twitter
    For Quick Alerts
    ALLOW NOTIFICATIONS  
    For Daily Alerts

    ವಿದೇಶದಲ್ಲಿ 'RRR' ಹೇಗೆ ಸಕ್ಸಸ್ ಆಯ್ತು ಅಂತಾನೇ ಅರ್ಥ ಆಗ್ತಿಲ್ಲ: ರಾಜಮೌಳಿ

    |

    'ಬಾಹುಬಲಿ' ಬಳಿಕ ರಾಜಮೌಳಿ ನಿರ್ದೇಶಿಸಿದ RRR ಸಿನಿಮಾ ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದೆ. ಭಾರತದ ಬಾಕ್ಸಾಫೀಸ್ ಕೊಳ್ಳೆ ಹೊಡೆದ ಬಳಿಕ ಈಗ ಪಾಶ್ಚಿಮಾತ್ಯ ದೇಶಗಳಲ್ಲಿ ಈ ಸಿನಿಮಾ ಕ್ರೇಜ್ ಹೆಚ್ಚಾಗಿದೆ. ಅದರಲ್ಲೂ ಅಮೆರಿಕದಲ್ಲಿ ಸಿನಿಮಾ ಬಗ್ಗೆ ಕ್ರೇಜ್ ದುಪ್ಪಟ್ಟಾಗಿದೆ.

    RRR ಡಿಜಿಟಲ್ ರಿಲೀಸ್ ಆಗುತ್ತಿದ್ದಂತೆ ಅಮೆರಿಕದಲ್ಲಿ ಟಾಪ್‌ ಲಿಸ್ಟ್‌ನಲ್ಲಿದೆ. ಹಾಲಿವುಡ್ ಮಂದಿಯನ್ನೂ ಬೆಚ್ಚಿಬೀಳಿಸಿದೆ. ಅಭಿಮಾನಿಗಳು, ವಿಮರ್ಶಕರು, ಫಿಲ್ಮ್ ಮೇಕರ್ಸ್‌ ಅನ್ನೂ ಬೆಚ್ಚಿಬೀಳಿಸಿದೆ. ಕೆಲವರಂತೂ ಆಸ್ಕರ್ ರೇಸ್‌ನಲ್ಲಿ ಈ ಸಿನಿಮಾ ಇರುತ್ತೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಅಮೆರಿಕದಲ್ಲಿ RRR ಕ್ರೇಜ್ ಕಂಡು ಸ್ವತ: ರಾಜಮೌಳಿಯೇ ಥ್ರಿಲ್ ಆಗಿದ್ದಾರೆ.

    ಜ್ಯೂ. ಎನ್‌ಟಿಆರ್- ರಾಮ್‌ಚರಣ್ ಫ್ಯಾನ್ಸ್‌ ಮಧ್ಯೆ ಬೆಂಕಿ ಹಚ್ಚಿದ ಆಸ್ಕರ್ ಅವಾರ್ಡ್!ಜ್ಯೂ. ಎನ್‌ಟಿಆರ್- ರಾಮ್‌ಚರಣ್ ಫ್ಯಾನ್ಸ್‌ ಮಧ್ಯೆ ಬೆಂಕಿ ಹಚ್ಚಿದ ಆಸ್ಕರ್ ಅವಾರ್ಡ್!

    ರಾಜಮೌಳಿ ಟೊರೆಂಟೊ ಅಂತರಾಷ್ಟ್ರೀಯ ಸಿನಿನೋತ್ಸವದಲ್ಲಿ ಭಾಗಿಯಾಗಿದ್ದರು. ಈ ವೇಳೆ RRR ಸಕ್ಸಸ್ ಬಗ್ಗೆ, ಅಮೆರಿಕನ್ನರು ಮೆಚ್ಚಿರೋ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಅಮೆರಿಕದಲ್ಲಿ RRR ಸಿನಿಮಾ ಹೇಗೆ ಸಕ್ಸಸ್ ಆಯ್ತು ಅನ್ನೋದೇ ಅರ್ಥ ಆಗ್ತಿಲ್ಲ ಅಂತ ರಾಜಮೌಳಿ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.

