರ ನಿರೀಕ್ಷೆಗೂ ಮೀರಿ ಮಾಡುವ ಒತ್ತಡ ಇರುವುದರಿಂದ ಹೆಚ್ಚಿನ ಶ್ರಮವಹಿಸಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಏನೇ ಆದರೂ ಮುಂದಿನ ವರ್ಷ ಸಿನಿಮಾ ರಿಲೀಸ್ ಆಗುವುದು ಖಚಿತವಾಗಿದ್ದು, ಸಿನಿಮಾ ಹೇಗೆ ಮೂಡಿ ಬರಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.

More from Filmibeat

English summary
Pushpa Part 2 With a Budget Of Rs 400 Crore?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X