For Quick Alerts
  ALLOW NOTIFICATIONS  
  For Daily Alerts

  ನಟಿ ರಾಗಿಣಿಗಾಗಿ ಇಬ್ಬರು ವ್ಯಕ್ತಿಗಳು ಹೊಡೆದಾಟ: ಕಾರಣ ಪ್ರೀತಿಯಂತೆ.!

  |

  ಸ್ಯಾಂಡಲ್ ವುಡ್ ಹಾಟ್ ಕ್ವೀನ್ ರಾಗಿಣಿ ದ್ವಿವೇದಿ ಅವರಿಗಾಗಿ ಇಬ್ಬರು ವ್ಯಕ್ತಿಗಳು ಹೊಡೆದಾಡಿರುವ ಘಟನೆ ಬೆಳಕಿಗೆ ಬಂದಿದೆ. ನಿನ್ನೆ ರಾತ್ರಿ ಬೆಂಗಳೂರಿನ ರಿಡ್ಜ್ ಕಾರ್ಟನ್ ಹೋಟೆಲ್ ನಲ್ಲಿ ರಾಗಿಣಿ ಎದುರಲ್ಲೇ ಇಬ್ಬರು ಬಡಿದಾಡಿದ್ದಾರೆ ಎನ್ನಲಾಗಿದೆ.

  ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆರ್.ಟಿ.ಓ ಅಧಿಕಾರಿ ರವಿಶಂಕರ್ ಎಂಬುವರ ಜೊತೆ ನಟಿ ರಾಗಿಣಿ ಊಟಕ್ಕೆಂದು ಹೋಗಿದ್ದ ವೇಳೆ ಉದ್ಯಮಿ ಶಿವಪ್ರಕಾಶ್ ಹಲ್ಲೆ ಮಾಡಿದ್ದಾರಂತೆ.

  ನಟಿ ರಾಗಿಣಿಯ ಬಾಡಿಗಾರ್ಡ್ ಅಪಘಾತದಲ್ಲಿ ನಿಧನ

  ಏನಿದು ರಾಗಿಣಿ ಮತ್ತು ಸ್ನೇಹಿತರ ಗಲಾಟೆ ಎಂದು ನೋಡಿದಾಗ ಅದರ ಹಿಂದೆ ರೋಚಕ ಕಥೆಯೇ ತೆರೆದುಕೊಳ್ಳುತ್ತೆ. ಅಷ್ಟಕ್ಕೂ, ರಾತ್ರಿ ಹೋಟೆಲ್ ನಲ್ಲಿ ನಡೆದಿದ್ದೇನು? ಅಲ್ಲಿ ಗಲಾಟೆ ಆಗಲು ಕಾರಣವೇನು? ರಾಗಿಣಿ ಯಾಕೆ ಅವರ ಜೊತೆಯಲ್ಲಿದ್ದರು? ಮುಂದೆ ಓದಿ....

  ರವಿಶಂಕರ್ ಜೊತೆ ರಾಗಿಣಿ ಇದ್ದಿದ್ದೇ ಜಗಳಕ್ಕೆ ಕಾರಣ

  ರವಿಶಂಕರ್ ಜೊತೆ ರಾಗಿಣಿ ಇದ್ದಿದ್ದೇ ಜಗಳಕ್ಕೆ ಕಾರಣ

  ಕೋಲಮಂಗಲದ ಆರ್.ಟಿ.ಓ ಕಚೇರಿಯಲ್ಲಿ ಅಧಿಕಾರಿಯಾಗಿರುವ ರವಿಶಂಕರ್ ಅವರ ಜೊತೆ ನಟಿ ರಾಗಿಣಿ ಊಟಕ್ಕೆಂದು ಹೋಟೆಲ್ ಗೆ ಹೋಗಿದ್ದರು. ಈ ವೇಳೆ ಇವರಿಬ್ಬರನ್ನ ಒಟ್ಟಿಗೆ ನೋಡಿದ ಉದ್ಯಮಿ ಮತ್ತು ನಿರ್ಮಾಪಕ ಶಿವಪ್ರಕಾಶ್, ರವಿಶಂಕರ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

  ರಮ್ಯಾ ಬರ್ತಡೇಗೆ ವಿಶ್ ಮಾಡಿದ ರಾಗಿಣಿ ಇಟ್ಟ ಬೇಡಿಕೆ ಏನು.?

