»   » 'ಕೆ.ಜಿ.ಎಫ್'ನಲ್ಲಿ ಒಂದಾದ ಯಶ್ ಮತ್ತು ರಾಧಿಕಾ ಪಂಡಿತ್

'ಕೆ.ಜಿ.ಎಫ್'ನಲ್ಲಿ ಒಂದಾದ ಯಶ್ ಮತ್ತು ರಾಧಿಕಾ ಪಂಡಿತ್

Posted By:
Subscribe to Filmibeat Kannada

ಗಾಂಧಿನಗರದ ಕ್ಯೂಟೆಸ್ಟ್ ಕಪಲ್ ಅಂತಂದ್ರೆ ಅದು ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್. 'ರಿಯಲ್' ಜೋಡಿ ಅಂತ ಪ್ರಸಿದ್ಧಿ ಪಡೆದಿರುವ ಈ ಇಬ್ಬರು ಒಟ್ಟಾಗಿ ನಟಿಸಿರುವ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗಿವೆ.

'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಡುವ ಜೊತೆಗೆ ಮೊದಲ ಬಾರಿಗೆ ಒಂದಾಗಿದ್ದ ಈ ಜೋಡಿಯ 'ಡ್ರಾಮಾ' ಸ್ಯಾಂಡಲ್ ವುಡ್ ನಲ್ಲಿ ಕ್ಲಿಕ್ ಆಗಿದೆ. ನಿಜ ಹೇಳ್ಬೇಕಂದ್ರೆ, 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಹರೆಯದ ಪ್ರೇಮಿಗಳಿಗೆ ಇಷ್ಟವಾಗಿರುವುದು ಇಬ್ಬರ 'ರಿಯಲ್' ಕೆಮಿಸ್ಟ್ರಿ ಕಮಾಲ್ ನಿಂದ. ['ರಾಜಾಹುಲಿ' ಯಶ್ ಕೈಹಿಡಿಯಲಿರುವ ರಾಣಿ ಯಾರು?]


Radhika Pandit to star opposite Rocking Star Yash in KGF

ಇದನ್ನ ಮನಗಂಡಿರುವ ಯುವ ನಿರ್ದೇಶಕ ಪ್ರಶಾಂತ್ ನೀಲ್, ಮತ್ತೊಮ್ಮೆ ಈ ಜೋಡಿಯನ್ನ ಒಂದಾಗಿಸುವುದಕ್ಕೆ ಮುಂದಾಗಿದ್ದಾರೆ. 'ಉಗ್ರಂ' ಚಿತ್ರದ ನಂತ್ರ ಪ್ರಶಾಂತ್ ನೀಲ್ ರಾಕಿಂಗ್ ಸ್ಟಾರ್ ಯಶ್ ಗಾಗಿ 'ಕೆ.ಜಿ.ಎಫ್' ಅಂತ ಸಿನಿಮಾ ಮಾಡುತ್ತಿರುವ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ರಿ. ['ಕೆ.ಜಿ.ಎಫ್'ನಲ್ಲಿ ರಾಕಿಂಗ್ ಸ್ಟಾರ್ ಯಶ್ ದರ್ಬಾರ್]


ಇದೀಗ ಈ ಚಿತ್ರಕ್ಕೆ ಯಶ್ ಗೆ ನಾಯಕಿಯಾಗಿ ರಾಧಿಕಾ ಪಂಡಿತ್ ಬೆಸ್ಟ್ ಅಂತ ನಿರ್ದೇಶಕ ಪ್ರಶಾಂತ್ ನೀಲ್ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಯಶ್ ಮತ್ತು ರಾಧಿಕಾ ಜೊತೆ ಚರ್ಚೆ ಕೂಡ ಮಾಡಿದ್ದಾರೆ.


Radhika Pandit to star opposite Rocking Star Yash in KGF

ಹೇಳಿ ಕೇಳಿ ಯಶ್-ರಾಧಿಕಾ 'ರಿಯಲ್' ಕಪಲ್. ಒಟ್ಟಾಗಿ ನಟಿಸುವ ಚಾನ್ಸ್ ಸಿಕ್ಕರೆ ಯಾರಾದರೂ ಬೇಡ ಅನ್ನುತ್ತಾರಾ. 'ಆಗಲಿ ನೋಡೋಣ' ಅಂದಿದ್ದಾರಂತೆ. ಬರೋಬ್ಬರಿ 40 ಕೋಟಿ ರೂಪಾಯಿಯಲ್ಲಿ 'ಕೆ.ಜಿ.ಎಫ್' ಚಿತ್ರ ರೆಡಿಯಾಗಲಿದೆ. [ಗೋವಾದಲ್ಲಿ ಯಶ್-ರಾಧಿಕಾ ಪಂಡಿತ್ ಮಾಡಿದ್ದೇನು?]


'ಮಾಸ್ಟರ್ ಪೀಸ್' ಚಿತ್ರಕ್ಕೆ ಬಂಡವಾಳ ಹಾಕುತ್ತಿರುವ ವಿಜಯ್ ಕಿರಗಂದೂರ್, 'ಕೆ.ಜಿ.ಎಫ್'ನ ಅದ್ದೂರಿಯಾಗಿ ನಿರ್ಮಾಣ ಮಾಡಲಿದ್ದಾರೆ. 'ಮಾಸ್ಟರ್ ಪೀಸ್' ಮುಗಿದ ಬಳಿಕ 'ಕೆ.ಜಿ.ಎಫ್'ಗೆ ಮಿಸ್ಟರ್ ಯಶ್ ಕಾಲಿಟ್ಟ ಮೇಲೆ ಮಿಸ್ ರಾಧಿಕಾ ಪಂಡಿತ್ ಜೊತೆಯಾಗಲಿದ್ದಾರೆ.

English summary
Kannada Actress Radhika Pandit is roped in for the lead role in Rocking Star Yash starrer KGF. According to the reports, Director Prashanth Neel is in talks with Radhika Pandhit.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada