For Quick Alerts
  ALLOW NOTIFICATIONS  
  For Daily Alerts

  ಕಾರ್ತಿಕ್ ಸುಬ್ಬರಾಜು ಜೊತೆ ಮತ್ತೆ ಚಿತ್ರ ಮಾಡಲು ಮುಂದಾದ ರಜನಿ!

  |

  'ಅಣ್ಣಾತ್ತೆ' ಸಿನಿಮಾ ಬಳಿಕ ರಜನಿಕಾಂತ್ ಮುಂದಿನ ಸಿನಿಮಾ ಯಾವುದು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ನಿರ್ದೇಶಕ ದೇಸಿಂಗ್ ಪೆರಿಯಸಾಮಿ ಜೊತೆ ಮುಂದಿನ ಪ್ರಾಜೆಕ್ಟ್ ಮಾಡಬಹುದು ಎಂಬ ಸುದ್ದಿ ಹರಿದಾಡಿತ್ತು.

  ಇದೀಗ, ಕಾರ್ತಿಕ್ ಸುಬ್ಬರಾಜು ನಿರ್ದೇಶನದಲ್ಲಿ ಮತ್ತೊಮ್ಮೆ ತಲೈವಾ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

  ಕೊರೊನಾ ನಡುವೆಯೂ ರಜನಿಕಾಂತ್ 'ಅಣ್ಣಾತೆ' ಶೂಟಿಂಗ್: ಹೈದರಾಬಾದ್‌ಗೆ ಆಗಮಿಸಿದ ನಯನತಾರಾಕೊರೊನಾ ನಡುವೆಯೂ ರಜನಿಕಾಂತ್ 'ಅಣ್ಣಾತೆ' ಶೂಟಿಂಗ್: ಹೈದರಾಬಾದ್‌ಗೆ ಆಗಮಿಸಿದ ನಯನತಾರಾ

  ಈ ಹಿಂದೆ ರಜನಿಕಾಂತ್ ಜೊತೆ 'ಪೇಟಾ' ಸಿನಿಮಾ ಮಾಡಿದ್ದ ಕಾರ್ತಿಕ್ ಸುಬ್ಬರಾಜು ಈಗ ಎರಡನೇ ಸಲ ತಲೈವಾಗೆ ಆಕ್ಷನ್ ಕಟ್ ಹೇಳಲು ಅವಕಾಶ ಪಡೆದುಕೊಳ್ಳಲಿದ್ದಾರೆ ಎಂದು ಕಾಲಿವುಡ್ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಇಲ್ಲ.

  ಪ್ರಸ್ತುತ, ಧನುಶ್ ನಟನೆಯ 'ಜಗಮೇ ತಂಥೀರಂ' ಎಂಬ ಚಿತ್ರವನ್ನು ಕಾರ್ತಿಕ್ ಸುಬ್ಬರಾಜು ನಿರ್ದೇಶಿಸಿದ್ದಾರೆ. ಈ ಚಿತ್ರದ ಕೆಲಸ ನೋಡಿ ರಜನಿಕಾಂತ್ ಮೆಚ್ಚಿಕೊಂಡಿದ್ದು, ಮತ್ತೊಮ್ಮೆ ಪೇಟಾ ನಿರ್ದೇಶಕನ ಜೊತೆ ಕೆಲಸ ಮಾಡುವ ಆಸಕ್ತಿ ತೋರಿದ್ದಾರಂತೆ.

  ಫಿಜಾ, ಜಿಗರ್ ಥಂಡಾ, ಮೆರ್ಕ್ಯುರಿ, ಪೇಟಾ ಅಂತಹ ಚಿತ್ರಗಳನ್ನು ನಿರ್ದೇಶಿಸಿರುವ ಕಾರ್ತಿಕ್ ಸುಬ್ಬರಾಜು ಈಗ ಧನುಶ್ ನಟನೆಯ 'ಜಗಮೇ ತಂಥೀರಂ' ಮತ್ತು ಚಿಯಾನ್ ವಿಕ್ರಂ ನಟನೆಯ 60ನೇ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಈ ನಡುವೆ ರಜನಿ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎಂದು ಚರ್ಚೆಯಾಗುತ್ತಿದೆ.

  ಕೊರೊನಾ ನೆಗೆಟಿವ್ ವರದಿ ಬಂದ ತಕ್ಷಣ ಮಕ್ಕಳನ್ನು ಕಂಡ ಅಲ್ಲು ಅರ್ಜುನ್ ಫುಲ್ ಹ್ಯಾಪಿ | Filmibeat Kannada

  ಇನ್ನು ಸಿರುತೈ ಶಿವ ನಿರ್ದೇಶನದ 'ಅಣ್ಣಾತ್ತೆ' ಸಿನಿಮಾ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 4 ರಂದು ತೆರೆಗೆ ಬರಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ. ಸದ್ಯ, ಹೈದರಾಬಾದ್‌ನಲ್ಲಿ ಚಿತ್ರೀಕರಣ ಸಾಗ್ತಿದೆ. ಕೀರ್ತಿ ಸುರೇಶ್, ನಯನತಾರ, ಖುಷ್ಬೂ, ಮೀನಾ, ಪ್ರಕಾಶ್ ರಾಜ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  English summary
  Tamil superstar Rajinikanth will join hands with Karthik Subbaraj again.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X