'ಆಚಾರ್ಯ' ಸಿನಿಮಾ ಸೋಲಿಗೆ ರಾಜಮೌಳಿ ಕಾರಣ ಅಂತೆ!

ತೆಲುಗಿನಲ್ಲಿ ಬಹುನಿರೀಕ್ಷೆ ಜೊತೆಗೆ ರಿಲೀಸ್ ಆಗಿರುವ ಚಿತ್ರ ಎಂದರೆ ಅದು 'ಆಚಾರ್ಯ'. ಈ ಚಿತ್ರದಲ್ಲಿ ಟಾಲಿವುಡ್‌ನ ದೊಡ್ಡ ಸ್ಟಾರ್ ನಟರಾದ ಚಿರಂಜೀವಿ ಮತ್ತು ರಾಮ್ ಚರಣ್ ತೇಜ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಟೀಸರ್, ಟ್ರೈಲರ್ ಎಲ್ಲವೂ ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು.

'ಆಚಾರ್ಯ' ಚಿತ್ರದಲ್ಲಿ ರಾಮ್‌ ಚರಣ್, ಚಿರಂಜೀವಿ ಇದ್ದಾರೆ ಅಂದ್ಮೇಲೆ ಅದು ಮೆಗಾ ಕುಟುಂಬದ ಅಭಿಮಾನಿಗಳಿಗೆ ಹಬ್ಬವೇ ಸರಿ. ಹಲವು ವರ್ಷಗಳ ನಂತರ ತಂದೆ, ಮಗ ಒಂದೇ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಗಾಗಿ ಸಿನಿಮಾ ಒಂದು ರೇಂಜಿಗೆ ಇರುತ್ತೆ ಎನ್ನಲಾಗಿತ್ತು. ಆದರೆ ಚಿತ್ರ ರಿಲೀಸ್ ಆದ ಬಳಿಕ ಎಲ್ಲವೂ ಉಲ್ಟಾ ಆಗಿದೆ.

'ಆಚಾರ್ಯ' ಚಿತ್ರ ಫ್ಲಾಮ್ ಸಿನಿಮಾ ಎಂದು ಟಾಲಿವುಡ್‌ನಲ್ಲಿ ಈಗಾಗಲೇ ವರದಿ ಆಗಿದೆ. ಇದು ಬಾಕ್ಸಾಫೀಸ್‌ನ ದೊಡ್ಡ ದುರಂತ ಎನ್ನಲಾಗುತ್ತಿದೆ. ಈ ದುರಂತಕ್ಕೆ ಟಾಪ್ ನಿರ್ದೇಶಕ ರಾಜಮೌಳಿ ಕಾರಣ ಎನ್ನಲಾಗುತ್ತಿದೆ. ಅದು ಹೇಗೆ ಎನ್ನುವುದನ್ನು ಮುಂದೆ ಓದಿ...

ಫ್ಲಾಪ್ ಚಿತ್ರಗಳ ಪಟ್ಟಿಯಲ್ಲಿ 'ಆಚಾರ್ಯ'!

ಫ್ಲಾಪ್ ಚಿತ್ರಗಳ ಪಟ್ಟಿಯಲ್ಲಿ 'ಆಚಾರ್ಯ'!

ತೆಲುಗಿನ 'ಆಚಾರ್ಯ' ಚಿತ್ರ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದೆ. ಒಂದು ಕಡೆ ಚಿತ್ರದ ಬಗ್ಗೆ ನೆಗೆಟಿವ್ ವಿಮರ್ಶೆಗಳು ಬಂದರೆ ಮತ್ತೊಂದು ಕಡೆಗೆ ಚಿರಂಜೀವಿ, ರಾಮ್ ಚರಣ್ ತೇಜ ಬಗ್ಗೆ ಇರುವ ಕ್ರೇಜ್ ಕೂಡ ಈ ಚಿತ್ರದ ಪಾಲಿಗೆ ಸತ್ತು ಹೋದಂತಿದೆ. ಮೊದಲ ದಿನವೇ 'ಆಚಾರ್ಯ' ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ಬಂದಿದೆ. ಮೂರು ದಿನ ಕಳೆದರೂ 'ಆಚಾರ್ಯ' ಚಿತ್ರದ ಕಲೆಕ್ಷನ್ ಮೇಲೆ ಏರಿಲ್ಲ. ಹಾಗಾಗಿ ಟಾಲಿವುಡ್‌ನ ಫ್ಲಾಪ್ ಚಿತ್ರಗಳ ಪಟ್ಟಿ ಸೇರಿದೆ ಮೆಗಾಸ್ಟಾರ್ ಸಿನಿಮಾ 'ಆಚಾರ್ಯ'.

