'ದರ್ಬಾರ್' ನಂತರ ರಜನಿ ಮುಂದಿನ ಚಿತ್ರಕ್ಕೆ ಡೈರೆಕ್ಟರ್ ಫಿಕ್ಸ್

ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯಕ್ಕೆ ಪ್ರವೇಶ ಮಾಡುವ ಹಿನ್ನೆಲೆ ಇನ್ಮುಂದೆ ಸಿನಿಮಾಗಳನ್ನ ಮಾಡುವುದಿಲ್ಲ ಎಂದು ಹೇಳಲಾಗುತ್ತಿತ್ತು. ಪೇಟಾ ಚಿತ್ರದ ಬಳಿಕ ಬೇರೆ ಚಿತ್ರಗಳನ್ನ ಒಪ್ಪಿಕೊಳ್ಳುವುದು ಅನುಮಾನ ಎನ್ನಲಾಗಿತ್ತು.

ಆದರೆ, ಎಆರ್ ಮುರುಗದಾಸ್ ನಿರ್ದೇಶನ ದರ್ಬಾರ್ ಗೆ ಗ್ರೀನ್ ಸಿಗ್ನಲ್ ಕೊಟ್ಟರು. ಈಗ ದರ್ಬಾರ್ ನಂತರ ತಲೈವಾ ಸಿನಿಮಾ ಮಾಡ್ತಾರಾ ಎಂಬುದು ಇನ್ನು ಪಕ್ಕಾ ಆಗಿಲ್ಲ.

ಈ ಮಧ್ಯೆ ಮುಂದಿನ ಚಿತ್ರಕ್ಕೂ ರಜನಿಕಾಂತ್ ತಯಾರಿದ್ದಾರೆ ಎಂಬ ವಿಷಯ ಬಹಿರಂಗವಾಗಿದೆ. ತಮಿಳು ಸ್ಟಾರ್ ನಿರ್ದೇಶಕ ಸಿರುತೈ ಶಿವ ಜೊತೆ ಸೂಪರ್ ಸ್ಟಾರ್ ಮುಂದಿನ ಚಿತ್ರ ಮಾಡುವ ಸಾಧ್ಯತೆ ಇದೆಯಂತೆ.

Rajinikanth Next Movie With Siruthai Siva

ಈಗಾಗಲೇ ನಿರ್ದೇಶಕ ಶಿವ ಅವರು ರಜನಿಕಾಂತ್ ಅವರನ್ನ ಅಪ್ರೋಚ್ ಮಾಡಿದ್ದಾರಂತೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಅಂತಿಮವಾಗಿಲ್ಲ. ಈ ಬಗ್ಗೆ ಮಾತನಾಡಲು ಕೂಡ ಇದು ಸಮಯವಲ್ಲ ಎಂದು ನಿರ್ದೇಶಕ ಶಿವ ಹೇಳಿಕೊಂಡಿದ್ದಾರೆ. ಆದರೆ, ರಜನಿ ಜೊತೆ ಸಿನಿಮಾ ಮಾಡೋದು ಪಕ್ಕಾ ಎನ್ನಲಾಗಿದೆ.

ಶಿವ ಅವರ ಬಗ್ಗೆ ಹೇಳುವುದಾರೇ ಸಿನಿಮಾಟೋಗ್ರಫರ್ ಆಗಿ ಕೆಲಸ ಆರಂಭಿಸಿದ್ದ ಇವರು, ಕಾರ್ತಿ ಜೊತೆ ಸಿರುತೈ ಎಂಬ ಚಿತ್ರ ನಿರ್ದೇಶನ ಮಾಡಿದರು. ಅದಾದ ಬಳಿಕ ಅಜಿತ್ ಜೊತೆ ವೀರಂ, ವೇದಾಲಂ, ವಿವೇಗಂ, ವಿಶ್ವಾಸಂ ಅಂತಹ ಸೂಪರ್ ಹಿಟ್ ಚಿತ್ರಗಳನ್ನ ನೀಡಿದ್ದಾರೆ.

ದರ್ಬಾರ್ ಚಿತ್ರದಲ್ಲಿ ರಜನಿಕಾಂತ್ ಪೊಲೀಸ್ ಆಫೀಸರ್ ಆಗಿ ನಟಿಸಿದ್ದು, ನಯನತಾರ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ದರ್ಬಾರ್ ಪೋಸ್ಟರ್ ಗಳು ಅಭಿಮಾನಿಗಳಿಗೆ ಥ್ರಿಲ್ ಹೆಚ್ಚಿಸಿದ್ದು ಈ ವರ್ಷದ ಅಂತ್ಯಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.

More from Filmibeat

English summary
Tamil Director Siruthai Siva planning to do movie with super star rajinikanth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X