ಹೊಂಬಾಳೆ ಚಿತ್ರಕ್ಕೆ ರಜನಿಕಾಂತ್ ಗ್ರೀನ್ ಸಿಗ್ನಲ್? ಆ ನಿರ್ದೇಶಕಿ ಕನ್ಫರ್ಮ್ ಆಗೋದ್ರಾ?

ಸೂಪರ್ ಸ್ಟಾರ್ ರಜನಿಕಾಂತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಚಿತ್ರದಲ್ಲೂ ತಲೈವಾ ನಟಿಸ್ತಾರೆ ಎನ್ನುವ ಗುಸುಗುಸು ಕೇಳಿ ಬರುತ್ತಲೇ ಇದೆ. ರಜನಿ 'ಕಾಂತಾರ- 2' ಚಿತ್ರದಲ್ಲೂ ನಟಿಸ್ತಾರೆ ಎನ್ನಲಾಗಿತ್ತು. ಆದರೆ ಅದೆಲ್ಲಾ ಸುಳ್ಳು ಎನ್ನುವುದು ಗೊತ್ತಾಗಿದೆ. ಆದರೆ ಹೊಂಬಾಳೆ ಫಿಲ್ಮ್ಸ್ ಪ್ರಾಜೆಕ್ಟ್‌ನಲ್ಲಿ ಪಡೆಯಪ್ಪ ನಟಿಸೋದು ಪಕ್ಕಾ ಎನ್ನಲಾಗ್ತಿದೆ.

KGF ಸರಣಿ ಸಿನಿಮಾಗಳು ಗೆದ್ದಾಗ ರಜನಿಕಾಂತ್ ಕರೆ ಮಾಡಿ ತಂಡವನ್ನು ಅಭಿನಂದಿಸಿದ್ದರು. ಸೂಪರ್ ಸ್ಟಾರ್ ಹುಟ್ಟುಹಬ್ಬಕ್ಕೂ ಸಂಸ್ಥೆ ಅಧಿಕೃತ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಶುಭ ಕೋರುತ್ತಿದೆ. ಇನ್ನು ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಸಿನಿಮಾ ನೋಡಿ ತಲೈವಾ ಬಹಳ ಮೆಚ್ಚಿಕೊಂಡಿದ್ದರು. ರಿಷಬ್‌ನ ಮನೆಗೆ ಆಹ್ವಾನಿಸಿ ಸನ್ಮಾನಿಸಿದ್ದರು. ಇದೆಲ್ಲದರ ಬೆನ್ನಲ್ಲೇ ಹೊಂಬಾಳೆ ಬ್ಯಾನರ್‌ ಚಿತ್ರದಲ್ಲಿ ರಜನಿಕಾಂತ್ ನಟಿಸ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ಈ ಬಗ್ಗೆ ಇದುವರೆಗೂ ಅಧಿಕೃತ ಮಾಹಿತಿ ಮಾತ್ರ ಸಿಗುತ್ತಿಲ್ಲ.

Rajinikanths 171st film, which will be directed by Sudha Kongara, will be produced by Hombale Films

ರಜನಿಕಾಂತ್ ಹೊಂಬಾಳೆ ಫಿಲ್ಮ್ಸ್ ಚಿತ್ರದಲ್ಲಿ ನಟಿಸೋದು ಪಕ್ಕಾ ಎನ್ನುವ ಚರ್ಚೆ ಈಗ ಕಾಲಿವುಡ್‌ನಲ್ಲಿ ಶುರುವಾಗಿದೆ. ಸುಧಾ ಕೊಂಗರ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರೆ ಎನ್ನಲಾಗ್ತಿದೆ. ಈ ಹಿಂದೆಯೇ ಹೊಂಬಾಳೆ ಸಂಸ್ಥೆ ಸುಧಾ ಕೊಂಗರ ನಿರ್ದೇಶನದಲ್ಲಿ ಒಂದು ಸಿನಿಮಾ ಘೋಷಿಸಿತ್ತು. ಆದರೆ ಆ ಚಿತ್ರಕ್ಕೆ ಹೀರೊ ಯಾರು ಎನ್ನುವುದು ಪಕ್ಕ ಆಗಿರಲಿಲ್ಲ. ತಮಿಳಿನ ಸೂರ್ಯ, ಯಶ್, ಸಿಂಬು ಸೇರಿದಂತೆ ಹಲವರ ಹೆಸರುಗಳು ಕೇಳಿಬಂದಿತ್ತು. ಆದರೆ ಈಗ ತಲೈವಾ ಹೆಸರು ಚಾಲ್ತಿಗೆ ಬಂದಿದೆ. ಈಗಾಗಲೇ ಸುಧಾ ಕೊಂಗರ ಸೂಪರ್‌ ಸ್ಟಾರ್‌ಗೆ ಕಥೆ ಹೇಳಿದ್ದಾರಂತೆ. ಅದಕ್ಕೆ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆಯಂತೆ.

