»   » ಆ ಫೋಟೋ ನೋಡಿ ಭೇಜಾ ಫ್ರೈ ಆದ ರಾಗಿಣಿ

ಆ ಫೋಟೋ ನೋಡಿ ಭೇಜಾ ಫ್ರೈ ಆದ ರಾಗಿಣಿ

By: ಜೀವನರಸಿಕ
Subscribe to Filmibeat Kannada

ಮೊನ್ನೆ ಮೊನ್ನೆ ಗ್ಲಾಮರ್ ಡಾಲ್ ರಾಗಿಣಿ ದ್ವಿವೇದಿ ಅವರ ಅದೊಂದು ವಿಚಿತ್ರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿ, ಮಾಧ್ಯಮಗಳ ಕೈಗೆ ಸಿಕ್ಕಿ ಸುದ್ದಿಯಾಗಿ ಶುದ್ಧಿಯಾಗಿ ಒಂದೇ ದಿನದಲ್ಲಿ ರದ್ದಿಯಾಯ್ತು. ಆದರೆ ಒಂದು ವರ್ಷದ ನಂತರ ಹೀಗ್ಯಾಕಾಯ್ತು ಅಂತ ರಾಗಿಣಿ ಶ್ಯಾನೆ ಬೇಜಾರಾಗಿದ್ದಾರಂತೆ.

ಮಾಧ್ಯಮದವ್ರು ಕಾಲ್ ಮಾಡಿದ್ರೆ ಏನಾದ್ರೂ ಎಡವಟ್ಟು ಆಗುತ್ತೆ ಅಂತ ಭಯಪಡ್ತಿದ್ದಾರಂತೆ. ದಯವಿಟ್ಟು ಮತ್ತೆ ಅದನ್ಯಾಕೆ ಸುದ್ದಿ ಮಾಡ್ತೀರಾ. ಬಿಟ್ಬಿಡಿ ಅಂದ್ರೂ ಮೀಡಿಯಾ ಅವರನ್ನು ಬಿಡಬೇಕಲ್ವಾ. ಇದರಿಂದ ರಾಗಿಣಿ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡ್ರಂತೆ. ಈ ಸುದ್ದಿ ಬಂದ ಸಮಯದಲ್ಲಿ ರಾಗಿಣಿ ಬೆಂಗಳೂರಲ್ಲಿ ಇರಲಿಲ್ಲ ಬಾಂಬೆಯಲ್ಲಿ ಶೂಟಿಂಗ್ ನಲ್ಲಿದ್ರು. [ಪಡ್ಡೆಗಳ ನಿದ್ದೆಗೆಡಿಸಿದ ರಾಗಿಣಿ ಎಂಎಂಎಸ್]


ಅದಾದ ಸುಮಾರು ದಿನಗಳ ಮೇಲೂ ಅರ್ಥವಾಗದಿರೋ ವಿಷಯ ಅಂದ್ರೆ ಅದು ರಿಯಲ್ ಫೋಟೋನಾ ಅಥವಾ ಬದಲಾವಣೆ ಮಾಡಿದ ಭಾವಚಿತ್ರನಾ? ಏನು ಅಂತ ರಾಗಿಣಿ ಹೇಳಿಲ್ಲ. ಬಾಂಬೆಯಿಂದ ಬಂದ ಮೇಲೂ ಅದರ ಬಗ್ಗೆ ಮಾತಾಡೋಕೆ ಇಷ್ಟಪಡೋಲ್ಲ ಅಂತ ಹೇಳ್ತಿದ್ದಾರೆ ಗ್ಲಾಮರ್ ಡಾಲ್.

ಅದರ ಬಗ್ಗೆ ಮಾತಾಡಿದ್ರೆ ಮತ್ತೊಮ್ಮೆ ಸುದ್ದಿಯಾಗುತ್ತದೆ, ಮತ್ತೆ ಮತ್ತೆ ಅದೇ ಫೋಟೋ ಎಲ್ಲೆಡೆ ರಾರಾಜಿಸುತ್ತದೆ. ಈ ಪಜೀತಿ ಯಾರಿಗೆ ಬೇಕು. ಎಷ್ಟೇ ಆಗಲಿ ರಾಗಿಣಿ ಕೂಡ ಜಾಣೆ ಅಲ್ವಾ. ಹಾಗಾಗಿ ಆ ಫೋಟೋ ಬಗ್ಗೆ ಏನೂ ಹೇಳದೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

English summary
Actor Ragini Dwivedi maintained a dignified silence over leaked images of wardrobe malfunction. The fact that the pictures are only on mobile chatting platforms is part of a more sinister plan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada