ಅಭಿಮಾನಿಗಳ ಆಸೆಯನ್ನ ನಿರಾಸೆ ಮಾಡಿದ ಸೂಪರ್ ಸ್ಟಾರ್.!

Recommended Video

ಅಭಿಮಾನಿಗಳ ಆಸೆಯನ್ನ ನಿರಾಸೆ ಮಾಡಿದ ಸೂಪರ್ ಸ್ಟಾರ್.! | FILMIBEAT KANNADA

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಪೇಟಾ' ಸಿನಿಮಾ ಬಿಡುಗಡೆಯಾಗಿದ್ದು, ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ತಮಿಳು, ತೆಲುಗು ಮತ್ತು ಹಿಂದಿಯಲ್ಲಿ 'ಪೇಟಾ' ರಿಲೀಸ್ ಆಗಿತ್ತು. ಕನ್ನಡದಲ್ಲೂ ಡಬ್ಬಿಂಗ್ ಆಗಲಿದ್ದು, ಸ್ವತಃ ತಲೈವಾ ವಾಯ್ಸ್ ಡಬ್ ಮಾಡಲಿದ್ದಾರೆ ಎನ್ನಲಾಗಿತ್ತು.

ಇದೀಗ, ಈ ಆಸೆಯನ್ನ ರಜನಿಕಾಂತ್ ನಿರಾಸೆ ಮಾಡಿದ್ದಾರೆ ಎನ್ನಲಾಗಿದೆ. ಹೌದು, ಕನ್ನಡದಲ್ಲಿ ಪೇಟಾ ಚಿತ್ರಕ್ಕೆ ಡಬ್ ಮಾಡಲು ರಜನಿ ಹಿಂದೇಟು ಹಾಕಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

rajinikanth refuses to dub in Kannada

'ಪೇಟಾ' ಚಿತ್ರದ ಕರ್ನಾಟಕ ವಿತರಣೆ ಹಕ್ಕು ಹಾಗೂ ಡಬ್ಬಿಂಗ್ ಹಕ್ಕು ಖರೀದಿಸಿದ್ದ ವಿತರಕ ಜಾಕ್ ಮಂಜು ಅವರು, ಪೇಟಾ ಚಿತ್ರಕ್ಕೆ ರಜನಿಕಾಂತ್ ಅವರಿಂದ ಡಬ್ ಮಾಡಿಸುವ ಪ್ರಯತ್ನ ಆಗ್ತಿದೆ, ಅವರು ಒಪ್ಪಿದರೇ ಕನ್ನಡದಲ್ಲಿ ಅವರೇ ಧ್ವನಿಯಲ್ಲಿ ಸಿನಿಮಾ ರಿಲೀಸ್ ಮಾಡ್ತೀನಿ, ಇಲ್ಲವಾದರೇ ಯೋಚನೆ ಮಾಡ್ತೀನಿ'' ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ರು.

ಅದರಂತೆ ರಜನಿಕಾಂತ್ ಅವರ ಬಳಿ ಈ ವಿಷ್ಯ ಪ್ರಸ್ತಾಪಿಸಲಾಗಿದೆ. ಬಟ್, ರಜನಿಕಾಂತ್ ಕನ್ನಡದಲ್ಲಿ ಡಬ್ ಮಾಡಲು ಒಪ್ಪಲಿಲ್ಲವಂತೆ. ಇದಕ್ಕೆ ಸ್ಪಷ್ಟವಾದ ಕಾರಣ ಬಹಿರಂಗವಾಗಿಲ್ಲ.

ರಜನಿಕಾಂತ್ ವಾಯ್ಸ್ ಡಬ್ ಮಾಡಿಲ್ಲ ಅಂದ್ರೆ ಮುಂದಿನ ಆಯ್ಕೆ ಏನು ಎಂಬುದರ ಬಗ್ಗೆ ಸದ್ಯಕ್ಕೆ ನಿರ್ಧರಿಸಿಲ್ಲ ಎಂದು ವಿತರಕರು ಹೇಳಿದ್ದರು. ಈಗ ರಜನಿ ಆಗಲ್ಲ ಎಂದಿದ್ದಾರೆ. ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.

More from Filmibeat

English summary
Superstar rajinikanth starre petta movie will release in kannada also. But, thalaiva has refused to dub in Kannada him self.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X