For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ ಸಂಭಾವನೆ ಹೆಚ್ಚಳ: ಭಾರತದ ನಂ1 ನಟ ಆದ ತಲೈವಾ!

  |

  ಭಾರತರ ಸೂಪರ್ ಸ್ಟಾರ್ ಅಂತಲೇ ಕರೆಸಿಕೊಳ್ಳುವ ನಟ ರಜನಿಕಾಂತ್ ಬಗ್ಗೆ ಪರಿಚಯ ಅಗತ್ಯ ಇಲ್ಲ. ರಜನಿಕಾಂತ್ ದಶಕಗಳಿಂದ ಸಿನಿಮಾರಂಗವನ್ನು ಆಳುತ್ತಾ ಬಂದಿದ್ದಾರೆ. ಇನ್ನು ತಮಿಳು ಸಿನಿಮಾರಂಗದ ಇತಿಹಾಸದಲ್ಲಿ ನಟ ರಜನಿಕಾಂತ್ ಒಂದು ದಂತಕತೆ. ಈಗ ರಜನಿ ಅಚ್ಚರಿ ಒಂದಕ್ಕೆ ಕಾರಣ ಆಗಿದ್ದಾರೆ.

  ಅದು ಮತ್ತೇನು ಅಲ್ಲ ನಟ ರಜನಿಕಾಂತ್ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಅರೆ ಸಂಭಾವನೆ ಹೆಚ್ಚಿಸಿಕೊಳ್ಳುವುದು ಸಹಜ, ಅದರಲ್ಲೇನು ವಿಶೇಷ ಇದೆ?, ಇದರಲ್ಲಿ ಅಚ್ಚರಿ ಪಡುವಂತಹದ್ದು ಏನಿದೆ ಎನ್ನುವ ಶಂಕೆ ಮೂಡ ಬಹುದು.

  ಸೂಪರ್‌ಸ್ಟಾರ್ ರಜನಿ ಜೊತೆಗೆ ಸೆಂಚುರಿ ಸ್ಟಾರ್ ಶಿವಣ್ಣ ಸಿನಿಮಾಸೂಪರ್‌ಸ್ಟಾರ್ ರಜನಿ ಜೊತೆಗೆ ಸೆಂಚುರಿ ಸ್ಟಾರ್ ಶಿವಣ್ಣ ಸಿನಿಮಾ

  ರಜನಿ ಸಂಭಾವನೆಯನ್ನು ಮಾತ್ರ ಹೆಚ್ಚಿಸಿಕೊಂಡಿಲ್ಲ. ಬದಲಿಗೆ ರಜನಿಕಾಂತ್ ಈ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ. ಈ ವಿಚಾರದಲ್ಲಿ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಏಕೈಕ ನಟ ಎನ್ನುವ ಕೀರ್ತಿ ಪಡೆದಿದ್ದಾರೆ. ಹಾಗಿದ್ದರೆ ರಜನಿ ಸಂಭಾವನೆ ಎಷ್ಟು ಎನ್ನುವ ಬಗ್ಗೆ ಮುಂದೆ ಓದಿ...

  'ಕೆಜಿಎಫ್ 2' ಸಿನಿಮಾ ನೋಡಿ 'ಎಂದಿರನ್' ನಿರ್ದೇಶಕ ಶಂಕರ್ ಹೇಳಿದ್ದೇನು? ಯಶ್ ಜೊತೆ ಸಿನಿಮಾ ಯಾವಾಗ? 'ಕೆಜಿಎಫ್ 2' ಸಿನಿಮಾ ನೋಡಿ 'ಎಂದಿರನ್' ನಿರ್ದೇಶಕ ಶಂಕರ್ ಹೇಳಿದ್ದೇನು? ಯಶ್ ಜೊತೆ ಸಿನಿಮಾ ಯಾವಾಗ?

  ರಜನಿಕಾಂತ್ 'ಅಣ್ಣಾತೆ' ಹಿಟ್!

  ರಜನಿಕಾಂತ್ 'ಅಣ್ಣಾತೆ' ಹಿಟ್!

  ಕೊನೆದಾಗಿ

  ರಜನಿಕಾಂತ್ 169ನೇ ಚಿತ್ರಕ್ಕೆ 150 ಕೋಟಿ ಸಂಭಾವನೆ!

  ರಜನಿಕಾಂತ್ 169ನೇ ಚಿತ್ರಕ್ಕೆ 150 ಕೋಟಿ ಸಂಭಾವನೆ!

  ನಿರ್ದೇಶಕ ನೆಲ್ಸನ್ ನಟ ರಜನಿಕಾಂತ್ ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡುತ್ತಾ ಇದ್ದಾರೆ. ಇದು ನಟ ರಜನಿಕಾಂತ್ ಅವರ 169ನೇ ಸಿನಿಮಾ. ಇದೇ ಸಿನಿಮಾಗೆ ನಟ ರಜನಿಕಾಂತ್ 150 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ರಜನಿಕಾಂತ್ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟ ಎನಿಸಿಕೊಂಡಿದ್ದಾರೆ. ಸದ್ಯ ದುಬೈ ಪ್ರವಾಸದಲ್ಲಿ ಇರುವ ರಜನಿಕಾಂತ್, ಪ್ರವಾಸ ಮುಗಿಸಿದ ಬಳಿಕ ಈ ಚಿತ್ರದ ಶೂಟಿಂಗ್ ಆರಂಭಸಲಿದ್ದಾರಂತೆ.

  ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮೀರಿಸಿದ ರಜನಿ!

  ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮೀರಿಸಿದ ರಜನಿ!

  ಇನ್ನು ಸಂಭಾವನೆಯ ವಿಚಾರದಲ್ಲಿ ನಟ ರಜನಿಕಾಂತ್ ಬಾಲಿವುಡ್ ಹೀರೋಗಳನ್ನು ಹಿಂದೆ ಹಾಕಿದ್ದಾರೆ. 100 ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಿದ್ದ, ಬಾಲಿವುಡ್ ನಟರನ್ನು ಹಿಂದಿಕ್ಕಿ ನಟ ರಜನಿಕಾಂತ್ ನಂಬರ್ 1 ಆಗಿ ಬಿಟ್ಟಿದ್ದಾರೆ. ಸಲ್ಮಾನ್ ಖಾನ್ 125, ಶಾರುಕ್ ಖಾನ್ 100, ಅಕ್ಷಯ್ ಕುಮಾರ್ 135 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ವರದದಿ ಅಗಿದ್ದು, ಈಗ ನಟ ರಜನಿಕಾಂತ್ 150 ಕೋಟಿ ಸಂಭಾವನೆ ಪಡೆದು ಎಲ್ಲರನ್ನು ಹಿಂದಿಕ್ಕಿದ್ದಾರೆ.

  150 ಕೋಟಿ ಸಂಭಾವನೆ, 250 ಕೋಟಿ ಬಜೆಟ್!

  150 ಕೋಟಿ ಸಂಭಾವನೆ, 250 ಕೋಟಿ ಬಜೆಟ್!

  ನಟ ರಜನಿಕಾಂತ್ 150 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಹಾಗಾಗಿ ಈ ಸಿನಿಮಾದ ಬಜೆಟ್ ಎಷ್ಟು ಎನ್ನುವ ಕುತೂಹಲಗಳು ಮೂಡಿವೆ. ಮೂಲಗಳ ಪ್ರಕಾರ ಈ ಚಿತ್ರದ ಒಟ್ಟಾರೆ ಬಜೆಟ್ 250 ಕೋಟಿ ರೂ. ಅಂತೆ. ಈ ಚಿತ್ರ ಕೂಡ ದೊಡ್ಡ ಬಜೆಟ್‌ನಲ್ಲಿ ಅದ್ದೂರಿಯಾಗಿ ತಯಾರಾಗಲಿದೆ. ಹಾಗಾಗಿ ಈ ಸಿನಿಮಾದ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ.

  English summary
  Rajinikanth Hikes His Remuneration To 150 Crore For his 169th Movie Shocks Film Industry, Know More
  Tuesday, May 24, 2022, 8:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X