ಭಾರಿ ಮೊತ್ತಕ್ಕೆ 'ರಾಧೆ-ಶ್ಯಾಮ್' ಹಕ್ಕು ಮಾರಾಟ: ಆದರೂ ಮೊದಲ ಸ್ಥಾನವಿಲ್ಲ!

ಪ್ರಭಾಸ್‌ ಪ್ರಸ್ತುತ ಭಾರತದ ಅತಿ ದೊಡ್ಡ ಸ್ಟಾರ್ ನಟರಲ್ಲಿ ಪ್ರಮುಖರು ಎನ್ನಲಾಗುತ್ತಿದೆ. ಅವರ ತಾರಾ ಮೌಲ್ಯ ಬಾಲಿವುಡ್‌ ಸ್ಟಾರ್ ನಟರಿಗಿಂತಲೂ ಹೆಚ್ಚೆಂಬ ಲೆಕ್ಕಾಚಾರವೂ ಇದೆ. ಹೀಗಾಗಿಯೇ ಪ್ರಭಾಸ್ ಮೇಲೆ ನೂರಾರು-ಸಾವಿರಾರು ಕೋಟಿ ಹಣ ಹೂಡಲು ನಿರ್ಮಾಪಕರು ರೆಡಿಯಾಗಿದ್ದಾರೆ.

ಇದೀಗ ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಈ ಸಿನಿಮಾಕ್ಕೆ ನೂರಾರು ಕೋಟಿಗಳ ಒಟಿಟಿ ಆಫರ್‌ ಬಂದರೂ ಸಹ ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡಬೇಕು ಎಂಬ ಹಠ ಚಿತ್ರತಂಡದ್ದು.

Recommended Video

ಪ್ರಭಾಸ್ ಗೆ 50 ಕೋಟಿ ಕೊಟ್ಟ RRR ನಿರ್ಮಾಪಕ, ಏನಿದು ಬಿಗ್ ಪ್ಲಾನ್

ಹಲವು ಅಡೆ-ತಡೆಗಳ ಬಳಿಕ 'ರಾಧೆ-ಶ್ಯಾಮ್' ಸಿನಿಮಾವು ಮಾರ್ಚ್ 11 ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡುವುದು ಖಾತ್ರಿಯಾಗಿದೆ. ಸಿನಿಮಾವು ಬಿಡುಗಡೆ ಆಗುವ ಮುಂಚೆಯೇ ನೂರಾರು ಕೋಟಿಯ ಬ್ಯುಸಿನೆಸ್‌ ಅನ್ನು ಈ ಸಿನಿಮಾ ಮಾಡಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಹಕ್ಕನ್ನು ಹೊರತುಪಡಿಸಿ ಇನ್ನೆಲ್ಲ ಹಕ್ಕುಗಳನ್ನು (ಆಡಿಯೋ ಬಿಟ್ಟು) ಒಂದೇ ಸಂಸ್ಥೆ ನೂರಾರು ಕೋಟಿಗೆ ಮಾರಾಟ ಮಾಡಿದೆ.

