ಅಂದು ಕೈಬಿಟ್ಟು ಹೋಗಿದ್ದ 'ಜಾನಿ' ಮತ್ತೆ ರಚಿತಾ ರಾಮ್ ತೆಕ್ಕೆಗೆ.!
ದುನಿಯಾ ವಿಜಯ್ ಮತ್ತು ಪ್ರೀತಂ ಗುಬ್ಬಿ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ.
ಈ ಮೊದಲೇ ರಚಿತಾ ರಾಮ್ ಈ ಚಿತ್ರಕ್ಕೆ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ, ಅಂತಿಮ ಕ್ಷಣದಲ್ಲಿ ರಚಿತಾ ರಾಮ್ ಅವರು ಈ ಸಿನಿಮಾದಿಂದ ಹೊರ ಬಂದಿದ್ದರು. ಇದೀಗ, ಮತ್ತೆ ಜಾನಿಗೆ ಜೋಡಿಯಾಗಲು ಡಿಂಪಲ್ ಕ್ವೀನ್ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ರಚಿತಾ ರಾಮ್ ಅವರು ಈ ಹಿಂದೆ ಹೊರ ಬಂದ ನಂತರ ಯುಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ಗೆ ಈ ಅವಕಾಶ ಹೋಗಿತ್ತು. ಅವರು ಕೂಡ ಒಪ್ಪಿಕೊಂಡಿದ್ದರು. ಆದ್ರೀಗ, ಶ್ರದ್ಧಾ ಅವರ ಡೇಟ್ ಸಮಸ್ಯೆಯಿಂದ ಈ ಚಿತ್ರವನ್ನ ಕೈಬಿಡಲು ನಿರ್ಧರಿಸಿದ್ದು, ಮತ್ತೆ ರಚಿತಾ ರಾಮ್ ಅವರನ್ನೇ ಕರೆತರಲಾಗಿದೆಯಂತೆ.
'ಜಾನಿ' ಚಿತ್ರದ ಮುಂದುವರೆದ ಭಾಗವಾಗಿರುವ ಈ ಚಿತ್ರದಲ್ಲಿ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರವನ್ನ ಸ್ವತಃ ವಿಜಯ್ ಅವರೇ ನಿರ್ಮಾಣ ಮಾಡಲಿದ್ದಾರೆ. ಈ ಚಿತ್ರಕ್ಕಾಗಿಯೇ ವಿಶೇಷವಾದ ಸೆಟ್ ಹಾಕಲಾಗುತ್ತಿದೆ. ಕಲಾ ನಿರ್ದೇಶಕ ಮೋಹನ್ ಬಿ.ಕೆರೆಗೆ ಈ ಸೆಟ್‍ನ ಜವಾಬ್ದಾರಿ ವಹಿಸಲಾಗಿದೆ. ಈ ಕಡೆ 'ಕನಕ' ಚಿತ್ರವನ್ನ ಮುಗಿಸಿರುವ ದುನಿಯಾ ವಿಜಯ್ ಜಾನಿ ಸ್ವೀಕೆಲ್ ಚಿತ್ರೀಕರಣ ಆರಂಭಿಸಿದ್ದಾರೆ. ಮತ್ತೊಂದೆಡೆ ರಚಿತಾ ರಾಮ್ ಕೂಡ 'ಭರ್ಜರಿ' ಸಕ್ಸಸ್ ನಂತರ 'ಜಾನಿ' ತಂಡವನ್ನ ಸೇರಿಕೊಳ್ಳಲಿದ್ದಾರೆ.


Click it and Unblock the Notifications











