»   » ಸದ್ಯದಲ್ಲೇ ಕಮಲ್, ರಜನಿ ಜೋಡಿಯ ಕಮಾಲ್!

ಸದ್ಯದಲ್ಲೇ ಕಮಲ್, ರಜನಿ ಜೋಡಿಯ ಕಮಾಲ್!

Posted By:
Subscribe to Filmibeat Kannada
Kamal Rajini
ಸೂಪರ್ ಸ್ಟಾರ್ ಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರೂ ಒಂದೇ ಚಿತ್ರದಲ್ಲಿ ಸದ್ಯದಲ್ಲೇ ನಟಿಸಲಿದ್ದಾರಾ? ಹೌದು ಎಂಬ ಸುದ್ದಿ ಭಾರತದ ಬಹುಭಾಗದಲ್ಲಿ ಮಿಂಚಿನಂತೆ ಸಂಚಾರವಾಗುತ್ತಿದೆ. ಬಂದಿರುವ ಸುದ್ದಿ ಪ್ರಕಾರ, ಅವರಿಬ್ಬರನ್ನು ಒಟ್ಟಿಗೆ ಹಾಕಿಕೊಂಡು ಚಿತ್ರವೊಂದನ್ನು ನಿರ್ದೇಶಿಸಲಿರುವವರು ಖ್ಯಾತ ನಿರ್ದೇಶಕ ಕೆ ಬಾಲಚಂದರ್. ಆದರೆ ಅದಿನ್ನೂ ಪ್ಲಾನ್ ಹಂತದಲ್ಲಿಯೇ ಇದೆ ಎಂಬುದು ಬಾಲಚಂದರ್ ಕಡೆಯವರಿಂದ ಬಂದ ಸಮಾಚಾರ.

ನಿರ್ಮಾಪಕ ಎವಿಎಮ್ ಸರವಣನ್ ರಜನಿ ಮತ್ತು ಕಮಲ್ ಇಬ್ಬರನ್ನೂ ಒಂದೇ ಸಿನಿಮಾದಲ್ಲಿ ನಟಿಸವಂತೆ ಮಾಡಲು ಶತಪ್ರಯತ್ನ ನಡೆಸುತ್ತಿದ್ದಾರೆ. ಇತ್ತೀಚಿಗೆ ನಿರ್ಮಾಪಕರ ಮನೆಯಲ್ಲಿ ಈ ಸಂಬಂಧ ರಜನಿಕಾಂತ್, ಕಮಲ್ ಹಾಸನ್ ಜೊತೆ ಮಾತುಕತೆ ನಡೆಸಲಾಗಿದೆ, ನಿರ್ಮಾಪಕ ಸರವಣನ್ ಪ್ರಕಾರ, ಈ ಇಬ್ಬರು ಸೂಪರ್ ಸ್ಟಾರ್ ಗಳನ್ನು ನಿರ್ದೇಶಿಸಲು ಕೆ ಬಾಲಚಂದರ್ ಸಮರ್ಥರು. ಈ ಮೊದಲು ಈ ಮೂವರ ಸಂಗಮದಲ್ಲಿ ತೆರೆಗೆ ಬಂದಿದ್ದ 'ನಿನೈಥಲೆ ಇನಿಕ್ಕುಂ' ಹಾಗೂ 'ತಿಲ್ಲು ಮಲ್ಲು' ಚಿತ್ರಗಳು ಸೂಪರ್ ಹಿಟ್ ದಾಖಲಿಸಿದ್ದವು.

ಈ ಕುರಿತು ಮಾತನಾಡಿರುವ ನಿರ್ದೇಶಕ ಕೆ ಬಾಲಚಂದರ್ ಪುತ್ರಿ ಪುಷ್ಪಾ ಕಂದಸ್ವಾಮಿ, "ಈ ಇಬ್ಬರೂ ಸೂಪರ್ ಸ್ಟಾರ್ ಗಳನ್ನು ಒಂದೇ ಚಿತ್ರದಲ್ಲಿ ನೋಡಲು ತುಂಬಾ ಸಂತೋಷ ಎನಿಸುತ್ತದೆ. ಆದರೆ ನಮ್ಮ ತಂದೆಗೆ ಸದ್ಯಕ್ಕೆ ಅವರಿಬ್ಬರನ್ನೂ ನಿರ್ದೇಶಿಸುವ ಯಾವುದೇ ಐಡಿಯಾ ಇಲ್ಲ. ಈ ಮೊದಲು ರಜನಿ ಹಾಗೂ ಕಮಲ್, 'ಅಪೂರ್ವ ರಾಂಗಂಗಳ್' ಹಾಗೂ 'ವಯಸು ಪಿಲಿಚಿಂದಿ' ಹಾಗೂ 'ಅಂಥುಲೇನಿ ಕಥಾ' ಚಿತ್ರಗಳಲ್ಲಿ ನಟಿಸಿದ್ದರೂ ಈಗ ಈ ಜೋಡಿಯ ಚಿತ್ರ ತರಲು ಇದು ಸಮಯವಲ್ಲ" ಎಂದಿದ್ದಾರೆ.

ಹೀಗಾಗಿ, ಈ ಇಬ್ಬರೂ ಸೂಪರ್ ಸ್ಟಾರ್ ಒಂದಾಗಿ ಬರಲಿರುವ ಚಿತ್ರದ ಬಗ್ಗೆ ಯಾರೂ ನಿರ್ಧಿಷ್ಟವಾಗಿ ಹೇಳಲು ಸಾಧ್ಯವಾಗಿಲ್ಲ. ಸದ್ಯಕ್ಕಂತೂ ತಮ್ಮ 'ಕೊಚಡಯ್ಯಾನ್' ಚಿತ್ರದಲ್ಲಿ ಬಿಜಿಯಾಗಿರುವ ರಜನಿಕಾಂತ್, ನಂತರ ಅದರ ಮುಂದುವರಿದ ಭಾಗವಾದ 'ರಾಣಾ'ಕ್ಕೆ ಸಿದ್ಧರಾಗುತ್ತಿದ್ದಾರೆ. ಇನ್ನು ಕಮಲ್ ಹಾಸನ್, ಬಿಡುಗಡೆಗೆ ಸಿದ್ಧವಾಗಿರುವ ವಿಶ್ವರೂಪಂ ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ, ಜೊತೆಗೆ, ಆಸ್ಕರ್ ರವಿಚಂದ್ರನ್ ನಿರ್ದೇಶನದ ಚಿತ್ರಕ್ಕೆ ರೆಡಿಯಾಗಬೇಕಿದೆ. (ಏಜೆನ್ಸೀಸ್)

English summary
Will Rajinikanth and Kamal Hassan ever come together again? May be yes, says reports. Efforts are secretly being made and there are chances of them coming together again. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada