Aishwarya Rajinikanth: ಚೆನ್ನೈನಲ್ಲಿ ಯುವನಟನ ಜೊತೆ ರಜನಿ ಪುತ್ರಿ ಓಡಾಟ: 2ನೇ ಮದುವೆ ಆಗ್ತಿದ್ದಾರಾ ಐಶ್ವರ್ಯಾ?

By ಫಿಲ್ಮಿಬೀಟ್ ಡೆಸ್ಕ್

ಸೂಪರ್‌ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ಇತ್ತೀಚೆಗೆ ವಿಚ್ಛೇದನದ ವಿಚಾರಕ್ಕೆ ಸುದ್ದಿಯಲ್ಲಿ ಇದ್ದಿದ್ದು ಗೊತ್ತೇ ಇದೆ. ಪತಿ ಹಾಗೂ ನಟ ಧನುಷ್‌ರಿಂದ ಬೇರೆಯಾಗಿದ್ದು ರಜನಿ ಹಾಗೂ ಧನುಷ್ ಅಭಿಮಾನಿಗಳಿಗೆ ದೊಡ್ಡ ಶಾಕ್ ಕೊಟ್ಟಂತಾಗಿತ್ತು.

ವಿಚ್ಛೇದನ ನೀಡುತ್ತಿದ್ದಂತೆ ಐಶ್ವರ್ಯಾ ರಜನಿಕಾಂತ್ ಮತ್ತೆ ವೃತ್ತಿನ ಬದುಕಿನ ಕಡೆ ಮರಳಿದ್ದರು. ಹೊಸ ಬದುಕು ರೂಪಿಸಿಕೊಳ್ಳುವತ್ತ ಗಮನ ಹರಿಸಿದ್ದರು. ಜಿಮ್ ಸೇರಿಕೊಂಡಿದ್ದರು. ವರ್ಕ್‌ಔಟ್ ಆರಂಭಿಸಿದ್ದರು. ಇದರ ಜೊತೆಗೆ ಹೊಸ ಸಿನಿಮಾದ ನಿರ್ದೇಶನಕ್ಕೂ ಕೈ ಹಾಕಿದ್ದರು.

Aishwarya Rajinikanth-2nd Marriage

ಆದ್ರೀಗ ಮದುವೆ ವಿಚಾರಕ್ಕೆ ಐಶ್ವರ್ಯಾ ರಜನಿಕಾಂತ್ ಮತ್ತೆ ಸುದ್ದಿಯಲ್ಲಿದ್ದಾರೆ. ರಜನಿ ಪುತ್ರಿ ಎರಡನೇ ಮದುವೆ ಆಗುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜವೇ? ಏನಂತಿದೆ ಕಾಲಿವುಡ್? ಅಷ್ಟಕ್ಕೂ ಈ ಸುದ್ದಿ ಹುಟ್ಟಿಕೊಂಡಿದ್ದೇಗೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಯುವನಟನ ಜೊತೆ ಚೆನ್ನೈ ರೆಸಾರ್ಟ್‌ನಲ್ಲಿ ಪ್ರತ್ಯಕ್ಷ

ಅಪ್ಪನಂತೆ ಮಗಳೂ ಕೂಡ ಪ್ರತಿಭಾವಂತೆ ಅನ್ನೋದರಲ್ಲಿ ಎರಡು ಮಾತಿಲ್ಲ. ವಿಚ್ಛೇದನದ ಬಳಿಕ ಸಿನಿಮಾ ನಿರ್ದೇಶನದ ಜೊತೆಗೆ ತನ್ನಿಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ವೃತ್ತಿ ಹಾಗೂ ವೈಯಕ್ತಿಕ ಎರಡೂ ಬದುಕನ್ನೂ ಮ್ಯಾನೇಜ್ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಎರಡನೇ ಮದುವೆ ಬಗ್ಗೆ ಸುದ್ದಿಯೊಂದು ಗಲ್ಲೆಬ್ಬಿಸಿದೆ.

