ಪ್ರಭಾಸ್ ಸಿನಿಮಾ ಬಿಟ್ಟು ರಜನಿಕಾಂತ್‌ಗೆ ಆಕ್ಷನ್ ಕಟ್ ಹೇಳ್ತಾರಾ ಈ ಡೈರೆಕ್ಟರ್?
ಸೂಪರ್ ಸ್ಟಾರ್ ರಜನಿಕಾಂತ್ 'ಕೂಲಿ' ಸಕ್ಸಸ್ ಸಂಭ್ರಮದಲ್ಲಿದ್ದಾರೆ. ಈಗಾಗಲೇ 'ಜೈಲರ್'-2 ಶೂಟಿಂಗ್ ಆರಂಭಿಸಿದ್ದಾರೆ. ಸನ್ ಪಿಕ್ಚರ್ಸ್ ಸಂಸ್ಥೆ ಈ ಚಿತ್ರಕ್ಕೆ ಹಣ ಹೂಡುತ್ತಿದೆ. ಸಾಕಷ್ಟು ನಿರ್ದೇಶಕರು ರಜನಿಕಾಂತ್ ಜೊತೆ ಕೆಲಸ ಮಾಡಲು ಕ್ಯೂ ನಿಂತಿದ್ದಾರೆ. ತೆಲುಗು, ತಮಿಳು ನಿರ್ದೇಶಕರು ಹೋಗಿ ಕಥೆ ಹೇಳಿ ಬರ್ತಿದ್ದಾರೆ.
ತಲೈವಾಗೆ ಆಕ್ಷನ್ ಕಟ್ ಹೇಳು ಅವಕಾಶ ಯಾರಾದರೂ ಮಿಸ್ ಮಾಡಿಕೊಳ್ತಾರಾ? ಸ್ವತಂತ್ರ ನಿರ್ದೇಶಕರಾಗಿ ಗುರ್ತಿಸಿಕೊಳ್ಳುತ್ತಿದ್ದಂತೆ ರಜನಿಗಾಗಿ ಕಥೆ ಸಿದ್ಧಪಡಿಸಿಕೊಳ್ಳುತ್ತಾರೆ. ಯಾವತ್ತಾದರೂ ಒಮ್ಮೆ ಅವರಿಗೆ ಕಥೆ ಹೇಳಿ ಒಪ್ಪಿಸಿ ಸಿನಿಮಾ ಮಾಡೋಣ ಎಂದು ಕಾಯುತ್ತಾರೆ. ಈ ಮಾತನ್ನು ಸಾಕಷ್ಟು ನಿರ್ದೇಶಕರು ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರಜನಿಕಾಂತ್ ಹೊಸ ಪ್ರತಿಭೆಗಳಿಗೆ ಹೆಚ್ಚು ಅವಕಾಶ ಕೊಡುತ್ತಿದ್ದಾರೆ. ಯಾರೇ ನಿರ್ದೇಶಕರು ಕಥೆ ಹೇಳಿದರೂ ಕೇಳುತ್ತಾರೆ.

ತೆಲುಗು ಯುವ ನಿರ್ದೇಶಕ ವಿವೇಕ್ ಆತ್ರೇಯ ಇತ್ತೀಚೆಗೆ ತಲೈವಾಗಿ ಕಥೆ ಹೇಳಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ರಜನಿಕಾಂತ್ ಕೂಡ ಕತೆ ಒಪ್ಪಿದ್ದಾರೆ, ಶೀಘ್ರದಲ್ಲೇ ಸಿನಿಮಾ ಸೆಟ್ಟೇರಬಹುದು ಎನ್ನಲಾಗಿತ್ತು. ಇದೀಗ 'ಮಹಾನಟಿ' ಸಿನಿಮಾ ಖ್ಯಾತಿಯ ನಾಗ್ ಅಶ್ವಿನ್ ಕೂಡ ರಜನಿಕಾಂತ್ ಅವರನ್ನು ಭೇಟಿ ಮಾಡಿ ಕಥೆ ಹೇಳಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. 'ಮಹಾನಟಿ' ಬಳಿಕ ನಾಗ್ ಅಶ್ವಿನ್ 'ಕಲ್ಕಿ 2898AD' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಅದರ ಸೀಕ್ವೆಲ್ ಕೂಡ ಘೋಷಣೆಯಾಗಿದೆ.
