ಅಬ್ಬಬ್ಬಾ ಒಂದು ದಿನಕ್ಕೆ ತಲೈವಾ ಸಂಭಾವನೆ ₹3.5 ಕೋಟಿ? ಅದ್ಯಾವ್ ಸಿನಿಮಾ, ಏನ್ ಕಥೆ?

By ಫಿಲ್ಮಿಬೀಟ್ ಡೆಸ್ಕ್

ಸೂಪರ್ ಸ್ಟಾರ್ ರಜಿನಿಕಾಂತ್ ಕ್ರೇಜ್ ಎಂಥಾದ್ದು ಅನ್ನೋದನ್ನು ಬಿಡಿಸಿ ಹೇಳುವುದು ಬೇಕಾಗಿಲ್ಲ. ಇನ್ನು ತಲೈವಾ ಚಿತ್ರವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಜೇಬಿಗಿಳಿಸ್ತಾರೆ ಅನ್ನೋದು ಗೊತ್ತಿದೆ. ಆದರೆ ಹೊಸ ಚಿತ್ರವೊಂದಕ್ಕೆ ರಜನಿಕಾಂತ್ 7 ದಿನ ಕಾಲ್‌ಶೀಟ್ ಕೊಟ್ಟಿದ್ದಾರಂತೆ. ಅದಕ್ಕಾಗಿ ₹25 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗ್ತಿದೆ.

ರಾಜಕೀಯಕ್ಕೆ ಹೋದರೆ ಸಿನಿಮಾನೇ ಮಾಡಲ್ಲ ಎಂದುಕೊಂಡಿದ್ದ ತಲೈವಾ ಈಗ ಫುಲ್ ಟೈಂ ಸಿನಿಮಾಗಳಲ್ಲೇ ಬ್ಯುಸಿಯಾಗಿದ್ದಾರೆ. ಟಾಕ್ ಏನೇ ಇದ್ದರೂ ಇವರ ಸಿನಿಮಾಗಳು ಭರ್ಜರಿ ಬ್ಯುಸಿನೆಸ್‌ ಮಾಡ್ತಾವೆ. ವಯಸ್ಸು 70 ದಾಟಿದ್ರೂ ತಲೈವಾ ಬಾಕ್ಸಾಫೀಸ್ ಸ್ಟಾಮಿನಾ ಕಮ್ಮಿ ಆಗಿಲ್ಲ. ಇವತ್ತಿಗೂ ಸೂಪರ್ ಸ್ಟಾರ್ ಸಿನಿಮಾಗಳು ನೂರಾರು ಕೋಟಿ ಕಲೆಕ್ಷನ್ ಮಾಡುತ್ತವೆ. ಸೆಟ್ಟೇರೋದಕ್ಕು ಮೊದಲೇ ಥ್ರಿಯೇಟ್ರಿಕಲ್ ರೈಟ್ಸ್, ಡಿಜಿಟಲ್ ರೈಟ್ಸ್, ಓಟಿಟಿ ರೈಟ್ಸ್ ದಾಖಲೆ ಬೆಲೆಗೆ ಬಿಕರಿ ಆಗುತ್ತದೆ.

ರಜನಿಕಾಂತ್ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಆದರೆ ತಲೈವಾ ಅಳೆದು ತೂಗಿ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಪಾತ್ರ ಚಿಕ್ಕದಾದರೂ ತೂಕ ಇರುವ ಪಾತ್ರಗಳಿಗೆ ಸೈ ಎನ್ನುತ್ತಿದ್ದಾರೆ.

ರಜನಿಕಾಂತ್ ಅತಿಥಿ ಪಾತ್ರ

ರಜನಿಕಾಂತ್ ಅತಿಥಿ ಪಾತ್ರ

ಸದ್ಯ ನೆಲ್ಸನ್ ನಿರ್ದೇಶನದ 'ಜೈಲರ್' ಚಿತ್ರದಲ್ಲಿ ರಜನಿಕಾಂತ್ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ನಂತರ 'ಲಾಲ್ ಸಲಾಮ್' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ತಲೈವಾ ಹೀರೊ ಆಗಿ ನಟಿಸ್ತಿಲ್ಲ. ಸ್ಪೆಷಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಷ್ಣು ವಿಶಾಲ್, ವಿಕ್ರಾಂತ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸ್ವತಃ ರಜನಿಕಾಂತ್ ಪುತ್ರಿ ಐಶ್ವರ್ಯ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಚಿತ್ರಕ್ಕಾಗಿ ₹25 ಕೋಟಿ ಸಂಭಾವನೆ

ಚಿತ್ರಕ್ಕಾಗಿ ₹25 ಕೋಟಿ ಸಂಭಾವನೆ

ಹೌದು ಹೀಗೊಂದು ಸುದ್ದಿ ಕಾಲಿವುಡ್‌ನಲ್ಲಿ ಚಕ್ಕರ್ ಹೊಡೀತಿದೆ. 'ಲಾಲ್ ಸಲಾಮ್' ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಲು ತಲೈವಾ 7 ದಿನ ಕಾಲ್‌ಶೀಟ್ ಮಾತ್ರ ಕೊಟ್ಟಿದ್ದಾರಂತೆ. 25 ಕೋಟಿ ಚಾರ್ಜ್ ಮಾಡಿದ್ದಾರಂತೆ. ಅಂದರೆ ದಿನಕ್ಕೆ ಮೂರುವರೆ ಕೋಟಿ ಸಂಭಾವನೆ ಎನ್ನವಂತಾಯಿತು. ಇದಕ್ಕೆ ಲೈಕಾ ಸಂಸ್ಥೆ ಕೂಡ ಒಪ್ಪಿಕೊಂಡಿದೆಯಂತೆ. ಶೀಘ್ರದಲ್ಲೇ ರಜನಿಕಾಂತ್ 'ಲಾಲ್ ಸಲಾಮ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.

ಮತ್ತೊಂದು ಸಿನಿಮಾ ಡೀಲ್

ಮತ್ತೊಂದು ಸಿನಿಮಾ ಡೀಲ್

ರಜನಿಕಾಂತ್ ನಟನೆಯ '2.0' ಹಾಗೂ 'ದರ್ಬಾರ್‌' ಸಿನಿಮಾಗಳನ್ನು ಲೈಕಾ ಸಂಸ್ಥೆ ನಿರ್ಮಿಸಿತ್ತು. ಎರಡೂ ಸಿನಿಮಾಗಳು ಲಾಭ ತಂದುಕೊಟ್ಟಿತ್ತು. ಅಂದಹಾಗೆ ಸಂಸ್ಥೆ ಈ ಬಾರಿ 2 ಸಿನಿಮಾಗಳಿಗೆ ತಲೈವಾ ಜೊತೆ ಒಪ್ಪಂದ ಮಾಡಿಕೊಂಡಿದೆ. 'ಲಾಲ್‌ ಸಲಾಮ್' ಚಿತ್ರದ ವಿಶೇಷ ಪಾತ್ರಕ್ಕೆ ₹25 ಕೋಟಿ ಸಂಭಾವನೆ ಕೊಡುತ್ತಿರುವ ಸಂಸ್ಥೆ ಸೂಪರ್ ಸ್ಟಾರ್ ಹೀರೊ ಆಗಿ ಮತ್ತೊಂದು ಪ್ರಾಜೆಕ್ಟ್ ಪ್ಲ್ಯಾನ್ ಮಾಡ್ತಿದೆ. ಹಾಗಾಗಿ ಈ ಭಾರೀ ಡೀಲ್ ಕುದುರಿಸಿಕೊಂಡಿದೆ. ಶೀಘ್ರದಲ್ಲೇ ಆ ಸಿನಿಮಾ ಕೂಡ ಘೋಷಣೆ ಆಗಲಿದೆ.

'ಜೈಲರ್' ಚಿತ್ರಕ್ಕೆ ₹120 ಕೋಟಿ

'ಜೈಲರ್' ಚಿತ್ರಕ್ಕೆ ₹120 ಕೋಟಿ

ಸದ್ಯ ಮಂಗಳೂರಿನಲ್ಲಿ 'ಜೈಲರ್' ಸಿನಿಮಾ ಶೆಡ್ಯೂಲ್ ಮುಗಿಸಿದ್ದಾರೆ. ನಟ ಶಿವರಾಜ್‌ಕುಮಾರ್ ಕೂಡ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಮೋಹನ್ ಲಾಲ್ ಕೂಡ ಚಿತ್ರದಲ್ಲಿ ಗೆಸ್ಟ್ ಅಪಿರೆನ್ಸ್ ಮಾಡಿದ್ದಾರೆ. ರಮ್ಯಾಕೃಷ್ಣ, ತಮನ್ನಾ ಸೇರಿದಂತೆ ಭಾರೀ ತಾರಾಗಣ ಚಿತ್ರದಲ್ಲಿದೆ. ಸನ್ ಪಿಕ್ಚರ್ಸ್ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡ್ತಿದೆ. ಈ ಚಿತ್ರಕ್ಕಾಗಿ ತಲೈವಾ ₹120 ಕೋಟಿಗೂ ಅಧಿಕ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Rajinikanth to be paid whopping Rs 25 crore as salary for Lal salaam guest role? Rajinikanth's daughter Aishwarya Rajinikanth is making her comeback as a director with this movie. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X