For Quick Alerts
  ALLOW NOTIFICATIONS  
  For Daily Alerts

  ವಿನಯ್ ಮದ್ವೆ ಬಗ್ಗೆ ರಾಘಣ್ಣ ಕೊಟ್ರು ಬಿಗ್ ಬ್ರೇಕಿಂಗ್.!

  |

  ದೊಡ್ಮೆನೆ ಕುಟುಂಬದ ಯುವರಾಣಿ ಆಗಬೇಕು ಅಂದರೆ ಪುಣ್ಯ ಮಾಡಿರಬೇಕು. ಇಂತಹ ಅದೃಷ್ಟ ಪಡೆದವರು ಶ್ರೀದೇವಿ. ನಟ ರಾಘವೇಂದ್ರ ರಾಜ್ ಕುಮಾರ್ ದ್ವಿತೀಯ ಪುತ್ರ ಯುವ ರಾಜ್ ಕುಮಾರ್ ಬಾಳ ಸಂಗತಿ ಆಗಿರುವವರು ಶ್ರೀದೇವಿ.

  ಅಂದಹಾಗೆ, ಇದೀಗ ತಮ್ಮ ಮನೆಯ ಯುವರಾಣಿಯರ ಬಗ್ಗೆ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿದ್ದಾರೆ. 'ನಮ್ಮನೆ ಯುವರಾಣಿ' ಎಂಬ ಹೊಸ ಧಾರಾವಾಹಿ ಕಲರ್ಸ್ ಕನ್ನಡ ಪ್ರಸಾರವಾಗುತ್ತಿದ್ದು, ಈ ಧಾರಾವಾಹಿಯ ವಿಶೇಷವಾಗಿ ಒಂದು ವಿಡಿಯೋ ಮೂಲಕ ತಮ್ಮ ಮನೆಯ ಯುವರಾಣಿಯರನ್ನು ರಾಘಣ್ಣ ವರ್ಣಿಸಿದ್ದಾರೆ.

  ನಿಶ್ಚಿತಾರ್ಥದ ಸಂಭ್ರಮದಲ್ಲಿ ಅಣ್ಣಾವ್ರ ಮೊಮ್ಮಗ ಯುವ ರಾಜ್ ಕುಮಾರ್

  ರಾಘವೇಂದ್ರ ರಾಜ್ ಕುಮಾರ್ ಮಾತುಗಳನ್ನು ಕೇಳಿದರೆ ಯುವ ರಾಜ್ ಕುಮಾರ್ ರೀತಿ ವಿನಯ್ ರಾಜ್ ಕುಮಾರ್ ಕೂಡ ಪ್ರೀತಿ ಮಾಡುತ್ತಿದ್ದಾರೆಯೇ ಅಥವಾ ಅವರು ಮದುವೆ ತಯಾರಿ ಕೂಡ ಶುರುವಾಗಿದೆಯೇ ಎನ್ನುವ ಪ್ರಶ್ನೆ ಮೂಡಿಸಿದೆ. ಮುಂದೆ ಓದಿ...

  ರಾಘಣ್ಣ ಮಾತುಗಳು

  ರಾಘಣ್ಣ ಮಾತುಗಳು

  ''ನಮ್ಮ ಮನೆಯಲ್ಲಿ ರಾಣಿ ನನ್ನ ಹೆಂಡತಿ. ಯುವರಾಣಿ ನನ್ನ ಸೊಸೆ. ನನ್ನ ಚಿಕ್ಕ ಮಗನ ನಿಶ್ಚಿತಾರ್ಥವಾಗಿದೆ. ಶ್ರೀ ದೇವಿ ಅಂತ. ''ಇಬ್ಬರು ಯುವರಾಣಿಯರು ಇದ್ದಾರೆ. ದೊಡ್ಡ ಮಗನಿಗೆ ಆದ ಮೇಲೆ ಹೇಳುತ್ತೇನೆ.'' ನಾನು ಯಾಕೆ ಇದನ್ನು ಹೇಳುತ್ತಿದ್ದೇನೆ ಅಂದರೆ, ಮನೆ ಮನೆ ಯುವರಾಣಿಯ ಕಥೆ ಹೇಳಲು ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಸೀರಿಯಲ್ ಬರುತ್ತಿದೆ. ನಾನು ನಮ್ಮ ಮನೆಯ ಯುವರಾಣಿ ಬಗ್ಗೆ ಹೇಳಾಯ್ತು. ನೀವು ನಿಮ್ಮ ಮನೆ ಯುವರಾಣಿಯ ಬಗ್ಗೆ ಹೇಳೋದು ಮರೀಬೇಡಿ.'' ಎಂದು ರಾಘಣ್ಣ ಹೇಳಿದ್ದಾರೆ.