3 ವರ್ಷಗಳ ಹಿಂದೆ ಬಂದ 'ಸುರರೈ ಪೋಟ್ರು' ಸಿನಿಮಾ ಸೂಪರ್ ಹಿಟ್ ಆಗಿತ್ತು. ಕೊರೊನಾ ಸಂಕಷ್ಟದ ಸಮಯದಲ್ಲಿ ನೇರವಾಗಿ ಓಟಿಟಿಗೆ ಬಂದಿದ್ದ ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಜಿ. ಆರ್‌ ಗೋಪಿನಾಥ್ ಜೀವನಾಧರಿತ ಈ ಚಿತ್ರದಲ್ಲಿ ಸೂರ್ಯ ಹೀರೊ ಆಗಿ ನಟಿಸಿದ್ದರು. ಸುಧಾ ಕೊಂಗರ ನಿರ್ದೇಶನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾ ರಾಷ್ಟ್ರಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿತ್ತು. ಅತ್ಯುತ್ತಮ ಚಿತ್ರಕಥೆಗಾಗಿ ಸುಧಾ ಕೊಂಗರ ಅವರು ಪ್ರಶಸ್ತಿ ಸ್ವೀಕರಿಸಿದ್ದರು.

Rajinikanths 171st film, which will be directed by Sudha Kongara, will be produced by Hombale Films

'ಸುರರೈ ಪೋಟ್ರು' ಚಿತ್ರವನ್ನು ಸುಧಾ ಕೊಂಗರ ಈಗ ಹಿಂದಿಯಲ್ಲಿ ರೀಮೆಕ್ ಮಾಡ್ತಿದ್ಧಾರೆ. ಅಕ್ಷಯ್ ಕುಮಾರ್ ಹೀರೊ ಆಗಿ ನಟಿಸ್ತಿದ್ದಾರೆ. ಇದೆಲ್ಲದರ ನಡುವೆ ರಜನಿಕಾಂತ್ ಸಿನಿಮಾ ಸುದ್ದಿ ಕೇಳಿಬರ್ತಿದೆ. ಸುಧಾ ಕೊಂಗರ ನಿರ್ದೇಶನದ ಸಿನಿಮಾಗಳನ್ನು ನೋಡುತ್ತಿದ್ದರೆ ಖಂಡಿತ ತಲೈವಾ ನಟಿಸೋಕೆ ಒಪ್ಪುತ್ತಾರೆ. ಇನ್ನು ಹೊಂಬಾಳೆ ಸಂಸ್ಥೆ ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲೂ ಸಿನಿಮಾ ನಿರ್ಮಾಣ ಆರಂಭಿಸಿದೆ. ರಜನಿಕಾಂತ್- ಸುಧಾ ಕೊಂಗರ ಸಿನಿಮಾ ತಮಿಳಿನಲ್ಲಿ ನಿರ್ಮಾಣವಾಗಿ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆದರೂ ಅಚ್ಚರಿ ಪಡಬೇಕಿಲ್ಲ.

ಇನ್ನು ರಾಜಕೀಯರಂಗ ಸೇರಲ್ಲ ಎಂದು ಹಿಂದಡಿ ಇಟ್ಟ ರಜನಿಕಾಂತ್ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ಧಾರೆ. ನೆಲ್ಸನ್ ನಿರ್ದೇಶನದ 'ಜೈಲರ್' ಚಿತ್ರದಲ್ಲಿ ನಟಿಸ್ತಿದ್ದಾರೆ. ಲೈಕಾ ಸಂಸ್ಥೆಯ 2 ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದರಲ್ಲಿ ಒಂದು 'ಲಾಲ್‌ ಸಲಾಮ್'. ಐಶ್ವರ್ಯ ರಜನಿಕಾಂತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ತಲೈವಾ ನಟಿಸೋದು ಪಕ್ಕಾ ಆಗಿದೆ. ಇನ್ನು ರಜನಿ ನಟನೆಯ 170ನೇ ಚಿತ್ರಕ್ಕೆ 'ಜೈ ಭೀಮ್' ಸಿನಿಮಾ ಮಾಡಿದ್ದ ಜ್ಞಾನವೇಲ್ ಆಕ್ಷನ್ ಕಟ್ ಹೇಳಲಿದ್ದಾರೆ.

More from Filmibeat

English summary
Rajinikanth's next film, which will be directed by Sudha Kongara, will be produced by Hombale Films. KGF Makers Already announced movie with Soorarai Pottru maker Sudha Kongara. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X