     ಅಮೆರಿಕದಲ್ಲಿ RRR ಸಕ್ಸಸ್

    ಅಮೆರಿಕದಲ್ಲಿ RRR ಸಕ್ಸಸ್

    RRR ಅಮೆರಿಕದ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಕೇವಲ ಅಮೆರಿಕಾದಲ್ಲಿಯೇ RRR ಸಿನಿಮಾ 115 ಕೋಟಿ ರೂ. ಗಳಿಸಿದೆ. ಅಲ್ಲದೆ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆದಾಗಲೂ RRRಗೆ ಉಹೆಗೂ ಮೀರಿದ ಸಕ್ಸಸ್ ಸಿಕ್ಕಿದೆ. ವಾರಗಳ ಕಾಲ ಅಮೆರಿಕದಲ್ಲಿ RRR ನಂ 1 ಸ್ಥಾನದಲ್ಲಿತ್ತು. ಮೂಲಗಳ ಪ್ರಕಾರ, ಈ ಸಿನಿಮಾ ಇಲ್ಲಿವರೆಗೂ ಸುಮಾರು 200 ಕೋಟಿ ರೂ. ಅಧಿಕ ಮೊತ್ತವನ್ನು ಕಲೆ ಹಾಕಿದೆ. ಈ ಮಟ್ಟಿಗೆ ಸಕ್ಸಸ್ ಹೇಗೆ ಸಿಕ್ಕಿತು ಅನ್ನೋದು ಸ್ವತ: ರಾಜಮೌಳಿಗೇ ಅರ್ಥ ಆಗಿಲ್ಲ.

    ನಾಲ್ಕು ಆಸ್ಕರ್ ಬರುವ ಸಾಧ್ಯತೆ; ಯಾರು ಯಾರಿಗೆ ಎಂದು ಭವಿಷ್ಯ ನುಡಿದ ವೆರೈಟಿ ಡಾಟ್ ಕಾಮ್!ನಾಲ್ಕು ಆಸ್ಕರ್ ಬರುವ ಸಾಧ್ಯತೆ; ಯಾರು ಯಾರಿಗೆ ಎಂದು ಭವಿಷ್ಯ ನುಡಿದ ವೆರೈಟಿ ಡಾಟ್ ಕಾಮ್!

    ಹೇಗೆ ಸಕ್ಸಸ್ ಸಿಕ್ತು ಅಂತಾನೇ ಅರ್ಥ ಆಗಿಲ್ಲ

    ಪಾಶ್ಚಿಮಾತ್ಯ ಪ್ರೇಕ್ಷಕರಿಗೆ RRR ಸಿನಿಮಾ ಇಷ್ಟೊಂದು ಇಷ್ಟ ಆಗುತ್ತೆ ಅನ್ನೋದೇ ಗೊತ್ತಿರಲಿಲ್ಲ. ವಿದೇಶದಲ್ಲಿ RRR ರಿಲೀಸ್ ಆದಾಗ, ನನಗೆ ಪ್ರತಿಕ್ರಿಯೆ ಸಿಗೋಕೆ ಶುರುವಾಗಿತ್ತು. ಆಗ ನಾನು ಕೆಲವೇ ಪ್ರತಿಕ್ರಿಯೆಗಳು ಇರಬಹುದು ಎಂದುಕೊಂಡಿದ್ದೆ. ಬಳಿಕ ಕೆಲವು ಪ್ರತಿಕ್ರಿಯೆಗಳು ನೂರು ಆಯ್ತು. ನೂರು ಸಾವಿರ ಆಯ್ತು. ಸಿನಿಮಾರಂಗ ಬೇರೆ ಬೇರೆ ಜನರು RRR ಬಗ್ಗೆ ಮಾತಾಡೋಕೆ ಶುರು ಮಾಡಿದ್ದರು. ಆಗ ನನಗೆ ನನ್ನ ಬಗ್ಗೆ ಹಾಗೂ ನನ್ನ ಸಿನಿಮಾ ಬಗ್ಗೆ ಏನೂ ಗೊತ್ತಿಲ್ಲ ಅಂತ ಅನಿಸಿಬಿಡ್ತು. ನಾನು ಈಗಲೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ." ಎಂದು ರಾಜಮೌಳಿ ಹೇಳಿಕೆ ನೀಡಿದ್ದರು.

