For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿ 'RRR' ಸಿನಿಮಾದ ಟೈಟಲ್ ಹಿಂದಿನ ರಹಸ್ಯ ಬಹಿರಂಗ

  |

  ತೆಲುಗಿನ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮುಂದಿನ ವರ್ಷ ತೆರೆಗೆ ಬರಲು ಸಜ್ಜಾಗುತ್ತಿದೆ.

  RRR ಟೈಟಲ್ ನ ಫುಲ್ ಮೀನಿಂಗ್ ಏನು ಗೊತ್ತಾ..? | Raj Mouli | Ramcharan | NTR | Filmibeat Kannada

  ಆರ್ ಆರ್ ಆರ್ ಸಿನಿಮಾ ಸೆಟ್ಟೇರಿ ವರ್ಷವೆ ಆಗಿದೆ. ಆದರೆ RRR ಎಂದರೆ ಏನು ಎನ್ನುವ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಚಿತ್ರತಂಡ ಸಹ ಈ ಬಗ್ಗೆ ಯಾವುದು ಮಾಹಿತಿ ಬಹಿರಂಗ ಪಡಿಸಿರಲಿಲ್ಲ. ಆರ್ ಆರ್ ಆರ್ ಎಂದರೆ ರಾಜಮೌಳಿ, ರಾಮ್ ಚರಣ್ ಮತ್ತು ತಾರಕ್ ರಾಮ್ ಎಂದೆ ಎಲ್ಲರು ಅಂದುಕೊಂಡಿದ್ದರು. ಆದರೀಗ ಟೈಟಲ್ ನ ರಹಸ್ಯ ಬಹಿರಂಗವಾಗಿದೆ. ಆರ್ ಆರ್ ಆರ್ ಎಂದರೆ ಏನು? ಮುಂದೆ ಓದಿ..

  RRR ಚಿತ್ರದಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಪಾತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವ್ಗನ್.?RRR ಚಿತ್ರದಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಪಾತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವ್ಗನ್.?

  ಆರ್ ಆರ್ ಆರ್ ಎಂದರೆ ಇದೇನಾ?

  ಆರ್ ಆರ್ ಆರ್ ಎಂದರೆ ಇದೇನಾ?

  ರಾಜಮೌಳಿ ನಿರ್ದೇಶನದ ಬಹು ನಿರೀಕ್ಷೆಯ ಆರ್ ಆರ್ ಆರ್ ಸಿನಿಮಾದ ಟೈಟಲ್ ರಹಸ್ಯ ಬಹಿರಂಗವಾಗಿದೆ. ಆರ್ ಆರ್ ಆರ್ ಎಂದರೆ 'ರಘುಪತಿ ರಾಘವ ರಾಜಾರಾಮ್' ಎಂದು ಹೇಳಗುತ್ತಿದೆ. ಆದರೆ ಈ ಬಗ್ಗೆ ಇನ್ನು ಚಿತ್ರತಂಡ ಅಧಿಕೃತಗೊಳಿಸಿಲ್ಲ. ಈಗಾಗಲೆ ಆರ್ ಆರ್ ಆರ್ ಎಂದರೆ 'ರಘುಪತಿ ರಾಘವ ರಾಜಾರಾಮ್' ಎಂದು ವೈರಲ್ ಆಗುತ್ತಿದೆ.

  'RRR' ಸಿನಿಮಾದ ಪ್ರಮುಖ ದೃಶ್ಯ ಲೀಕ್: ಸಿಟ್ಟಾದ ರಾಜಮೌಳಿ'RRR' ಸಿನಿಮಾದ ಪ್ರಮುಖ ದೃಶ್ಯ ಲೀಕ್: ಸಿಟ್ಟಾದ ರಾಜಮೌಳಿ

  'ರಘುಪತಿ ರಾಘವ ರಾಜಾರಾಮ್' ಟೈಟಲ್ ಯಾಕೆ?

  'ರಘುಪತಿ ರಾಘವ ರಾಜಾರಾಮ್' ಟೈಟಲ್ ಯಾಕೆ?

  ಕೆಲವು ದಿನಗಳ ಹಿಂದೆ ಚಿತ್ರತಂಡ ಆರ್ ಆರ್ ಆರ್ ಎಂದರೆ ಏನು ಎಂದು ತಿಳಿಸುವಂತೆ ಚಿತ್ರಪ್ರಿಯರಲ್ಲಿ ಹೇಳಿದ್ದರು. ಆದರೀಗ ಚಿತ್ರತಂಡ ರಘುಪತಿ ರಾಘವ ರಾಜಾರಾಮ್ ಎಂದು ಫೈನಲ್ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಸಾಲು ಖ್ಯಾತ ಭಜನೆ ಗೀತೆಯಾಗಿದ್ದು, ಮಹಾತ್ಮ ಗಾಂಧಿಗೆ ತೀರಾ ಆಪ್ತವಾದ ಭಜನೆಯಾಗಿತ್ತು. ಪ್ಯಾನ್ ಇಂಡಿಯ ಸಿನಿಮಾವಾಗಿದ್ದರಿಂದ ಈ ಸಾಲು ಸಿನಿಮಾಗೆ ಆಪ್ತವೆಂದು ಇದೆ ಸಾಲುಗಳನ್ನು ಟೈಟಲ್ ಆಗಿ ಇಡಲಾಗಿದೆ ಎಂದು ಹೇಳಲಾಗುತ್ತಿದೆ.

  ಚಿತ್ರದಲ್ಲಿದೆ ದೊಡ್ಡ ತಾರಾಬಳಗ

  ಚಿತ್ರದಲ್ಲಿದೆ ದೊಡ್ಡ ತಾರಾಬಳಗ

  ಚಿತ್ರದಲ್ಲಿ ಜೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಆಲಿಯಾ ಭಟ್, ಸಮುದ್ರಖಣಿ, ರಾಹುಲ್ ರಾಮಕೃಷ್ಣ, ರೇ ಸ್ಟೀವೆನ್ಸನ್, ಓಲಿವಿಯಾ ಮೊರಿಸ್ ಸೇರಿದಂತೆ ಬಾಲಿವುಡ್ ನಟ ಖ್ಯಾತ ನಟ ಅಜಯ್ ದೇವ್ಗನ್ ಸಹ ಚಿತ್ರದಲ್ಲಿದ್ದಾರೆ.

  ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಕೊಟ್ಟ ರಾಜಮೌಳಿ.!ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಕೊಟ್ಟ ರಾಜಮೌಳಿ.!

  ಮುಂದಿನ ವರ್ಷ ಸಿನಿಮಾ ರಿಲೀಸ್

  ಮುಂದಿನ ವರ್ಷ ಸಿನಿಮಾ ರಿಲೀಸ್

  ಇತ್ತೀಚಿಗಷ್ಟೆ ಚಿತ್ರತಂಡ ಚಿತ್ರದ ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಸಿನಿಮಾ ಮುಂದಿನ ವರ್ಷ 2021 ಜನವರಿ 8ಕ್ಕೆ ತೆರೆಗೆ ಬರುತ್ತಿದೆ. ಸಂಕ್ರಾಂತಿ ಹಬ್ಬದ ಶುಭ ಸಂದರ್ಭದಲ್ಲಿ ಆರ್ ಆರ್ ಆರ್ ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರತಂಡ ಅನೌನ್ಸ್ ಬಹಿರಂಗ ಪಡಿಸಿದೆ.

  English summary
  Director Rajamouli and team planning to fix Raghupathi Raghava Rajaram for RRR movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X