»   » ಕಿಚ್ಚನಿಗೆ ರಾಗಿಣಿ ನೀರು ಕುಡಿಸೋಕೆ ಟ್ರೈ ಮಾಡಿದ್ರು

ಕಿಚ್ಚನಿಗೆ ರಾಗಿಣಿ ನೀರು ಕುಡಿಸೋಕೆ ಟ್ರೈ ಮಾಡಿದ್ರು

Posted By: ಜೀವನರಸಿಕ
Subscribe to Filmibeat Kannada

ಸಿಸಿಎಲ್ ದಿನಕಳೆದಂತೆ ಕಳೆಯನ್ನ ಹೆಚ್ಚಿಸಿಕೊಳ್ತಾ ಇದೆ. ಕರ್ನಾಟಕ ಬುಲ್ಡೋಜರ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ವಿಜೃಂಬಿಸ್ತಾ ಇದೆ. ಇನ್ನು ಕರ್ನಾಟಕ ಬುಲ್ಡೋಜರ್ಸ್ ತಂಡದ ಗ್ಲಾಮರ್ ಕಿಚ್ಚು ಕೂಡ ಜೋರಾಗಿದೆ. ಸಿಸಿಎಲ್ ನಲ್ಲಿ ಆಟದ ಜಿದ್ದಾಜಿದ್ದಿಯ ಜೊತೆಗೆ ಕಿಚ್ಚಿನ ಜೊತೆ ಗ್ಲಾಮರ್ ಟಚ್ ಇದ್ರೇ ಮಜಾ.

ಈ ಬಾರಿಯ ಸಿಸಿಎಲ್ ನ ಎರಡನೇ ಪಂದ್ಯದಿಂದ ಪ್ರತೀ ಪಂದ್ಯಗಳಲ್ಲೂ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ರಾಗಿಣಿ ಲವಲವಿಕೆಯಿಂದ ಓಡಾಡಿಕೊಂಡು ತಂಡವನ್ನ ಪ್ರೋತ್ಸಾಹಿಸ್ತಾ ಬಂದಿದ್ದಾರೆ. ಆದರೆ ಮ್ಯಾಚ್ ನ ನಡುವೆ ನಾಯಕ ಕಿಚ್ಚ ಸುದೀಲ್ ಗೆ ರಾಗಿಣಿ ನೀರು ಕೊಟ್ರೆ ಸುದೀಪ್ ಕುಡೀತಾ ಇಲ್ಲ. ಬದಲಾಗಿ ಸುದೀಪ್ ಪಕ್ಕದವರ್ಯಾರ ಕೈಯ್ಯಿಂದಲಾದ್ರೂ ನೀರಿನ ಬಾಟಲ್ ತೆಗೆದುಕೊಂಡು ಕುಡೀತಿದ್ದಾರಂತೆ.

Ragini Dwivedi tried to patch up with Sudeep

ಇದರರ್ಥ ಇಷ್ಟರವರೆಗೂ ರಾಗಿಣಿ ನೀರು ಕುಡಿಸಿದ್ದು ಸಾಕು ಅಂತಾನೋ. ಅಥ್ವವಾ ರಾಗಿಣಿ ಅಂದ್ರೆ ಇಷ್ಟ ಇಲ್ವೋ ಯಾರಿಗ್ಗೊತ್ತು. ಆದರೆ ಫೆಬ್ರವರಿ ಎರಡಕ್ಕೆ ಬೆಂಗಳೂರಲ್ಲಿ ನಡೆದ ಚೆನ್ನೈ ರೈನೋಸ್ ಮತ್ತು ಕರ್ನಾಟಕ ಬುಲ್ಡೋಜರ್ಸ್ ನಡುವಿನ ಪಂದ್ಯದಲ್ಲಿ ಕಿಚ್ಚ ಸುದೀಪ್ ಗೆ ಗಾಯ ಆಗಿ ಮೈದಾನದಿಂದ ಡಕೋಟಿಗೆ ಬಂದಾಗ ರಾಗಿಣಿ ನೀರು ಕೊಟ್ರೆ ಕಿಚ್ಚ ಕುಡೀಲಿಲ್ಲ.

ಪಕ್ಕದಲ್ಲಿದ್ದವರ ಕೈಯ್ಯಿಂದ ಮತ್ತೊಂದು ಬಾಟಲ್ ನೀರು ತೆಗೆದುಕೊಂಡು ಕುಡಿದ್ರು. ಪಾಪ ರಾಗಿಣಿ ಪ್ರಯತ್ನವೆಲ್ಲಾ ಹಳ್ಳ ಹಿಡೀತಿದೆ. ತನಗೆ ಅವಕಾಶ ಕೊಟ್ಟ ಕಿಚ್ಚನನ್ನೇ ದೂರ ಮಾಡ್ಕೊಂಡಿರೋ ರಾಗಿಣಿ ಈಗ ಪರಿತಪಿಸೋ ಹಾಗಾಗಿದ್ಯಂತೆ, ಹೌದಾ ರಾಗಿಣಿಯವ್ರೆ?

English summary
The grapevine has it that Sandalwood lasso Ragini Dwivedi tried to patch up with Kichcha Sudeep in Celebrity Cricket League 4 in many times. But Sudeep 'Does not hold water'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada