ಆ ಸೂಪರ್ ಸ್ಟಾರ್ ಕಾಲ್‌ಶೀಟ್‌ಗಾಗಿ ದಶಕಗಳಿಂದ ಕಾಯ್ತಿದ್ದಾರಾ ಜಕ್ಕಣ್ಣ? ಈ ಬಾರಿ ಸಿಗುತ್ತಾ ಆ ಅವಕಾಶ?

ರಾಜಮೌಳಿ ಅಂದ್ರೆ ಒಂದು ಬ್ರ್ಯಾಂಡ್. ಸಾಮಾನ್ಯವಾಗಿ ಹೀರೊಗಳು ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುತ್ತಾರೆ. ಆದರೆ ಸ್ಟಾರ್ ಹೀರೊಗಳು ಇಲ್ಲದೇ ತಮ್ಮ ಹೆಸರಿನಿಂದಲೇ ಸಿನಿಮಾಗಳನ್ನು ಗೆಲ್ಲಿಸುವ ನಿರ್ದೇಶಕರಲ್ಲಿ ಮೌಳಿ ಅಗ್ರಸ್ಥಾನದಲ್ಲಿ ನಿಲ್ತಾರೆ. ಬಾಲಿವುಡ್ ಸ್ಟಾರ್‌ಗಳೇ ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ನಟಿಸಲು ಕಾಯ್ತಾರೆ. ಆದರೆ ಜಕ್ಕಣ್ಣ ಮಾತ್ರ ದಶಕಗಳಿಂದ ಆ ಸ್ಟಾರ್ ನಟನ ಕಾಲ್‌ಶೀಟ್‌ಗಾಗಿ ಕಾಯ್ತಿದ್ದಾರೆ ಎನ್ನಲಾಗ್ತಿದೆ.

'RRR' ಸೂಪರ್ ಸಕ್ಸಸ್ ನಂತರ ರಾಜಮೌಳಿ ಸದ್ಯ ಮಹೇಶ್ ಬಾಬು ಸಿನಿಮಾ ನಿರ್ದೇಶನಕ್ಕೆ ಸಿದ್ಧತೆ ನಡೆಸಿದ್ದಾರೆ. ಮಹೇಶ್ ಬಾಬು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ 'ಗುಂಟೂರು ಖಾರಂ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾ ಮುಗಿಯುತ್ತಿದ್ದಂತೆ ಮೌಳಿ ಚಿತ್ರಕ್ಕೆ ಚಾಲನೆ ಸಿಗಲಿದೆ. ಈ ಬಾರಿ ಕೂಡ ಆ ನಟನಿಗಾಗಿ ಒಂದು ಪಾತ್ರ ಸಿದ್ಧ ಮಾಡುತ್ತಿದ್ದಾರಂತೆ. ಎಲ್ಲಾ ಅಂದುಕೊಂಡಂತೆ ಆದರೆ ಆ ಸೂಪರ್ ಸ್ಟಾರ್ ಜಕ್ಕಣ್ಣನ ನಿರ್ದೇಶನದಲ್ಲಿ ನಟಿಸಲಿದ್ದಾರೆ.

Rajamouli to rope in Mohan lal for Mahesh babus SSMB 29

ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಕಳೆದ ವರ್ಷ ಮಾರ್ಚ್ 25ಕ್ಕೆ ರಿಲೀಸ್ ಆಗಿತ್ತು. ಸಿನಿಮಾ ದೇಶ ವಿದೇಶಗಳಲ್ಲಿ ಸದ್ದು ಮಾಡಿತ್ತು. ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಶಸ್ತಿ ಬಾಚಿಕೊಂಡಿತ್ತು. ಈ ಬಾರಿ ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಪ್ರಾಜೆಕ್ಟ್‌ಗೆ ಪ್ಲ್ಯಾನ್ ಮಾಡುತ್ತಿದ್ದಾರೆ. ಹಾಲಿವುಡ್ ಸ್ಟಾರ್‌ಗಳು ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಕೂಡ ನಟಿಸ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

Rajamouli to rope in Mohan lal for Mahesh babus SSMB 29

ಮೌಳಿಗೆ ಮೋಹನ್‌ ಲಾಲ್ ಕಾಲ್‌ಶೀಟ್?