'ಆಚಾರ್ಯ'ನಿಗೆ ರಾಜಮೌಳಿ ಬ್ಯಾಡ್ ಲಕ್!

'ಆಚಾರ್ಯ'ನಿಗೆ ರಾಜಮೌಳಿ ಬ್ಯಾಡ್ ಲಕ್!

'ಆಚಾರ್ಯ' ಚಿತ್ರ ನೋಡಿದವರೆಲ್ಲ ಸಿನಿಮಾ ಚೆನ್ನಾಗಿ ಇಲ್ಲ ಎನ್ನುತ್ತಿದ್ದಾರೆ. ಆದರೆ, ಈ ಚಿತ್ರದ ಸೋಲಿಗೆ ನಿರ್ದೇಶಕ ರಾಜಮೌಳಿ ಕಾರಣ ಎನ್ನಲಾಗುತ್ತಿದೆ. ಹೌದು ಈ ಚಿತ್ರಕ್ಕೂ, ರಾಜಮೌಳಿಗೂ ಯಾವುದೆ ಸಂಬಂಧ ಇಲ್ಲ. ಆದರೂ ಕೂಡ ಈ ಚಿತ್ರದ ಸೋಲಿಗೆ ರಾಜಮೌಳಿ ಕಾರಣ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ಜೋರಾಗಿದೆ. ಹೌದು ರಾಜಮೌಳಿ ಒಬ್ಬ ಹೀರೋಗೆ ಸೂಪರ್ ಹಿಟ್ ಸಿನಿಮಾ ಮಾಡಿದರೆ. ಆ ಹೀರೊ ಮುಂದಿನ ಚಿತ್ರ ಸೋಲುವುದು ಗ್ಯಾರೆಂಟಿ. ಅದು ಈಗ ರಾಮ್ ಚರಣ್ ವಿಚಾರದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

ರಾಮ್ ಚರಣ್ ಸೋಲಿಗೆ ರಾಜಮೌಳಿ ಕಾರಣ!

ರಾಮ್ ಚರಣ್ ಸೋಲಿಗೆ ರಾಜಮೌಳಿ ಕಾರಣ!

ರಾಜಮೌಳಿ ನಿರ್ದೇಶನದ 'RRR' ಚಿತ್ರ ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ನಟ ರಾಮ್‌ ಚರಣ್ ನಾಯಕನಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಈ ಚಿತ್ರದ ಬಳಿಕ ರಾಮ್‌ ಚರಣ್ ಅಭಿನಯಿಸಿದ 'ಆಚಾರ್ಯ' ಚಿತ್ರ ಸೋಲುಂಡಿದೆ. ಈ ಹಿಂದೆ ರಾಮ್‌ ಚರಣ್‌ಗಾಗಿ ರಾಜಮೌಲಿ ಮಾಡಿದ್ದ 'ಮಗಧೀರ' ಸೂಪರ್ ಹಿಟ್ ಆಗಿತ್ತು. ಆದರೆ 'ಆರೆಂಜ್' ಚಿತ್ರ ದೊಡ್ಡ ಸೋಲನ್ನು ಅನುಭವಿಸಿತು.

ರಾಜಮೌಳಿ ಬ್ಯಾಡ್ ಲಕ್ ಇತಿಹಾಸ!

ರಾಜಮೌಳಿ ಬ್ಯಾಡ್ ಲಕ್ ಇತಿಹಾಸ!

ರಾಜಮೌಳಿ ಜೊತೆಗೆ ಸೇರಿ ಹಿಟ್ ಕೊಟ್ಟ ಬಳಿಕ ಬಹುತೇಕ ನಟರ ಮುಂದಿನ ಚಿತ್ರಗಳು ಸೋತಿವೆ. ಆ ಹಿಟ್ ಫ್ಲಾಪ್ ಲಿಸ್ಟ್ ಇಲ್ಲಿದೆ.

SS Rajamouli Is The Reason behind Acharya Movie flop

More from Filmibeat

English summary
Rajamouli Is The Reason behind Acharya Movie Flop, Know More Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X