For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿ- ಮಹೇಶ್ ಬಾಬು ಚಿತ್ರದಲ್ಲಿ ಕ್ರಿಸ್​ ಹ್ಯಾಮ್ಸ್​ವರ್ಥ್: ಅಭಿಮಾನಿಗಳಿಗೆ ಸಿಕ್ಕೇಬಿಡ್ತು ಸಾಕ್ಷ್ಯ!

  |

  ಎಸ್‌.ಎಸ್ ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಅದ್ಧೂರಿ ಸಿನಿಮಾ ನಿರ್ಮಾವಾಗುವ ಬಗ್ಗೆ ಚರ್ಚೆ ನಡೀತಿದೆ. 'RRR' ನಂತರ ತಮ್ಮ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಜಕ್ಕಣ್ಣ ಇನ್ನು ಮಾತನಾಡಿಲ್ಲ. ಆದರೆ ಮಹೇಶ್ ಬಾಬು ಜೊತೆ ಸಿನಿಮಾ ಪಕ್ಕಾ ಎನ್ನುವ ಮಾತುಗಳು ಕೇಳಿಬರ್ತಿದೆ. ಸದ್ಯ ಈ ಚಿತ್ರದಲ್ಲಿ ಹಾಲಿವುಡ್ ಕ್ರಿಸ್​ ಹ್ಯಾಮ್ಸ್​ವರ್ಥ್ ನಟಿಸ್ತಾರೆ ಎನ್ನುವು ಗುಸು ಗುಸು ಶುರುವಾಗಿದೆ. ಇದಕ್ಕೆ ಅಭಿಮಾನಿಗಳು ಸಾಕ್ಷಿ ಕೂಡ ತೋರಿಸುತ್ತಿದ್ದಾರೆ.

  ಮಹೇಶ್ ಬಾಬುನ ಹೀರೊ ಮಾಡಿ ಮೌಳಿ ಹಾಲಿವುಡ್ ರೇಂಜ್ ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ ಎನ್ನಲಾಗುತ್ತಿದೆ. ಆಫ್ರಿಕಾದ ಕಾಡುಗಳಲ್ಲಿ ಈ ಸಿನಿಮಾ ಕಥೆ ನಡೆಯುತ್ತದೆ ಎನ್ನಲಾಗುತ್ತಿದೆ. ಹಾಲಿವುಡ್ ಹೀರೊ ರೀತಿ ಮಹೇಶ್‌ ಬಾಬುನ ಪ್ರಸೆಂಟ್ ಮಾಡ್ತಾರಂರೆ ರಾಜಮೌಳಿ. ಈ ಸಿನಿಮಾ ಈಗ ಭಾರೀ ಕುತೂಹಲ ಕೆರಳಿಸಿದೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರದಲ್ಲಿ ಪ್ರಿನ್ಸ್ ಸದ್ಯ ನಟಿಸ್ತಿದ್ದಾರೆ. ಸಿನಿಮಾ ಮುಗಿದ ಕೂಡಲೇ ಮೌಳಿ ಕ್ಯಾಂಪ್ ಸೇರಿಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಮತ್ತೊಂದ್ಕಡೆ ತಂದೆ ಜೊತೆ ಸೇರಿ ಜಕ್ಕಣ್ಣ ಕಥೆ, ಚಿತ್ರಕಥೆ ಸಿದ್ಧಪಡಿಸ್ತಿದ್ದಾರೆ. ಜೇಮ್ಸ್ ಬಾಂಡ್ ರೀತಿ ಟಾಲಿವುಡ್ ಪ್ರಿನ್ಸ್‌ನ ತೋರಿಸುವ ಪ್ರಯತ್ನ ಮಾಡ್ತಿದ್ದಾರಂತೆ.

  ಮಹೇಶ್ ಬಾಬು ಸಿನಿಮಾ ಬಗ್ಗೆ ಕೊನೆಗೂ ಬಾಯ್‌ಬಿಟ್ಟ ರಾಜಮೌಳಿ: ಜೇಮ್ಸ್ ಬಾಂಡ್‌ ಶೈಲಿ ಸಿನಿಮಾ!ಮಹೇಶ್ ಬಾಬು ಸಿನಿಮಾ ಬಗ್ಗೆ ಕೊನೆಗೂ ಬಾಯ್‌ಬಿಟ್ಟ ರಾಜಮೌಳಿ: ಜೇಮ್ಸ್ ಬಾಂಡ್‌ ಶೈಲಿ ಸಿನಿಮಾ!