ಸದ್ಯ ಪ್ರಭಾಸ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಸದ್ಯಕ್ಕೆ 'ಕಲ್ಕಿ 2898AD' ಪಾರ್ಟ್-2 ಬರೋದು ಅನುಮಾನ ಎನ್ನಲಾಗ್ತಿದೆ. ಅದಕ್ಕೂ ಮುನ್ನ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ 'ಸಲಾರ್- 2' ಚಿತ್ರದಲ್ಲಿ ಪ್ರಭಾಸ್ ನಟಿಸಬೇಕಿದೆ. ಈ ಗ್ಯಾಪ್‌ನಲ್ಲೇ ರಜನಿಕಾಂತ್ ಜೊತೆ ಸಿನಿಮಾ ಮಾಡಲು ನಾಗ್ ಅಶ್ವಿನ್ ಪ್ಲ್ಯಾನ್ ಮಾಡಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.

ವೈಜಯಂತಿ ಮೂವೀಸ್ ಚಿತ್ರ ನಿರ್ಮಾಣ ಸಂಸ್ಥೆಯ ಸಂಸ್ಥಾಪಕ ಅಶ್ವಿನಿ ದತ್ ಅಳಿಯ ನಾಗ್ ಅಶ್ವಿನ್. ಇದೇ ಬ್ಯಾನರ್‌ನಲ್ಲಿ ಅವರು ಹಿಂದಿನ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಬಹಳ ದೊಡ್ಡ ದೊಡ್ಡ ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಿಸಿದೆ. ರಜನಿ- ನಾಗ್ ಅಶ್ವಿನ್ ಚಿತ್ರವನ್ನು ಕೂಡ ಇದೇ ಸಂಸ್ಥೆ ನಿರ್ಮಾಣ ಮಾಡುತ್ತದೆ ಎನ್ನಲಾಗ್ತಿದೆ. ಸದ್ಯ 'ರಾಜಾ ಸಾಬ್' ಹಾಗೂ 'ಫೌಜಿ' ಚಿತ್ರಗಳಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ.
'ಎವಡೆ ಸುಬ್ರಮಣ್ಯಂ' ಸಿನಿಮಾ ಮೂಲಕ ನಾಗ್ ಅಶ್ವಿನ್ ಚಿತ್ರರಂಗಕ್ಕೆ ಬಂದಿದ್ದರು. ಬಳಿಕ 'ಮಹಾನಟಿ' ರೀತಿಯ ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟಿದ್ದರು. ಬಳಿಕ 'ಕಲ್ಕಿ 2898AD' ಚಿತ್ರಕ್ಕೆ ಕೈ ಹಾಕಿದ್ದರು. ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಕಮಲ್ ಹಾಸನ್, ದೀಪಿಕಾ ಪಡುಕೋಣೆ ಸೇರಿ ಘಟಾನುಘಟಿ ಕಲಾವಿದರು ನಟಿಸಿದ್ದರು. ತಕ್ಕ ಮಟ್ಟಿಗೆ ಸಿನಿಮಾ ಗೆದ್ದಿತ್ತು.
ರಜನಿಕಾಂತ್ ಜೊತೆ ಸಿನಿಮಾ ಮಾಡುವುದು ತಮಾಷೆ ಮಾತಲ್ಲ. ಅಭಿಮಾನಿಗಳನ್ನು ರಂಜಿಸುವ ಅಂಶಗಳು ಚಿತ್ರದಲ್ಲಿ ಇರಲೇಬೇಕು. ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಆದರೂ ಸಿನಿಮಾ ಗೆಲುವಿನ ಓಟ ಮುಂದುವರೆಸಿದೆ. ಅಭಿಮಾನಿಗಳಿಗೆ ಸಿನಿಮಾ ನಿರಾಸೆ ಮೂಡಿಸಿರುವುದು ಸುಳ್ಳಲ್ಲ. ಸದ್ಯ 'ಜೈಲರ್'-2 ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ನೆಲ್ಸನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಶಿವರಾಜ್‌ಕುಮಾರ್, ಬಾಲಕೃಷ್ಣ ಹಾಗೂ ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