ಕಂಪ್ಲೀಟ್ ಆಕ್ಟರ್ ಮೋಹನ್‌ ಲಾಲ್ ನಟನೆ ಅಂದರೆ ರಾಜಮೌಳು ಬಹಳ ಇಷ್ಟವಂತೆ. ಸಾಕಷ್ಟು ಸಂದರ್ಭಗಳಲ್ಲಿ ಈ ವಿಚಾರವನ್ನು ಹೇಳಿಕೊಂಡಿದ್ದಾರೆ. ಪ್ರತಿ ಬಾರಿ ಸಿನಿಮಾ ಮಾಡುವಾಗಲೂ ಮೋಹನ್‌ ಲಾಲ್‌ಗಾಗಿ ಒಂದು ಪಾತ್ರ ಸಿದ್ಧಪಡಿಸುತ್ತಿದ್ದಾರಂತೆ. ಆದರೆ ಕಾರಣಾಂತರಗಳಿಂದ ಡೇಟ್ಸ್‌ ಸಿಗದೇ ಆ ಪಾತ್ರಗಳು ಬೇರೆಯವರ ಪಾಲಾಗುತ್ತಿದೆ. ಮೋಹನ್ ಲಾಲ್ ಈಗಾಗಲೇ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

SSMB 29 ಚಿತ್ರದಲ್ಲಿ ಲಾಲ್?

ರಾಜಮೌಳಿ ಮುಂದೆ ಮಹೇಶ್ ಬಾಬು ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಸದ್ದಿಲ್ಲದೇ ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ಸ್ಟಾರ್ಟ್ ಆಗಿದೆ. ಮುಂದಿನ ವರ್ಷದ ಆರಂಭದಲ್ಲಿ ಸಿನಿಮಾ ಸೆಟ್ಟೇರುವ ನಿರೀಕ್ಷೆಯಿದೆ. ಈ ಬಾರಿ ಒಂದು ಆಕ್ಷನ್ ಅಡ್ವೆಂಚರಸ್ ಕಥೆಯನ್ನು ಹೇಳಲು ಮೌಳಿ ಪ್ರಯತ್ನಿಸುತ್ತಿದ್ದಾರೆ. ದೇಶವಿದೇಶದ ಕಾಡುಗಳಲ್ಲಿ ಸಿನಿಮಾ ಕಥೆ ಸಾಗಲಿದೆ. ಈ ಚಿತ್ರಕ್ಕಾಗಿ ಸಿನಿರಸಿಕರು ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಮೋಹನ್ ಲಾಲ್ ಕೂಡ ನಟಿಸಬಹುದು ಎನ್ನಲಾಗ್ತಿದೆ.

'ಪುಲಿ ಮುರುಗನ್' ಆಗಿ ಲಾಲ್ ಅಬ್ಬರ

ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಈ ಹಿಂದೆ 'ಪುಲಿ ಮುರುಗನ್' ಚಿತ್ರದಲ್ಲಿ ಕಮಾಲ್ ಮಾಡಿದ್ದರು. ಈ ಸಿನಿಮಾ ಮಾಲಿವುಡ್ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಕಾಡಿನಲ್ಲಿ ನಡೆಯುವ ಆಕ್ಷನ್ ಅಡ್ವೆಂಚರಸ್ ಸಿನಿಮಾ ಪ್ರೇಕ್ಷಕರಿಗೆ ಕಿಕ್ ಕೊಟ್ಟಿತ್ತು. ಮೌಳಿ ಕೂಡ ಇಂತದ್ದೇ ಒಂದು ಸಿನಿಮಾ ಪ್ಲ್ಯಾನ್ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಮೋಹನ್ ಲಾಲ್‌ಗಾಗಿ ಒಂದು ಪಾತ್ರ ಡಿಸೈನ್ ಮಾಡುವ ಸಾಧ್ಯತೆಯಿದೆ.

'ಜೈಲರ್' ಚಿತ್ರದಲ್ಲಿ ಲಾಲ್

ಸದ್ಯ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ತಮಿಳಿನ 'ಜೈಲರ್' ಚಿತ್ರದಲ್ಲಿ ಮೋಹನ್ ಲಾಲ್ ನಟಿಸಿದ್ದಾರೆ. ರಜನಿಕಾಂತ್ ನಟನೆಯ ಈ ಚಿತ್ರದಲ್ಲಿ ಲಾಲ್ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಈ ಚಿತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಬಣ್ಣ ಹಚ್ಚಿರುವುದು ವಿಶೇಷ. ಇತ್ತೀಚೆಗೆ 'ಜೈಲರ್' ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಇನ್ನುಳಿದಂತೆ ಮಲಯಾಳಂನಲ್ಲಿ ಎರಡು ಸಿನಿಮಾಗಳಲ್ಲಿ ಮೋಹನ್ ಲಾಲ್ ನಟಿಸುತ್ತಿದ್ದಾರೆ.

More from Filmibeat

English summary
Rajamouli to rope in Mohan lal for Mahesh babu's SSMB 29. SS Rajamouli's father, Vijayendra Prasad writing story for the movie. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X