»   » ಓಹೋ... ದರ್ಶನ್ ಗೆ ಮತ್ತೆ ರಚಿತಾ ರಾಮ್ ನಾಯಕಿ ಅಂತೆ.!

ಓಹೋ... ದರ್ಶನ್ ಗೆ ಮತ್ತೆ ರಚಿತಾ ರಾಮ್ ನಾಯಕಿ ಅಂತೆ.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ 'ಕುರುಕ್ಷೇತ್ರ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. 'ಕುರುಕ್ಷೇತ್ರ' ಮುಗಿಯುವ ತನಕ, ತಮ್ಮ ಮುಂದಿನ ಸಿನಿಮಾದ ಬಗ್ಗೆ ದರ್ಶನ್ ಗಮನ ಕೊಡಲ್ಲ. ಹೀಗಿದ್ದರೂ, ದರ್ಶನ್ ರವರ 51ನೇ ಸಿನಿಮಾ ಬಗ್ಗೆ ವರ್ಷದಿಂದಲೂ ಸುದ್ದಿ ಆಗುತ್ತಲೇ ಇದೆ.

ದರ್ಶನ್ ರವರ 51ನೇ ಚಿತ್ರವನ್ನ ಬಿ.ಸುರೇಶ್ ಹಾಗೂ ಶೈಲಜಾ ನಾಗ್ ನಿರ್ಮಾಣ ಮಾಡಲಿದ್ದು, ಪಿ.ಕುಮಾರ್ ಆಕ್ಷನ್ ಕಟ್ ಹೇಳಲಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರಕ್ಕೆ ಸದ್ಯ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಗಾಂಧಿನಗರದ ಖಾಸ್ ಖಬರ್ ಪ್ರಕಾರ, ಇದೇ ಚಿತ್ರದಲ್ಲಿ 'ದಾಸ' ದರ್ಶನ್ ಗೆ 'ಬುಲ್ ಬುಲ್' ರಚಿತಾ ರಾಮ್ ನಾಯಕಿ ಆಗುತ್ತಾರಂತೆ.

Rachita Ram to pair opposite Darshan in his 51st movie

'ಗೌಪ್ಯತೆ' ಕಾಪಾಡುತ್ತಿರುವ ರಚಿತಾ ರಾಮ್ ಹಿಂದಿದ್ಯಾ ಕೆಟ್ಟ ಅನುಭವ.?

ಈಗಾಗಲೇ ಚಿತ್ರತಂಡದವರು ಈ ಬಗ್ಗೆ ರಚಿತಾ ರಾಮ್ ಬಳಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ. ಆದ್ರೆ, ಯಾವುದೂ ಇನ್ನೂ ಪಕ್ಕಾ ಆಗಿಲ್ಲ ಅಷ್ಟೆ.

ಒಂದ್ವೇಳೆ, ಈ ಚಿತ್ರಕ್ಕೆ ರಚಿತಾ ರಾಮ್ ಗ್ರೀನ್ ಸಿಗ್ನಲ್ ಕೊಟ್ಟರೆ, ದರ್ಶನ್-ರಚಿತಾ ಜೋಡಿಯ ಹ್ಯಾಟ್ರಿಕ್ ಸಿನಿಮಾ ಇದಾಗಲಿದೆ. 'ಬುಲ್ ಬುಲ್' ಹಾಗೂ 'ಅಂಬರೀಶ' ಚಿತ್ರದಲ್ಲಿ ದರ್ಶನ್ ಹಾಗೂ ರಚಿತಾ ರಾಮ್ ಜೋಡಿಯಾಗಿ ಕಾಣಿಸಿಕೊಂಡಿದ್ದರು.

ಕಡೆಗೂ ಮದುವೆ, ಗಾಸಿಪ್ ಬಗ್ಗೆ ಮೌನ ಮುರಿದ ರಚಿತಾ ರಾಮ್.!

ಅಂದ್ಹಾಗೆ, ರಚಿತಾ ರಾಮ್ ಈಗ 'ಜಾನಿ ಜಾನಿ ಎಸ್ ಪಪ್ಪಾ' ಹಾಗೂ 'ಅಯೋಗ್ಯ' ಚಿತ್ರಗಳ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ.

English summary
According to the Grapevine, Rachita Ram to pair opposite Darshan in his 51st movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada