ಸಲ್ಮಾನ್ ಖಾನ್ ಅನ್ನು ಭೇಟಿಯಾದ ರಾಜಮೌಳಿ: ಬಾಲಿವುಡ್‌ಗೆ ಹಾರಿದರೇ ಜಕ್ಕನ್ನ?

ರಾಜಮೌಳಿ ನಿರ್ದೇಶನದ ಬಗ್ಗೆ ಹೊಸದಾಗಿ ಹೇಳಲು ಏನೂ ಇಲ್ಲ, ನಟರಿಗಷ್ಟೆ ಅಭಿಮಾನಿಗಳು ಇರುವ ಚಿತ್ರರಂಗದಲ್ಲಿ ನಿರ್ದೇಶನದ ತೂಕ ಎಷ್ಟೆಂಬುದನ್ನು ಗೊತ್ತು ಮಾಡಿದ ಪ್ರತಿಭಾವಂತ, ಅದ್ಧೂರಿ ನಿರ್ದೇಶಕ ರಾಜಮೌಳಿ.

ರಾಜಮೌಳಿ ಜೊತೆ ಸಿನಿಮಾ ಮಾಡಲು ದೊಡ್ಡ-ದೊಡ್ಡ ನಟರೇ ಸಾಲುಗಟ್ಟಿ ನಿಂತಿದ್ದಾರೆ. ತೆಲುಗು ನಟರು ಮಾತ್ರವಲ್ಲ ಬಾಲಿವುಡ್ ನಟರೂ ಸಹ ರಾಜಮೌಳಿ ಅಲಿಯಾಸ್ ಜಕ್ಕನ್ನ ಕಣ್ಣು ನಮ್ಮ ಮೇಲೆ ಬಿದ್ದರೆ ಸಾಕೆಂದು ಕಾಯುವ ಸ್ಥಿತಿ ಇದೆ.

ರಾಜಮೌಳಿ ಜೊತೆ ಸಿನಿಮಾ ಎಂದರೆ ಅದು ಸೂಪರ್ ಡೂಪರ್ ಹಿಟ್ ಎಂದೇ ಅರ್ಥ. ರಾಜಮೌಳಿ ಸಿನಿಮಾಕ್ಕೆ ಆಯ್ಕೆ ಆಗುವುದು ದೊಡ್ಡ-ದೊಡ್ಡ ಸ್ಟಾರ್ ನಟರಿಗೇ ಹೆಮ್ಮೆಯ ವಿಷಯ ಅಂಥಹುದರಲ್ಲಿ ಈಗ ರಾಜಮೌಳಿ ಬಾಲಿವುಡ್‌ನ ಭಾಯ್ ಸಲ್ಮಾನ್ ಖಾನ್ ಅನ್ನು ಭೇಟಿಯಾಗಿದ್ದಾರೆ. ಈ ಸುದ್ದಿ ರಾಜಮೌಳಿ ಅಭಿಮಾನಿಗಳಿಗೂ ಹಾಗೂ ಸಲ್ಮಾನ್ ಅಭಿಮಾನಿಗಳಿಗೆ ತೀವ್ರ ಕುತೂಹಲ ಮೂಡಿಸಿದೆ.

ರಾಜಮೌಳಿ ಇತ್ತೀಚೆಗಷ್ಟೆ ಸಲ್ಮಾನ್ ಖಾನ್‌ರ ಮುಂಬೈ ನಿವಾಸ ಗ್ಯಾಲೆಕ್ಸಿಗೆ ತೆರಳಿ ಸಲ್ಮಾನ್ ಅನ್ನು ಕಂಡು ಚರ್ಚೆ ನಡೆಸಿ ಬಂದಿದ್ದಾರೆ. ಈ ಭೇಟಿಯ ಹಿಂದೆ ಸಿನಿಮಾದ ಉದ್ದೇಶವೇ ಇದೆ ಎಂದು ಹೇಳಲಾಗುತ್ತಿದೆ. ಸಲ್ಮಾನ್ ಖಾನ್ ಈ ಹಿಂದೆ ರಾಜಮೌಳಿಯ ತಂದೆ ವಿಜಯೇಂದ್ರ ಪ್ರಸಾದ್ ಜೊತೆಗೆ ಕೆಲಸ ಮಾಡಿದ್ದಾರೆ. ಸಲ್ಮಾನ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ಭಜರಂಗಿ ಭಾಯಿಜಾನ್' ಕತೆ ಬರೆದಿದ್ದು ವಿಜಯೇಂದ್ರ ಪ್ರಸಾದ್.

ಅವಕಾಶ ನಿರಾಕರಿಸಿದ್ದ ರಾಜಮೌಳಿ

ಅವಕಾಶ ನಿರಾಕರಿಸಿದ್ದ ರಾಜಮೌಳಿ

'ಭಜರಂಗಿ ಭಾಯ್‌ಜಾನ್' ಸಿನಿಮಾ ಬಂದ ಸಮಯದಲ್ಲಿಯೇ ಸಲ್ಮಾನ್ ಹಾಗೂ ರಾಜಮೌಳಿ ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಆ ಸಮಯದಲ್ಲಿ ಬಹಳ ಬ್ಯುಸಿಯಾಗಿದ್ದ ರಾಜಮೌಳಿ ಅವಕಾಶವನ್ನು ನಿರಾಕರಿಸಿದರು. ಆದರೆ ಈಗ ಸ್ವತಃ ರಾಜಮೌಳಿಯೇ ಹೋಗಿ ಸಲ್ಮಾನ್ ಖಾನ್ ಅನ್ನು ಭೇಟಿಯಾಗಿದ್ದು, ಕತೆಯ ಬಗ್ಗೆ ಆರಂಭಿಕ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.