     ಜಪಾನ್‌ನಲ್ಲೂ RRR ರಿಲೀಸ್

    ಜಪಾನ್‌ನಲ್ಲೂ RRR ರಿಲೀಸ್

    RRR ಸಿನಿಮಾ ಜಪಾನ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅಕ್ಟೋಬರ್ 21ಕ್ಕೆ ಜಪಾನ್‌ನಲ್ಲಿ RRR ಗ್ಯಾಂಡ್ ಆಗಿ ಬಿಡುಗಡೆಯಾಗುತ್ತಿದೆ. ಅಮೆರಿಕ ಸೇರಿದಂತೆ ಹಲವು ಭಾಗಗಳಲ್ಲಿ ಸಿನಿಮಾ ಸದ್ದು ಮಾಡಿದಂತೆ ಜಪಾನ್‌ನಲ್ಲೂ ಸಿನಿಮಾ ಸದ್ದು ಮಾಡುತ್ತೆ ಅನ್ನೋದು ನಂಬಿಕೆ ಚಿತ್ರತಂಡಕ್ಕಿದೆ. ರಾಜಮೌಳಿ, ರಾಮ್ ಚರಣ್ ಹಾಗೂ ಜೂ.ಎನ್‌ಟಿಆರ್ ಮೂರು ಮಂದಿ ಕೂಡ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

    ಚರಣ್‌- NTR ಇಬ್ಬರ ಪಾತ್ರಕ್ಕೂ ನ್ಯಾಯ ಒದಗಿಸಿದ್ದೀನಿ: ಮುಂದಿನ ಚಿತ್ರದಲ್ಲಿ ಪ್ರಪಂಚವೆಲ್ಲಾ ಸುತ್ತುವ ಕಥೆ!ಚರಣ್‌- NTR ಇಬ್ಬರ ಪಾತ್ರಕ್ಕೂ ನ್ಯಾಯ ಒದಗಿಸಿದ್ದೀನಿ: ಮುಂದಿನ ಚಿತ್ರದಲ್ಲಿ ಪ್ರಪಂಚವೆಲ್ಲಾ ಸುತ್ತುವ ಕಥೆ!

     ಜಪಾನ್‌ನಲ್ಲಿ 'ಬಾಹುಬಲಿ' ಸದ್ದು

    ಜಪಾನ್‌ನಲ್ಲಿ 'ಬಾಹುಬಲಿ' ಸದ್ದು

    'ಬಾಹುಬಲಿ ಪಾರ್ಟ್ 1' ಜಪಾನ್‌ನಲ್ಲಿ ರಿಲೀಸ್ ಆದಾಗ ಜಪಾನ್ ಕರೆನ್ಸಿಯಲ್ಲಿ 7.49 ಮಿಲಿಯನ್ ಕಲೆಕ್ಷನ್ ಆಗಿತ್ತು. ಹಾಗೇ 'ಬಾಹುಬಲಿ 2' ರಿಲೀಸ್ ಆದಾಗ ಜಪಾನಿನ ಕರೆನ್ಸಿಯಲ್ಲಿ 250 ಮಿಲಿಯನ್ ಕಲೆ ಹಾಕಿತ್ತು. ಎರಡೂ ಸಿನಿಮಾಗಳು ಸೇರಿದರೆ, ಭಾರತ ಕರೆನ್ಸಿಯಲ್ಲಿ 17 ಕೋಟಿ ರೂ. ಎನ್ನಬಹುದು. ಈ ಸಕ್ಸಸ್ ಹಿನ್ನೆಲೆಯಲ್ಲಿಯೇ ಮತ್ತೆ ಜಪಾನ್ ಕಡೆ ಮುಖ ಮಾಡುತ್ತಿದ್ದಾರೆ. RRR ಸಿನಿಮಾವನ್ನು ಜಪಾನ್ ಆದ್ಯಂತೆ ರಿಲೀಸ್ ಮಾಡುವುದಕ್ಕೆ ಸಿದ್ಧತೆಗಳನ್ನು ಆರಂಭ ಆಗಿವೆ. ಇದೇ ವೇಳೆ ಪ್ರಚಾರಕ್ಕೆ ರಾಜಮೌಳಿ, ರಾಮ್‌ ಚರಣ್ ಹಾಗೂ ಜೂ.ಎನ್‌ಟಿಆರ್ ಜಪಾನ್‌ ಹೋಗುತ್ತಾರೆ ಅನ್ನೋ ಸುದ್ದಿನೂ ಹರಿದಾಡುತ್ತಿದೆ.

    English summary
    Rajamouli Didn't Understand The Success Of RRR In West: Promoting In Japan.
    Monday, September 19, 2022, 13:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X