  ಇಬ್ಬರು ಯುವರಾಣಿಯರು

  ''ನಮ್ಮ ಮನೆಯಲ್ಲಿ ಇಬ್ಬರು ಯುವ ರಾಣಿಯರು ಇದ್ದಾರೆ. ದೊಡ್ಡ ಮಗನಿಗೆ ಆದ ಮೇಲೆ ಹೇಳುತ್ತೇನೆ.'' ಎಂದು ಯುವರಾಣಿಯರ ಬಗ್ಗೆ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿದ್ದಾರೆ. ಈ ಮಾತುಗಳ ಅರ್ಥ ವಿನಯ್ ರಾಜ್ ಕುಮಾರ್ ಮದುವೆಯಾಗುವ ಹುಡುಗಿ ಯಾರು ಎನ್ನುವದು ಸಹ ಈಗಾಗಲೇ ನಿಗಧಿಯಾಗಿದೆಯೇ ಎನ್ನುವ ಪ್ರಶ್ನೆ ಮೂಡಿಸಿದೆ.

  ಸಾಂಸ್ಕೃತಿಕ ನಗರಿಯಲ್ಲಿ ಅಣ್ಣಾವ್ರ ಮೊಮ್ಮಗನ ನಿಶ್ಚಿತಾರ್ಥ

  ಸೊಸೆಯರೇ ಯುವರಾಣಿಯರು

  ಸೊಸೆಯರೇ ಯುವರಾಣಿಯರು

  ತಮ್ಮ ಮನೆಯ ಸೊಸೆಯರೇ ಯುವರಾಣಿಯರು ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ. ಅವರ ಮಾತು ಸೊಸೆಯರ ಮೇಲಿನ ಪ್ರೀತಿಯನ್ನು ಹೇಳುತ್ತಿದೆ. ಇಬ್ಬರು ಗಂಡು ಮಕ್ಕಳನ್ನ ಹೊಂದಿರುವ ರಾಘಣ್ಣ ಹಾಗೂ ಮಂಗಳ ದಂಪತಿಗೆ ಸೊಸೆಯರೇ ಹೆಣ್ಣು ಮಕ್ಕಳು.

  'ನಮ್ಮನೆ ಯುವರಾಣಿ' ಹೊಸ ಧಾರಾವಾಹಿ

  'ನಮ್ಮನೆ ಯುವರಾಣಿ' ಹೊಸ ಧಾರಾವಾಹಿ

  ನಟ ರಾಘವೇಂದ್ರ ರಾಜ್ ಕುಮಾರ್ ತಮ್ಮ ಮನೆಯ ಯುವರಾಣಿಯರ ಬಗ್ಗೆ ಮಾತನಾಡಿದ್ದು, 'ನಮ್ಮನೆ ಯುವರಾಣಿ' ಹೊಸ ಧಾರಾವಾಹಿದ ಮೂಲಕ. ಇದು ಕಲರ್ಸ್ ಕನ್ನಡ ವಾಹಿನಿಯ ಹೊಸ ಧಾರಾವಾಹಿ ಆಗಿದೆ. ಈ ಸೀರಿಯಲ್ ಇದೇ ಸೋಮವಾರ ದಿಂದ ಸಂಜೆ 6.30ಕ್ಕೆ ಪ್ರಸಾರವಾಗಲಿದೆ.

  ಫೋಟೋ ನೋಡಿ: ಯುವ ರಾಜ್ ಕುಮಾರ್ ನಿಶ್ಚಿತಾರ್ಥದಲ್ಲಿ ವಿದ್ವತ್ ಮಿಂಚಿಂಗ್.!

  ಯುವ ಬಳಿಕ ವಿನಯ್ ವಿವಾಹ

  ಯುವ ಬಳಿಕ ವಿನಯ್ ವಿವಾಹ

  ಯುವ ರಾಜ್ ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಕಳೆದ ಜುಲೈ 5 ರಂದು ಮೈಸೂರಿನಲ್ಲಿ ನಡೆದಿದೆ. ಯುವ ರಾಜ್ ಕುಮಾರ್ ಹಾಗೂ ಶ್ರೀದೇವಿ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದೆ. ಯುವ ಬಳಿಕ ವಿನಯ್ ಮದುವೆ ನಡೆಯಲಿದೆ.

  English summary
  Kannada actor Raghavendra Rajkumar spoke about his daughter in law.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X