ಭಾರಿ ಮೊತ್ತಕ್ಕೆ 'ರಾಧೆ-ಶ್ಯಾಮ್' ಹಕ್ಕು ಮಾರಾಟ

ಭಾರಿ ಮೊತ್ತಕ್ಕೆ 'ರಾಧೆ-ಶ್ಯಾಮ್' ಹಕ್ಕು ಮಾರಾಟ

'ರಾಧೆ-ಶ್ಯಾಮ್' ಸಿನಿಮಾದ ಡಿಜಿಟಲ್ ಅಂದರೆ ಒಟಿಟಿ ಬಿಡುಗಡೆ ಹಕ್ಕು ಹಾಗೂ ಟಿವಿಯಲ್ಲಿ ಪ್ರಸಾರ ಮಾಡಲು ಬೇಕಾದ ಸ್ಯಾಟಲೈಟ್ ಹಕ್ಕನ್ನು ಒಂದೇ ಸಂಸ್ಥೆಗೆ 250 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ ಎನ್ನಲಾಗುತ್ತಿದೆ. ಹಕ್ಕುಗಳನ್ನು ಖರೀದಿಸಿದ ಸಂಸ್ಥೆಯ ಹೆಸರು ಬಹಿರಂಗಗೊಂಡಿಲ್ಲವಾದರೂ ಈ ಹಕ್ಕನ್ನು ಜೀ ಸಂಸ್ಥೆ ಖರೀದಿಸಿರುವ ಬಗ್ಗೆ ಗಾಳಿ ಸುದ್ದಿಗಳು ಜೋರಾಗಿಯೇ ಹರಿದಾಡುತ್ತಿವೆ.

ಭಾರಿ ಮೊತ್ತಕ್ಕೆ ಸ್ಯಾಟಲೈಟ್ ಹಕ್ಕು ಮಾರಾಟ

ಭಾರಿ ಮೊತ್ತಕ್ಕೆ ಸ್ಯಾಟಲೈಟ್ ಹಕ್ಕು ಮಾರಾಟ

250 ಕೋಟಿ ರೂಪಾಯಿಗೆ ಒಟಿಟಿ ಹಾಗೂ ಸ್ಯಾಟಲೈಟ್ ಹಕ್ಕು ಮಾರಾಟವಾದರೂ ಸಹ ಇದು ಭಾರತದ ನಂಬರ್ ಒನ್ ಡೀಲ್ ಅಲ್ಲ. ಅತಿ ಹೆಚ್ಚು ಮೊತ್ತಕ್ಕೆ ಒಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಮಾರಾಟ ಮಾಡಿರುವ ಸಿನಿಮಾ ತೆಲುಗಿನ 'ಆರ್ಆರ್ಆರ್'. ಈ ಸಿನಿಮಾವು ಸ್ಯಾಟಲೈಟ್ ಹಾಗೂ ಒಟಿಟಿ ಹಕ್ಕುಗಳನ್ನು ಬರೋಬ್ಬರಿ 325 ಕೋಟಿ ಮೊತ್ತಕ್ಕೆ ಮಾರಾಟ ಮಾಡಿದೆ. ಈ ಸಿನಿಮಾವು ಮಾರ್ಚ್ 25 ರಂದು ತೆರೆಗೆ ಬರಲಿದೆ. 'ರಾಧೆ-ಶ್ಯಾಮ್' ಸಿನಿಮಾಕ್ಕಿಂತಲೂ ಹೆಚ್ಚಿನ ನಿರೀಕ್ಷೆಯನ್ನು ಈ ಸಿನಿಮಾ ಹುಟ್ಟಿಸಿದೆ.

ಪ್ರೀತಿ ಮತ್ತು ಭವಿಷ್ಯದ ಕತೆ ಹೊಂದಿರುವ ಸಿನಿಮಾ

ಪ್ರೀತಿ ಮತ್ತು ಭವಿಷ್ಯದ ಕತೆ ಹೊಂದಿರುವ ಸಿನಿಮಾ

'ರಾಧೆ-ಶ್ಯಾಮ್' ಸಿನಿಮಾವು ಪ್ರೀತಿ ಮತ್ತು ಭವಿಷ್ಯದ ಕತೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ನಟ ಪ್ರಭಾಸ್ ಹಸ್ತಸಾಮುದ್ರಿಕಾ ವಿದ್ಯೆ ಪ್ರವೀಣನ ಪಾತ್ರದಲ್ಲಿ ನಟಿಸಿದ್ದಾರೆ. ಭವಿಷ್ಯವನ್ನು ಬಲ್ಲ ಪ್ರಭಾಸ್ ತನ್ನ ಪ್ರೀತಿಯ ಅಥವಾ ಪ್ರಿಯತಮೆಯ ಭವಿಷ್ಯವನ್ನು ಹೇಗೆ ಬದಲಾಯಿಸುತ್ತಾನೆ. ಹೇಗೆ ವಿಧಿಯೊಟ್ಟಿಗೆ ಹೋರಾಡುತ್ತಾನೆ ಎಂಬ ಕತೆಯನ್ನು ಈ ಸಿನಿಮಾ ಹೊಂದಿದೆ. ಸಿನಿಮಾದ ಕೆಲ ಹಾಡುಗಳು ಹಾಗೂ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು ಹಾಡುಗಳು ಸೂಪರ್ ಹಿಟ್ ಆಗಿವೆ.

