ಚಿತ್ರರಂಗದ ಲೆಕ್ಕಾಚಾರ ಉಲ್ಟಾ ಮಾಡಿದ ರಜನಿಯ 'ದರ್ಬಾರ್' ಸಂಭಾವನೆ!

ಸೂಪರ್ ಸ್ಟಾರ್ ರಜನಿಕಾಂತ್ ಸಂಭಾವನೆ ಕಡಿಮೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಚಿತ್ರಜಗತ್ತಿನಲ್ಲಿ ಸದ್ದು ಮಾಡಿತ್ತು. 2.0 ಸಿನಿಮಾ ನಿರೀಕ್ಷೆಯ ಸಕ್ಸಸ್ ತಂದಿರಲಿಲ್ಲ. ಇದು ನಿರ್ಮಾಪಕರಿಗೂ ಖುಷಿ ಕೊಟ್ಟಿರಲಿಲ್ಲ. ಹಾಗಾಗಿ, ರಜನಿ ತಮ್ಮ ಸಂಭಾವನೆ ಕಮ್ಮಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಯಿತು.

'2.0' ಸಿನಿಮಾ ನಿರ್ಮಿಸಿದ್ದ ಲೈಕಾ ಪ್ರೊಡಕ್ಷನ್ ನಲ್ಲಿ ಇನ್ನೊಂದು ಸಿನಿಮಾ ಮಾಡಲು ನಿರ್ಧರಿಸಿದ್ದ ರಜನಿಕಾಂತ್, ಆಮೇಲೆ 'ದರ್ಬಾರ್'ಗೆ ಕಾಲ್ ಶೀಟ್ ಕೊಟ್ಟರು. ಎ.ಆರ್ ಮುರುಗದಾಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಇದೀಗ, ರಜನಿಕಾಂತ್ ಸಂಭಾವನೆ ಬಗ್ಗೆ ಮತ್ತೆ ಚರ್ಚೆಯಾಗುತ್ತಿದೆ. ದರ್ಬಾರ್ ಸಿನಿಮಾಗೆ ರಜನಿಕಾಂತ್ ಸಂಭಾವನೆ ದುಬಾರಿಯಾಗಿದ್ದು, ಇದುವರೆಗೂ ಯಾರೂ ಕೂಡ ಈ ಮಟ್ಟದ ಸಂಭಾವನೆ ಪಡೆದಿಲ್ಲವಂತೆ. ಅಷ್ಟಕ್ಕೂ, ತಲೈವಾ ಸಂಭಾವನೆ ಎಷ್ಟು? ಮುಂದೆ ಓದಿ....

100 ಕೋಟಿ ಸಂಭಾವನೆ ಅಂತೆ

100 ಕೋಟಿ ಸಂಭಾವನೆ ಅಂತೆ

ದರ್ಬಾರ್ ಚಿತ್ರಕ್ಕಾಗಿ ರಜನಿಕಾಂತ್ ಅವರು 100 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಲೈಕಾ ಪ್ರೊಡಕ್ಷನ್ ಮತ್ತು ಎಆರ್ ಮುರುಗದಾಸ್ ಕಾಂಬಿನೇಷನ್ನಲ್ಲಿ ಈ ಸಿನಿಮಾ ಬರ್ತಿದ್ದು, ಈ ಚಿತ್ರಕ್ಕಾಗಿ ಭಾರಿ ಮೊತ್ತವನ್ನ ತಲೈವಾಗೆ ನೀಡಲಾಗಿದೆಯಂತೆ. ರಜನಿಕಾಂತ್ ಅವರ ಸಂಭಾವನೆ ಬಿಟ್ಟು ದರ್ಬಾರ್ ಚಿತ್ರದ ಬಜೆಟ್ 250 ಕೋಟಿಯಾಗಿದೆಯಂತೆ.