  ರಾಗಿಣಿ ಜೊತೆ ನೀನ್ಯಾಕೆ ಸುತ್ತಾಡ್ತಿಯಾ?

  ರಾಗಿಣಿ ಜೊತೆ ನೀನ್ಯಾಕೆ ಸುತ್ತಾಡ್ತಿಯಾ?

  ಶಿವಪ್ರಕಾಶ್ ಅವರು ಸ್ನೇಹಿತರ ಜೊತೆ ಪಾರ್ಟಿಗೆಂದು ಹೋಟೆಲ್ ಗೆ ಬಂದಿದ್ದರು. ಇನ್ನೊಂದೆಡೆ ರಾಗಿಣಿ ಮತ್ತು ರವಿಶಂಕರ್ ಊಟಕ್ಕೆಂದು ಹೋಟೆಲ್ ಗೆ ಹೋಗಿದ್ದರು. ಈ ವೇಳೆ ರಾಗಿಣಿ ಅವರನ್ನ ನೋಡಿದ ಶಿವಪ್ರಕಾಶ್, ರವಿಶಂಕರ್ ಮೇಲೆ ಜಗಳಕ್ಕೆ ಮುಂದಾಗಿದ್ದಾರೆ. ಮಾತಿಗೆ ಮಾತು ಬೆಳೆದು ಬಿಯರ್ ಬಾಟಲ್ ನಿಂದ ರವಿ ಮೇಲೆ ಶಿವಪ್ರಕಾಶ್ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

  ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು

  ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು

  ಹಲ್ಲೆಗೆ ಒಳಗಾಗಿರುವ ರವಿಶಂಕರ್ ಅವರು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ರಾಗಿಣಿ ಅವರ ಜೊತೆ ಹೊರಗಡೆ ಓಡಾಡುವಂತಿಲ್ಲ ಎಂದು ಬೆದರಿಕೆಯೊಡ್ಡಿ ಶಿವ ಪ್ರಕಾಶ್ ಹೊಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ದೂರಿನ ಅನ್ವಯ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

  'ನಾಟಿ ಕೋಳಿ' ನಿರ್ದೇಶಕನ ಮೇಲೆ ರಾಗಿಣಿ ಕೋಪವೇಕೆ?

  ಕಾರಣ ಪ್ರೀತಿಯಂತೆ

  ಕಾರಣ ಪ್ರೀತಿಯಂತೆ

  ಅಂದ್ಹಾಗೆ, ಶಿವ ಪ್ರಕಾಶ್ ಮತ್ತು ರಾಗಿಣಿ ಈ ಹಿಂದೆ ಆತ್ಮೀಯರಾಗಿದ್ದರು. ನಂತರ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ಸಂಬಂಧ ಮುರಿದುಬಿದ್ದಿತ್ತು. ಅದಾದ ಬಳಿಕ ಶಿವಪ್ರಕಾಶ್ ಅವರಿಂದ ದೂರವಿದ್ದ ರಾಗಿಣಿ, ಆರ್.ಟಿ.ಓ ಅಧಿಕಾರಿ ರವಿಶಂಕರ್ ಅವರ ಜೊತೆ ಸ್ನೇಹ ಹೊಂದಿದ್ದರು. ಹಾಗಾಗಿ, ಶಿವ ಪ್ರಕಾಶ್ ಕೋಪಗೊಂಡು, ರವಿಶಂಕರ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

  English summary
  An RTO official was caught in the crossfire when he tried to intervene during a heated argument between Kannada actor Ragini Dwivedi and one of her friends at a star hotel on March 15.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X