ಪೂಜಾ ಹೆಗ್ಡೆ ನಾಯಕಿ

ಪೂಜಾ ಹೆಗ್ಡೆ ನಾಯಕಿ

'ರಾಧೆ-ಶ್ಯಾಮ್' ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಪೂಜಾ ಹೆಗ್ಡೆ ನಟಿಸಿದ್ದಾರೆ. ಸಿನಿಮಾವನ್ನು ರಾಧಾ ಕೃಷ್ಣ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಟಿ-ಸೀರೀಸ್ ಹಾಗೂ ಯುವಿ ಕ್ರಿಯೇಶನ್ಸ್ ಜಂಟಿಯಾಗಿ ನಿರ್ಮಾಣ ಮಾಡಿವೆ. ಸಿನಿಮಾಕ್ಕೆ ಒಟ್ಟು 350 ಕೋಟಿ ಬಜೆಟ್ ಹಾಕಲಾಗಿದ್ದು ಸಿನಿಮಾದ ಬಹುಭಾಗವನ್ನು ಯುರೋಪ್ ದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. 70-80 ರ ದಶಕದಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಹೊಂದಿದ್ದು, ಈಗಾಗಲೇ ಎರಡು ಬಾರಿ ಬಿಡುಗಡೆ ದಿನಾಂಕವನ್ನು ಬದಲು ಮಾಡಿ ಕೊನೆಗೆ ಈಗ ಮಾರ್ಚ್ 11 ಕ್ಕೆ ಬಿಡುಗಡೆ ಮಾಡಲು ಸಜ್ಜಾಗಿದೆ.

ಹಲವು ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿ

ಹಲವು ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿ

'ರಾಧೆ-ಶ್ಯಾಮ' ಬಳಿಕ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ. ಆ ಸಿನಿಮಾವನ್ನು 'ಕೆಜಿಎಫ್' ನಿರ್ಮಾಣ ಮಾಡಿರುವ ವಿಜಯ್ ಕಿರಗಂದೂರ್ ನಿರ್ಮಾಣ ಮಾಡಿದ್ದಾರೆ. ಆ ಸಿನಿಮಾದ ಬಳಿಕ ಭಾರತದ ಅತಿ ದೊಡ್ಡ ಬಜೆಟ್‌ ಸಿನಿಮಾ ಆದ 'ಆದಿಪುರುಷ್' ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸಿದ್ದಾರೆ. ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಕೃತಿ ಸೆನನ್ ಸೀತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಸಿನಿಮಾದ ಬಳಿಕ ನಾಗ್ ಅಶ್ವಿನ್ ನಿರ್ದೇಶನದ ಹೆಸರಿಡ ಸಿನಿಮಾ ಬಿಡುಗಡೆ ಆಗಲಿದೆ. ಆ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿ. ಅಮಿತಾಬ್ ಬಚ್ಚನ್ ಸಹ ಇರಲಿದ್ದಾರೆ. ಬಳಿಕ ಅರ್ಜುನ್ ರೆಡ್ಡಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಸಿನಿಮಾದಲ್ಲಿ ಪ್ರಭಾಸ್ ನಟಿಸಲಿದ್ದಾರೆ.

More from Filmibeat

English summary
Prabhas starer Radhe Shyam movie digital and satellite rights sold for whooping 250 crore rs. RRR movei digital and satellite rights sold for 325 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X