'ಜೈಲರ್ - 2'ನಲ್ಲಿ ಗುರು ಶಿಷ್ಯನ ಜುಗಲಬಂದಿ ? ಶಾರುಖ್ ಬದಲು ರಜನಿ ಸಿನಿಮಾದಲ್ಲಿ ಹೃತಿಕ್ ರೋಷನ್ ಎಂಟ್ರಿ?

ಸಾಮಾನ್ಯವಾಗಿ ಒಬ್ಬ ಸೂಪರ್ ಸ್ಟಾರ್ ನಾಯಕನ ಚಿತ್ರ ಆರಂಭವಾದರೆ, ಆ ಚಿತ್ರದ ಸುತ್ತಮುತ್ತ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ತಾವೆ. ಚಿತ್ರದ ಕಥೆ ಆದಿ ಸೇರಿ ಹಲವು ವಿಚಾರಗಳಿಂದ ಕುತೂಹಲ ತಂತಾನೇ ಗರಿಗೇದರುತ್ತೆ. ಇಲಿ ಹೋದರೂ ಹುಲಿ ಹೋಯ್ತು ಅಂತ ಜನ ಚರ್ಚೆ ಮಾಡಲು ಶುರು ಮಾಡುತ್ತಾರೆ. ಅಂತಹದ್ದರಲ್ಲಿ ಸೂಪರ್ ಸ್ಟಾರ್ ಜೊತೆ ಬ್ಲಾಕ್ ಬಸ್ಟರ್ ಡೈರೆಕ್ಟರ್ ಕೈ ಜೋಡಿಸಿದರೆ ಕೇಳಬೇಕಾ..? ಆ ಚಿತ್ರ ಕುತೂಹಲದ ಕಡಲು ಆಗಿರುತ್ತೆ. ಉದಾಹರಣೆಗೆ ರಜನಿಕಾಂತ್ ಅಭಿನಯದ ''ಜೈಲರ್ 2''.

ಹೌದು, ''ಜೈಲರ್ 2''.. ಸೂಪರ್ ಸ್ಟಾರ್ ರಜನಿಕಾಂತ್ ಮತ್ತೊಮ್ಮೆ ನೆಲ್ಸನ್ ಜೊತೆ ಮಾಡುತ್ತಿರುವ ಮಹಾಯಜ್ಞ. ಆರಂಭದಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಲೇ ಬಂದ ಈ ಚಿತ್ರದಲ್ಲಿ ನಮ್ಮ ಶಿವಣ್ಣ ಕೂಡ ಇದ್ದಾರೆ. ಮತ್ತೊಮ್ಮೆ ನರಸಿಂಹನ ರೂಪದಲ್ಲಿ ಕಾಣಸಿಗಲಿದ್ದಾರೆ. ಮೋಹನ್ ಲಾಲ್ ಕೂಡ ಮ್ಯಾಥ್ಯೂ ಪಾತ್ರಕ್ಕೆ ಮತ್ತೊಮ್ಮೆ ಜೀವ ತುಂಬಿದ್ದಾರೆ.

SHOCKER Shah Rukh Khan Out Hrithik Roshan In For Rajinikanth s Jailer 2

ಈ ಮೂವರ ಜೊತೆ ಜಾಕಿ ಶ್ರಾಫ್, ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್ , ಎಸ್‌ ಜೆ ಸೂರ್ಯ ಕೂಡ ಚಿತ್ರದಲ್ಲಿದ್ದಾರೆ. ಇದೀಗ ಈ ಚಿತ್ರತಂಡವನ್ನು ಹೃತಿಕ್ ರೋಶನ್ ಕೂಡ ಸೇರಿಕೊಳ್ಳಲಿದ್ದಾರೆ ಎನ್ನುವುದು ಸದ್ಯದ ಲೇಟೆಸ್ಟ್ ನ್ಯೂಸ್.

ಹೌದು. ಅಸಲಿಗೆ ರಜನಿಯ ಮಹತ್ವಕಾಂಕ್ಷೆಯ ಜೈಲರ್ ನಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನುವ ಸುದ್ದಿ ಹಿಂದೆ ಗುಲ್ಲಾಗಿತ್ತು. ಈ ಸುದ್ದಿಯನ್ನು ಕೇಳಿ ಸಹಜವಾಗಿ ಅಭಿಮಾನಿಗಳು ಖುಷಿಯಾಗಿದ್ದರು ಕೂಡ.

ಆದರೆ, ಶಾರುಖ್ ಖಾನ್ ಸದ್ಯ ''ಕಿಂಗ್'' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಮೂಲಕ ಕಿಂಗ್ ಖಾನ್ ಮಗಳು ಸುಹಾನ ಬೆಳ್ಳಿತೆರೆಗೆ ಲಗ್ಗೆ ಇಡಲಿದ್ದಾರೆ. ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್ ಅವರನ್ನೊಳಗೊಂಡು ದೊಡ್ಡ ತಾರಾಬಳಗ ''ಕಿಂಗ್'' ಚಿತ್ರದಲ್ಲಿದೆ.

