»   » 'ಒಂದು ಮೊಟ್ಟೆಯ' ಕಥಾನಾಯಕನಿಗೆ ಪುನೀತ್ ಕಡೆಯಿಂದ ಭರ್ಜರಿ ಆಫರ್.!

'ಒಂದು ಮೊಟ್ಟೆಯ' ಕಥಾನಾಯಕನಿಗೆ ಪುನೀತ್ ಕಡೆಯಿಂದ ಭರ್ಜರಿ ಆಫರ್.!

Posted By:
Subscribe to Filmibeat Kannada

ಕಳೆದ ಜುಲೈನಲ್ಲಿ ಬಿಡುಗಡೆಯಾದ 'ಒಂದು ಮೊಟ್ಟೆಯ ಕಥೆ' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ಚಿತ್ರದ ನಾಯಕ ರಾಜ್ ಬಿ ಶೆಟ್ಟಿ ಅವರ ನೈಜ ಅಭಿನಯದ ಮೂಲಕ ಕನ್ನಡದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದ್ದಾರೆ.

ಇದೀಗ, ಮೊಟ್ಟೆಯ ಕಥಾನಾಯಕನಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಡೆಯಿಂದ ಭರ್ಜರಿ ಆಫರ್ ಬಂದಿದೆ. ಚೊಚ್ಚಲ ಚಿತ್ರದ ನಂತರ ಎರಡನೇ ಸಿನಿಮಾ ಮಾಡ್ತಿರುವ ರಾಜ್ ಬಿ ಶೆಟ್ಟಿಗೆ ಮತ್ತೆ 'ಲಾಡು ಬಂದು ಬಾಯಿಗೆ ಬಿದ್ದಿದೆ'.

'ಮೊಟ್ಟೆ' ಚಿತ್ರದ ನಾಯಕನಿಗೆ ಸಿಕ್ಕಿರುವ ಆಫರ್ ಏನು? ಎಂದು ತಿಳಿಯಲು ಮುಂದೆ ಓದಿ......

ಪುನೀತ್ ನಿರ್ಮಾಣದಲ್ಲಿ ರಾಜ್ ಬಿ ಶೆಟ್ಟಿ.!

ಪುನೀತ್ ರಾಜ್ ಕುಮಾರ್ ಹುಟ್ಟುಹಾಕಿರುವ ಪಿ.ಆರ್.ಕೆ ಬ್ಯಾನರ್ ನಿಂದ ಈಗಾಗಲೇ ಒಂದು ಸಿನಿಮಾ ಮೂಡಿ ಬರುತ್ತಿದ್ದು, ಅಷ್ಟರಲ್ಲೇ ಎರಡನೇ ಸಿನಿಮಾಗೆ ತಯಾರಿ ನಡೆಸಿದ್ದಾರೆ. ಈ ಚಿತ್ರದಲ್ಲಿ 'ಒಂದು ಮೊಟ್ಟೆಯ ಕಥೆ' ಚಿತ್ರದ ನಾಯಕ ರಾಜ್ ಬಿ ಶೆಟ್ಟಿ ಅಭಿನಯಿಸಲಿದ್ದಾರೆ ಎನ್ನುವುದು ಹೊಸ ಸುದ್ದಿ.


'ಮೊಟ್ಟೆ' ಖ್ಯಾತಿಯ ರಾಜ್ ಬಿ ಶೆಟ್ಟಿ ಎರಡನೇ ಸಿನಿಮಾ ಶುರುವಾಯ್ತು

ಹೊಸಬರಿಗೆ ಅವಕಾಶ ಕೊಟ್ಟ ಅಪ್ಪು

ಈ ಮೂಲಕ ಮೊದಲೆರಡು ಚಿತ್ರಗಳಲ್ಲಿ ಹೊಸಬರಿಗೆ ಅವಕಾಶ ಕೊಡುವ ಮೂಲಕ ಪವರ್ ಸ್ಟಾರ್ ಹೆಚ್ಚು ಸುದ್ದಿಯಾಗುತ್ತಿದ್ದಾರೆ.

ಪುನೀತ್ ಮತ್ತು ರಕ್ಷಿತ್ ದೊಡ್ಡತನದಿಂದ ಕನ್ನಡ ಚಿತ್ರರಂಗ ಮತ್ತಷ್ಟು ಶ್ರೀಮಂತ

ಹೊಸ ಕಥೆ, ಹೊಸ ನಿರ್ದೇಶಕ

ಇದೊಂದು ಹೊಸ ರೀತಿಯ ಕಥೆ ಆಗಿದ್ದು, ಈ ಚಿತ್ರವನ್ನ ನಿರ್ದೇಶಕ ರಾಧಾಕೃಷ್ಣ ಎಂಬುವವರು ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ಕವಲುದಾರಿ' ನಿರ್ಮಾಣ

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಖ್ಯಾತಿಯ ಹೇಮಂತ್ ರಾವ್ ನಿರ್ದೇಶನ ಹಾಗೂ 'ಆಪರೇಷನ್ ಅಲಮೇಲಮ್ಮ' ಖ್ಯಾತಿಯ 'ರಿಷಿ' ನಟಿಸುತ್ತಿರುವ 'ಕವಲುದಾರಿ' ಚಿತ್ರವನ್ನ ಪುನೀತ್ ತಮ್ಮ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಇದಾದ ನಂತರ ಎರಡನೇ ಸಿನಿಮಾ ಶುರು ಮಾಡಲಿದ್ದಾರಂತೆ.

ಮೂರನೇ ಚಿತ್ರಕ್ಕೆ ತಾವೇ ಹೀರೋ

ಇನ್ನು ಮೊದಲೆರೆಡು ಹೊಸಬರ ಚಿತ್ರಗಳನ್ನ ನಿರ್ಮಾಣ ಮಾಡುತ್ತಿರುವ ಪುನೀತ್ ರಾಜ್ ಕುಮಾರ್, ಮೂರನೇ ಚಿತ್ರದಲ್ಲಿ ತಾವೇ ಅಭಿನಯಿಸಲಿದ್ದಾರಂತೆ. ಈ ಚಿತ್ರಕ್ಕೆ ಸ್ಟಾರ್ ನಿರ್ದೇಶಕ ಶಶಾಂಕ್ ಆಕ್ಷನ್ ಕಟ್ ಹೇಳಲಿದ್ದಾರೆ. 'ಅಂಜನಿಪುತ್ರ' ಸಿನಿಮಾ ಮುಗಿಯುತ್ತಿದ್ದಂತೆಯೇ, ಶಶಾಂಕ್ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಲಿದ್ದಾರೆ.

English summary
Accordingly, Puneeth Rajkumar Produceing his Second project to Ondu Motteya Kathe Hero Raj B Shetty under his production.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X