ಇಬ್ಬರು ಒಟ್ಟಾದರೆ ಬಾಕ್ಸ್ ಆಫೀಸ್ ಚಿಂದಿ ಮಾಡುವುದು ಖಾತ್ರಿ

ಇಬ್ಬರು ಒಟ್ಟಾದರೆ ಬಾಕ್ಸ್ ಆಫೀಸ್ ಚಿಂದಿ ಮಾಡುವುದು ಖಾತ್ರಿ

ಸಲ್ಮಾನ್ ಖಾನ್ ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳಿರುವ ನಟರಲ್ಲಿ ಪ್ರಮುಖರು. ಮೊದಲ ದಿನವೇ ನೂರು ಕೋಟಿ ಕಲೆಕ್ಷನ್ ಮಾಡಬಲ್ಲ ಛಾತಿಯುಳ್ಳ ನಾಯಕ ನಟ ಸಲ್ಮಾನ್ ಖಾನ್. ಈಗ ರಾಜಮೌಳಿ ಹಾಗೂ ಸಲ್ಮಾನ್ ಖಾನ್ ಒಟ್ಟಿಗೆ ಸೇರಿದರೆಂದರೆ ಬಾಕ್ಸ್ ಆಫೀಸ್ ಚಿಂದಿಯಾಗುವುದು ಪಕ್ಕಾ. ಈ ಇಬ್ಬರು ಒಟ್ಟಾಗಿ ಮಾಡುವ ಸಿನಿಮಾ ಗಳಿಕೆಯಲ್ಲಿ ಈ ಹಿಂದಿನ ದಾಖಲೆಗಳನ್ನೆಲ್ಲ ಅಳಿಸಿ ಹಾಕುವುದು ಪಕ್ಕಾ ಎಂಬ ಮಾತುಗಳು ಈಗಾಗಲೇ ಆರಂಭವಾಗಿವೆ.

ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಸಲ್ಮಾನ್ ಖಾನ್

ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಸಲ್ಮಾನ್ ಖಾನ್

ಇದೇ ಸಮಯಕ್ಕೆ ಸಲ್ಮಾನ್ ಖಾನ್ ಸಹ ಪ್ರಥಮ ಬಾರಿಗೆ ತೆಲುಗು ಸಿನಿಮಾ ಒಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ನಟ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ 'ಗಾಡ್ ಫಾದರ್' ಸಿನಿಮಾದಲ್ಲಿ ಸಲ್ಮಾನ್ ಖಾನ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದು ಮಾತ್ರವೇ ಅಲ್ಲದೆ ಆ ಸಿನಿಮಾದಲ್ಲಿ ಒಂದು ಹಾಡಿನಲ್ಲಿ ಚಿರಂಜೀವಿಗೆ ಜೊತೆಯಾಗಿ ನರ್ತಿಸಲಿದ್ದಾರೆ. ಸಲ್ಮಾನ್- ಚಿರಂಜೀವಿ ನರ್ತಿಸಲಿರುವ ಹಾಡನ್ನು ಹಾಲಿವುಡ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಹಾಡಲಿರುವುದು ಮತ್ತೊಂದು ವಿಶೇಷ. 'ಗಾಡ್ ಫಾದರ್' ಸಿನಿಮಾವು ಮಲಯಾಳಂನ 'ಲುಸಿಫರ್' ಸಿನಿಮಾದ ರೀಮೇಕ್.

ಮಹೇಶ್ ಬಾಬು ಜೊತೆ ರಾಜಮೌಳಿ ಸಿನಿಮಾ

ಮಹೇಶ್ ಬಾಬು ಜೊತೆ ರಾಜಮೌಳಿ ಸಿನಿಮಾ

ಇನ್ನು ರಾಜಮೌಳಿ 'ಆರ್‌ಆರ್ಆರ್' ಸಿನಿಮಾವನ್ನು ಮುಗಿಸಿದ್ದು ಜನವರಿ 07 ರಂದು ಬಿಡುಗಡೆ ದಿನಾಂಕ ಸಹ ಘೋಷಿಸಿದ್ದಾರೆ. ಜೂ.ಎನ್‌ಟಿಆರ್, ರಾಮ್ ಚರಣ್ ತೇಜ ನಟಿಸಿರುವ ಈ ಸಿನಿಮಾ ಭಾರತದ ಅತಿ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. 'ಆರ್ಆರ್ಆರ್' ಬಳಿಕ ಮಹೇಶ್ ಬಾಬು ಜೊತೆಗೆ ಹೊಸದೊಂದು ಸಿನಿಮಾವನ್ನು ರಾಜಮೌಳಿ ನಿರ್ದೇಶಿಸಲಿದ್ದಾರೆ. ಆ ಸಿನಿಮಾವು ಅಮೆಜಾನ್ ಕಾಡುಗಳಲ್ಲಿ ನಡೆವ ಕುತೂಹಲಭರಿತ ಕತೆಯನ್ನು ಹೊಂದಿರಲಿದೆ. ಆ ಸಿನಿಮಾದ ಬಳಿಕವಷ್ಟೆ ಸಲ್ಮಾನ್ ಖಾನ್ ಜೊತೆ ಸಿನಿಮಾಕ್ಕೆ ಕೈ ಹಾಕಲಿದ್ದಾರೆ ರಾಜಮೌಳಿ.

More from Filmibeat

English summary
Telugu movie director Rajamouli met Salman Khan in Mumbai. They may made movie together.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X