ಶಾರುಖ್ ಖಾನ್ ಪಾಲಿಗಿದು ತುಂಬಾನೇ ಮಹತ್ವದ ಸಿನಿಮಾ. ಈ ಹಿನ್ನೆಲೆ ತಮ್ಮ ಎಲ್ಲ ಗಮನವನ್ನು ಶಾರುಖ್ ಖಾನ್ ''ಕಿಂಗ್'' ಕಡೆ ನೀಡುತ್ತಿದ್ದಾರೆ. ಈ ಹಿನ್ನೆಲೆ ''ಜೈಲರ್ 2'' ಗೆ ನೋ ಎಂದು ಶಾರುಖ್ ಖಾನ್ ಹೇಳಿದ್ಧಾರೆ ಎನ್ನುವ ಸುದ್ದಿ ಇದೆ.

SHOCKER Shah Rukh Khan Out Hrithik Roshan In For Rajinikanth s Jailer 2

ಹೀಗಿರುವಾಗ ಇದೀಗ ಶಾರುಖ್ ಖಾನ್ ಬರಲು ಒಪ್ಪದ ಹಿನ್ನೆಲೆ ಚಿತ್ರತಂಡ ಹೃತಿಕ್ ರೋಶನ್‌ಗೆ ಮಣೆ ಹಾಕಿದೆ ಎನ್ನುವ ಸುದ್ದಿ ಸದ್ಯ ಪಸರ್ ಆಗಿದೆ. ''ವಲೈಪೆಚು'' ಈ ಕುರಿತು ವರದಿಯನ್ನು ಮಾಡಿದ್ದು ಆ ಪ್ರಕಾರ ''ಜೈಲರ್ 2'' ತಂಡ ಈಗಾಗಲೇ ಹೃತಿಕ್ ರೋಷನ್ ಅವರನ್ನು ಸಂಪರ್ಕಿಸಿದೆ. ಒಂದು ಸುತ್ತಿನ ಮಾತುಕಥೆಯನ್ನು ಕೂಡ ಮಾಡಿದೆ.

ಇನ್ನು ಹೃತಿಕ್ ರೋಷನ್‌ ಪಾಲಿಗೆ ರಜನಿ ಮೊದಲ ಗುರು. ಈ ಹಿಂದೆ ಖುದ್ದು ಹೃತಿಕ್ ರೋಷನ್ ಈ ಮಾತನ್ನು ಹೇಳಿದ್ದಾರೆ ಕೂಡ. 1986ರಲ್ಲಿ ರಜನಿಕಾಂತ್ ಜೊತೆ ''ಭಗವಾನ್ ದಾದಾ'' ಎಂಬ ಸಿನಿಮಾದಲ್ಲಿ ರಜನಿ ಎದುರು ಬಾಲ ನಟನಾಗಿ ಅಭಿನಯಿಸಿದ್ದ ನೆನಪು ಹಂಚಿಕೊಂಡಿದ್ದ ಹೃತಿಕ್ ರೋಷನ್,
"ನಿಮ್ಮ ಪಕ್ಕದಲ್ಲಿಯೇ ನಾನೊಬ್ಬ ನಟನಾಗಿ ನನ್ನ ಮೊದಲ ಹೆಜ್ಜೆ ಇಟ್ಟೆ. ರಜನಿಕಾಂತ್ ಸರ್, ನೀವು ನನ್ನ ಮೊದಲ ಗುರುಗಳಲ್ಲಿ ಒಬ್ಬರಾಗಿದ್ದೀರಿ. ನೀವು ನನಗೆ ನಿರಂತರ ಸ್ಪೂರ್ತಿ. ತೆರೆಮೇಲೆ ನೀವು 50 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕೆ ನಿಮಗೆ ಅಭಿನಂದನೆಗಳು ಎಂದು ಕಳೆದ ವರ್ಷ ಪೋಸ್ಟ್ ಮಾಡಿದ್ದರು.

ರಜನಿಯ ಮೇಲೀನ ಈ ಅಭಿಮಾನ ಹೃತಿಕ್ ರೋಷನ್ ಅವರನ್ನು ದಕ್ಷಿಣದತ್ತ ಕರೆತಂದರು ತರಬಹುದು. ''ಜೈಲರ್ 2 ''ನಲ್ಲಿ ಹೃತಿಕ್ ಚಿಕ್ಕ ಮತ್ತು ಚೊಕ್ಕದಾದ ಪಾತ್ರ ನಿರ್ವಹಿಸಿದರು ನಿರ್ವಹಿಸಬಹುದು. ಆ ಸಾಧ್ಯತೆ ಸದ್ಯಕ್ಕಂತೂ ಇದೆ. ಹೀಗಾಗಿ ಹಲವರು ಅಧಿಕೃತ ಘೋಷಣೆ ಯಾವ ಕ್ಷಣದಲ್ಲಾದರೂ ಹೊರ ಬೀಳಬಹುದೆಂದು ನಿರ್ಮಾಣ ಸಂಸ್ಥೆಯಾದ ''ಸನ್‌ಪಿಕ್ಚರ್ಸ್‌''ನ ಸಾಮಾಜಿಕ ಜಾಲತಾಣದ ಮೇಲೆ ಕಣ್ಣಿಟ್ಟಿದ್ದಾರೆ.

English summary
Not Shah Rukh Khan! Hrithik Roshan might step in for a powerful cameo in Rajinikanth’s highly anticipated Jailer 2. Get the latest updates here!
Read more about: jailer rajanikanth hrithik roshan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X