  ರಾಜಮೌಳಿ ಇತ್ತೀಚೆಗೆ ಹಾಲಿವುಡ್‌​ನ ಕ್ರಿಯೇಟಿವ್​ ಆರ್ಟಿಸ್ಟ್ಸ್​ ಏಜೆನ್ಸಿ ಜೊತೆ ಕೈ ಜೋಡಿಸಿದ್ದು, ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿತ್ತು. ಈ ಸುದ್ದಿ ಕೇಳಿ ಫ್ಯಾನ್ಸ್​ ಥ್ರಿಲ್​ ಆಗಿದ್ದರು. ಈ ಒಪ್ಪಂದದಿಂದ ಹಾಲಿವುಡ್ ನಟರನ್ನು ರಾಜಮೌಳಿ ಸುಲಭವಾಗಿ ತಮ್ಮ ಸಿನಿಮಾಗಳಿಗೆ ಕಾಸ್ಟ್ ಮಾಡಬಹುದು. 'ಅವೆಂಜರ್ಸ್​: ಎಂಡ್‌ಗೇಮ್' ಹಾಗೂ ಇತರೆ ಸಿನಿಮಾಗಳಲ್ಲಿ 'ಥೋರ್'​ ಪಾತ್ರ ಮಾಡಿ ಸೈ ಎನಿಸಿಕೊಂಡಿರುವ ನಟ ಕ್ರಿಸ್​ ಹ್ಯಾಮ್ಸ್​ವರ್ಥ್ ಮೌಳಿ ಸಿನಿಮಾದಲ್ಲಿ ನಟಿಸ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇದಕ್ಕೆ ಅಭಿಮಾನಿಗಳು ಈಗ ಆಧಾರವನ್ನು ಒದಗಿಸುತ್ತಿದ್ದಾರೆ.

  Rajamouli likely to rope in Chris Hemsworth for an cameo in SSMB29

  ಮಹೇಶ್ ಬಾಬು ಹಾಗೂ ರಾಜಮೌಳಿ ಜೋಡಿಯ ಚಿತ್ರದಲ್ಲಿ ಕ್ರಿಸ್​ ಹ್ಯಾಮ್ಸ್​ವರ್ಥ್ ನಟಿಸ್ತಾರೆ ಎನ್ನುವುದಕ್ಕೆ ಅಭಿಮಾನಿಗಳು ಒಂದು ಸಾಕ್ಷಿ ತೋರಿಸುತ್ತಿದ್ದಾರೆ. ಅದು ಏನು ಅಂದರೆ ಮಹೇಶ್ ಬಾಬು ಇನ್‌ಸ್ಟಾಗ್ರಾಂನಲ್ಲಿ ಕ್ರಿಸ್​ ಹ್ಯಾಮ್ಸ್​ವರ್ಥ್‌ನ ಫಾಲೋ ಮಾಡುತ್ತಿದ್ದಾರೆ. ಟಾಲಿವುಡ್‌ ಪ್ರಿನ್ಸ್ ಇನ್‌ಸ್ಟಾಗ್ರಾಂನಲ್ಲಿ ರಾಜಮೌಳಿ, ರಜಿನಿಕಾಂತ್ ಸೇರಿದಂತೆ ಕೆಲವರನ್ನು ಮಾತ್ರ ಫಾಲೋ ಮಾಡ್ತಿದ್ದಾರೆ. ಆ ಲಿಸ್ಟ್‌ನಲ್ಲಿ ಕ್ರಿಸ್ ಕೂಡ ಇದ್ದಾರೆ. ಹಾಗಾಗಿ ಇಬ್ಬರೂ ಒಟ್ಟಿಗೆ ನಟಿಸೋದು ಪಕ್ಕಾ ಅಂತ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈಗಾಗಲೇ ರಾಜಮೌಳಿ ಹಾಲಿವುಡ್ ರೇಂಜ್‌ನಲ್ಲಿ ಮಹೇಶ್ ಬಾಬು ಚಿತ್ರಕ್ಕೆ ಪ್ಲ್ಯಾನ್ ಮಾಡ್ತಿದ್ದಾರೆ. ಹಾಗಾಗಿ ಏನು ಬೇಕಾದರೂ ಆಗಬಹುದು.

  English summary
  Rajamouli likely to rope in Chris Hemsworth for an cameo in SSMB29. Know More.
  Tuesday, September 27, 2022, 23:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X