ಇಂಡಿಯಾದಲ್ಲೇ ಟಾಪ್

ಇಂಡಿಯಾದಲ್ಲೇ ಟಾಪ್

ಸದ್ಯದವರೆಗೂ ಭಾರತದಲ್ಲಿ ನೂರು ಕೋಟಿ ಸಂಭಾವನೆ ಯಾರು ಪಡೆದುಕೊಂಡಿಲ್ಲ ಎನ್ನಲಾಗಿದೆ. ರಜನಿಕಾಂತ್ ಅವರು ದರ್ಬಾರ್ ಸಿನಿಮಾಗೆ ನೂರು ಕೋಟಿ ಪಡೆದಿರುವುದು ದಾಖಲೆಯಾಗಿದೆಯಂತೆ. 2.0 ಚಿತ್ರಕ್ಕೆ ರೆಸ್ಪಾನ್ಸ್ ನಿರೀಕ್ಷೆಯಂತೆ ಇರಲಿಲ್ಲ. ಆದರೂ ಗಳಿಕೆಯಲ್ಲಿ ಕೊಂಚ ಕಮಾಲ್ ಮಾಡಿತ್ತು. ಬಹುಶಃ ರಜನಿಕಾಂತ್ ಸಂಭಾವನೆ ಮೇಲೆ ಈ ಸಿನಿಮಾ ಯಾವ ಪರಿಣಾಮವೂ ಬೀರಿಲ್ಲ.

ಪ್ಯಾನ್ ಇಂಡಿಯಾ ಸಿನಿಮಾ

ಪ್ಯಾನ್ ಇಂಡಿಯಾ ಸಿನಿಮಾ

ತಮಿಳಿನಲ್ಲಿ ಸಿದ್ಧವಾಗಿರುವ ದರ್ಬಾರ್ ಸಿನಿಮಾ ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲೂ ಬರ್ತಿದೆ. ಆದರೆ, ಕನ್ನಡದಲ್ಲಿ ಬರ್ತಿಲ್ಲ. ಆರಂಭದಲ್ಲಿ ತಮಿಳು ಮಾತ್ರ ಅಂದುಕೊಳ್ಳಲಾಗಿತ್ತು. ಬಟ್, ಬಜೆಟ್-ಮುಂಬೈ ಶೂಟಿಂಗ್ ಹಾಗು ರಜನಿಕಾಂತ್ ಕ್ರೇಜ್ ನೋಡಿ ಪ್ಯಾನ್ ಇಂಡಿಯಾ ಮಾಡಲು ನಿರ್ಧರಿಸಿದರು.

65 ಕೋಟಿ ಇತ್ತಂತೆ!

65 ಕೋಟಿ ಇತ್ತಂತೆ!

ಈ ಹಿಂದೆ 2.0 ಚಿತ್ರಕ್ಕೆ ಹಾಗೂ ಪೇಟಾ ಚಿತ್ರ ಮಾಡುವಾಗ ರಜನಿಕಾಂತ್ ಸುಮಾರು 65 ಕೋಟಿವರೆಗೂ ಸಂಭಾವನೆ ಪಡೆದುಕೊಂಡಿದ್ದರಂತೆ. ಈಗ ನೂರು ಕೋಟಿ ದಾಟಿದೆ ಎನ್ನಲಾಗಿದೆ. ಒಂದು ಕಡೆಯ ವಯಸ್ಸು ಹೆಚ್ಚಾಗ್ತಿದೆ. ಸಿನಿಮಾಗೂ ಅಷ್ಟೊಂದು ರೆಸ್ಪಾನ್ಸ್ ಸಿಕ್ತಿಲ್ಲ. ಆದರೂ ಸಂಭಾವನೆ ಮಾತ್ರ ಚಿತ್ರದಿಂದ ಚಿತ್ರಕ್ಕೆ ಗಗನಕ್ಕೇರುತ್ತಿರುವುದು ಅಚ್ಚರಿ ತಂದಿದೆ.

More from Filmibeat

English summary
Superstar Rajinikanth has taken 100 crore remuneration for his upcoming movie darbar. its really true?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X