ರಜನಿಕಾಂತ್ ಪುತ್ರಿ ಐಶ್ವರ್ಯಾ ಇತ್ತೀಚೆಗೆ ಚೆನ್ನೈನ ರೆಸಾರ್ಟ್‌ವೊಂದರಕ್ಕೆ ಹೋಗಿದ್ದರು ಎಂದು ಸುದ್ದಿ ಹಬ್ಬಿತ್ತು. ಇಲ್ಲಿಂದ ರಜನಿ ಪುತ್ರಿ ಐಶ್ವರ್ಯಾ ಎರಡನೇ ಮದುವೆ ಆಗುತ್ತಾರೆ ಎಂಬ ಸುದ್ದಿ ಓಡಾಡುತ್ತಿದೆ. ಅಸಲಿಗೆ ಇದರಲ್ಲಿ ಎಷ್ಟು ಸತ್ಯವಿದೆಯೋ ತಿಳಿದಿಲ್ಲ. ಹಾಗೇ ಸುದ್ದಿ ಬಗ್ಗೆ ಯಾರೂ ಪ್ರತಿಕ್ರಿಯೆ ಕೂಡ ನೀಡಲ್ಲ.

2ನೇ ಮದುವೆ ಸುಳ್ಳಾ? ನಿಜಾನಾ?

ರಜನಿಕಾಂತ್ ಪುತ್ರಿ ಐಶ್ವರ್ಯಾ ಎರಡನೇ ಮದುವೆ ಆಗುತ್ತಾರೆ ಅನ್ನೋ ಸುದ್ದಿ ನಿನ್ನೆ(ಜುಲೈ 10) ಗುಲ್ಲೆಬ್ಬಿಸಿತ್ತು. ಈ ಬೆನ್ನೆಲ್ಲೇ ಇದೆಲ್ಲಾ ಸುಳ್ಳು ಅನ್ನೋ ಮತ್ತೊಂದು ವರದಿ ಇಂದು (ಜುಲೈ 11) ಹಲ್‌ಚಲ್ ಎಬ್ಬಿಸಿದೆ. ಇಂಡಿಯಾ ಟುಡೇ ರಜನಿಕಾಂತ್ ಪುತ್ರಿಯ ಎರಡನೇ ಮದುವೆ ಎಂದು ವರದಿ ಮಾಡಿದೆ.

"ಈ ಕಥೆಗಳೆಲ್ಲಾ ಶುದ್ಧ ಸುಳ್ಳು. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಈಗ ವರದಿ ಮಾಡಿರುವಂತೆ ಅವರು ಎರಡನೇ ಮದುವೆ ಆಗುತ್ತಿಲ್ಲ" ಎಂದು ಬಲ್ಲ ಮೂಲಗಳು ತಿಳಿಸಿವೆ ಎಂದು ವರದಿ ಮಾಡಿದೆ. ಈ ಮೂಲಕ ಎರಡನೇ ಮದುವೆ ಆಗುತ್ತಾರಾ ಇಲ್ಲವಾ? ಅನ್ನೋದು ಅವರ ಅಭಿಮಾನಿಗಳಲ್ಲಿ ಗೊಂದಲ ಮೂಡಿದೆ.

'ಲಾಲ್ ಸಲಾಂ'ನಲ್ಲಿ ಬ್ಯುಸಿ

ಇಂಡಿಯಾ ಟುಡೇ ಸೋರ್ಸ್ ಕೊಟ್ಟ ಮಾಹಿತಿ ಪ್ರಕಾರ, ಐಶ್ವರ್ಯಾ ಹಾಗೂ ಧನುಷ್ ಇಬ್ಬರೂ ಅಧಿಕೃತವಾಗಿ ಬೇರೆಯಾಗಿಲ್ಲ. ಹೀಗಾಗಿ ಎರಡನೇ ಮದುವೆ ಮ್ಯಾಟರ್ ಸುಳ್ಳು ಎಂದು ಹೇಳಲಾಗಿದೆ. ಈ ಹಿಂದೆ ರಜನಿಕಾಂತ್ ಇಬ್ಬರೂ ಮತ್ತೆ ಒಂದು ಮಾಡುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು.

ಐಶ್ವರ್ಯಾ ರಜನಿಕಾಂತ್ ವಿಚ್ಛೇದನದ ಬಳಿಕ 'ಲಾಲ್ ಸಲಾಂ' ಅನ್ನೋ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸ್ವತ: ರಜನಿಕಾಂತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸಿನಿಮಾ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸೂಪರ್‌ಸ್ಟಾರ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇತ್ತ ತಂದೆ ರಜನಿಕಾಂತ್ ಹಾಗೂ ಮಾಜಿ ಪತಿ ಧನುಷ್ ಇಬ್ಬರೂ ತಮ್ಮ ಸಿನಿಮಾಗಳಲ್ಲಿ ನಿರತರಾಗಿದ್ದಾರೆ.

More from Filmibeat

English summary
Rajnikanth daughter and Dhanush Ex Wife Aishwarya 2nd marriage on cards is it true?, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X