twitter
    For Quick Alerts
    ALLOW NOTIFICATIONS  
    For Daily Alerts

    ಜಯಲಲಿತಾ ಕುರಿತೇನಾ ರಜನಿ ಈ ಡೈಲಾಗ್ ಹೇಳಿದ್ದು!

    By Rajendra
    |

    ತಮಿಳುನಾಡಿನ ರಾಜಕೀಯ ಸಮುದ್ರವಾದರೆ ಅಲ್ಲಿನ ಸಿನಿಮಾ ಜಗತ್ತು ನದಿ ಇದ್ದಂತೆ. ಸಾಗರವನ್ನು ನದಿ ಸೇರಲೇಬೇಕಲ್ಲವೇ. ಎಷ್ಟೇ ಅಣೆಕಟ್ಟು, ಅಡೆತಡೆಗಳನ್ನು ಒಡ್ಡಿದರೂ ನದಿ ಕಡೆಗೆ ಸೇರುವುದು ಸಾಗರವನ್ನು. ಅಲ್ಲೂ ಅಷ್ಟೇ ರಾಜಕೀಯ ಹಾಗೂ ಸಿನಿಮಾ ಎಂಬುದು ಸಾಗರಸಂಗಮದಂತೆ.

    ಅಕ್ರಮ ಆಸ್ತಿ ಗಳಿಕೆಯಲ್ಲಿ ಜೈಲು ಸೇರಿರುವ ಎಐಎಡಿಎಂಕೆ ನಾಯಕಿ ಜಯಲಲಿತಾಗೆ ಕರ್ನಾಟಕ ಹೈಕೋರ್ಟ್ ಜಾಮೀನು ನಿರಾಕರಿಸಿದ್ದು, ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಿರುವುದು ಗೊತ್ತಿದ್ದೇ. ಇದೆಲ್ಲಾ ಹಳೆಯ ಕಥೆಯಾಯಿತು. ಇದಕ್ಕೂ ಮುಂದಿನ ಹಳೆಯ ಕಥೆಯೊಂದು ಈಗಲೂ ಚಾಲ್ತಿಯಲ್ಲಿದೆ. [ರಜನಿ 'ಲಿಂಗಾ' ಚಿತ್ರೀಕರಣಕ್ಕೆ ಶಿವಮೊಗ್ಗದಲ್ಲಿ ವಿರೋಧ]

    A still from movie Padayappa
    ಅದೇನೆಂದರೆ ಅದು ಜಯಲಿಲಿತಾ ಹಾಗೂ ರಜನಿಕಾಂತ್ ಅವರಿಗೆ ಸಂಬಂಧಿಸಿದ್ದು. ಒಂದೊಮ್ಮೆ ರಜನಿಕಾಂತ್ ಅವರ ಜನಪ್ರಿಯತೆಗೂ ಜಯಮ್ಮ ಕತ್ತರಿ ಹಾಕಿದ್ದರಂತೆ. ಚೆನ್ನೈನ ಪೋಯಸ್ ಗಾರ್ಡನ್ ನಲ್ಲಿರುವ ಜಯಮ್ಮನ ಮನೆ 'ವೇದ ನಿಲಯಂ' ಹಾಗೂ ರಜನಿ ಅವರ ಮನೆಗೆ ಕೂಗಳತೆ ದೂರ.

    ರಜನಿಕಾಂತ್ ಅವರು ಡಿಎಂಕೆ ಪಕ್ಷವನ್ನು ಬೆಂಬಲಿಸಿದ್ದಕ್ಕಾಗಿ ಜಯಮ್ಮ ಅವರ ವಿರುದ್ಧ ಕತ್ತಿ ಮಸೆಯುತ್ತಲೇ ಇದ್ದರು. ಕಡೆಗೆ ಭದ್ರತೆಯ ಹೆಸರಲ್ಲಿ ರಜನಿ ಅವರ ಮನೆಯ ದಾರಿಯನ್ನು ಜಯಮ್ಮ ಬಂದ್ ಮಾಡಿಸಿದ್ದರು. ಈ ವಿಚಾರವಾಗಿ ಎಐಎಡಿಎಂಕೆ ಕಾರ್ಯಕರ್ತರು ಹಾಗೂ ರಜನಿ ಅಭಿಮಾನಿಗಳ ನಡುವೆ ಘರ್ಷಣೆ ನಡೆದಿತ್ತು.

    ಇದೆಲ್ಲಾ ಆಗಿ ಏಳು ವರ್ಷಗಳು ಕಳೆಯುತ್ತಿವೆ. ಈಗ ಜಯಮ್ಮ ಜೈಲು ಪಾಲಾಗಿದ್ದಾರೆ. ಆಗ ರಜನಿಕಾಂತ್ ತಮ್ಮ ಪಡೆಯಪ್ಪ ಚಿತ್ರದಲ್ಲಿ ಒಂದು ಡೈಲಾಗ್ ಹೇಳಿದ್ದರು. ಅದು ಜಯಲಲಿತಾ ಅವರ ಕುರಿತೇ ಎಂದೇ ರಜನಿ ಅಭಿಮಾನಿಗಳು ನಂಬುತ್ತಾರೆ.

    ಅದೇನೆಂದರೆ, "ಅತಿಯಾಗಿ ಆಸೆಪಡುವ ಹೆಣ್ಣು ಅತಿಯಾಗಿ ಆವೇಶಪಡುವ ಗಂಡು ಚರಿತ್ರೆಯಲ್ಲಿ ಸುಖಪಟ್ಟ ದಾಖಲೆಗಳು ಇಲ್ಲ" ಎಂದು ರಜನಿಕಾಂತ್ ಸಿಗರೇಟನ್ನು ಆಕಾಶಕ್ಕೆ ಚಿಮ್ಮಿ ಲಬಕ್ ಎಂದು ತುಟಿಯಲ್ಲಿ ಕ್ಯಾಚ್ ಹಿಡಿಯುತ್ತಾರೆ.

    ಸೂಕ್ತ ಸಮಯದಲ್ಲಿ ಸೂಕ್ತ ರೀತಿಯಲ್ಲಿ ರಾಜಕೀಯಕ್ಕೆ ಬರುತ್ತೇನೆ ಎಂದೂ ಹೇಳುತ್ತಾರೆ. ಇದೀಗ ಮತ್ತೆ ಆ ಡೈಲಾಗ್ ಗಳು ಸಿನಿಮಾ ಮತ್ತು ರಾಜಕೀಯ ವಲಯದಲ್ಲಿ ಜಾಲ್ತಿ ಪಡೆದುಕೊಂಡಿವೆ. (ಫಿಲ್ಮಿಬೀಟ್ ಕನ್ನಡ)

    English summary
    The latest buzz that we hear in Kollywood film circles is that, Super Star Rajinikanth's one of the popular dialogue from blockbuster movie 'Padayappa' alludes to Jayalalithaa. It is said that, the dialogue indirectly refers to AIADMK chief Jayalalithaa.
    Wednesday, October 8, 2014, 13:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X