ರಕ್ಷಿತ್ - ಮೇಘನಾ ಜೋಡಿ : ಇದು ಸ್ನೇಹನಾ? ಪ್ರೀತಿನಾ?

Recommended Video

ರಕ್ಷಿತ್ ಶೆಟ್ಟಿ ಹಾಗು ಮೇಘನಾ ಗಾಂವ್ಕರ್ ಫೋಟೋ ವೈರಲ್ ಆಯ್ತು | FILMIBEAT KANNADA

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ದೊಡ್ಡ ಸುದ್ದಿ ಮಾಡಿದ್ದ ವಿಷಯಗಳಲ್ಲಿ ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ಬ್ರೇಕ್ ಅಪ್ ಸುದ್ದಿ ಕೂಡ ಒಂದಾಗಿತ್ತು. ಈ ವಿಷಯ ಅವರಿಬ್ಬರ ಅಭಿಮಾನಿಗಳಿಗೆ ಆಘಾತ ಮೂಡಿಸಿತ್ತು.

ಕೊನೆಗೂ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಾನೊಂದು ತೀರ ನೀನೊಂದು ತೀರ ಅಂತ ದೂರ ಆದರು. ಪ್ರೀತಿ, ಪ್ರೇಮ ಕೈ ಬಿಟ್ಟ ಇಬ್ಬರು ಸದ್ಯಕ್ಕೆ ಅವರವರ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದರು.

ಆದರೆ, ರಶ್ಮಿಕಾ ಮಂದಣ್ಣ ಬಿಟ್ಟು ಹೋದ್ರು ಎಂದು ನಟ ರಕ್ಷಿತ್ ಶೆಟ್ಟಿ ದೇವದಾಸ್ ಆಗಲಿಲ್ಲ. ಕಾರಣ, ರಕ್ಷಿತ್ ಬದುಕಿನಲ್ಲಿ ಮತ್ತೆ ಮಳೆ ಬರುವ ಸಮಯ ಬಂದಿರುವ ಹಾಗೆ ಕಾಣುತ್ತಿದೆ. ಆ ರೀತಿ ಅವರ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಅವರ ಇತ್ತೀಚಿಗಿನ ಒಂದು ಫೋಟೋ. ಮುಂದೆ ಓದಿ...

ಇತ್ತೀಚಿಗಿನ ಒಂದು ಫೋಟೋ

ಇತ್ತೀಚಿಗಿನ ಒಂದು ಫೋಟೋ

ಇತ್ತೀಚಿಗಷ್ಟೆ ಟೈಮ್ಸ್ KAFTA ಎಂಬ ಒಂದು ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಭಾಗಿಯಾಗಿದ್ದರು. ಅದೇ ರೀತಿ ನಟ ರಕ್ಷಿತ್ ಶೆಟ್ಟಿ ಹಾಗೂ ಮೇಘನಾ ಗಾಂವ್ಕರ್ ಸಹ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಅಕ್ಕ ಪಕ್ಕ ಕುಳಿತಿದ್ದ ಅವರಿಬ್ಬರ ಫೋಟೋ ಈಗ ಎಲ್ಲರ ಗಮನ ಸೆಳೆದಿದೆ.

ಮೇಘನಾ ಗಾಂವ್ಕರ್ ಇನ್ಟಾಗ್ರಾಮ್ ಖಾತೆ

ಮೇಘನಾ ಗಾಂವ್ಕರ್ ಇನ್ಟಾಗ್ರಾಮ್ ಖಾತೆ

ಕಾರ್ಯಕ್ರಮಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಇರುವ ಒಂದು ಫೋಟೋವನ್ನು ಮೇಘನಾ ಗಾಂವ್ಕರ್ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇಬ್ಬರ ಫೋಟೋ ಬಲು ಸುಂದರವಾಗಿತ್ತು. ಇಬ್ಬರು ಮುದ್ದಾಗಿ ಕಾಣುತ್ತಿದ್ದರು.

'ಮೇಡ್ ಫಾರ್ ಈಚ್ ಅದರ್' ಎಂದ ಫ್ಯಾನ್ಸ್

'ಮೇಡ್ ಫಾರ್ ಈಚ್ ಅದರ್' ಎಂದ ಫ್ಯಾನ್ಸ್

ರಕ್ಷಿತ್ ಶೆಟ್ಟಿ ಹಾಗೂ ಮೇಘನಾ ಫೋಟೋ ನೋಡಿದ ಅನೇಕ ಅಭಿಮಾನಿಗಳು ಮೇಡ್ ಫಾರ್ ಈಚ್ ಅದರ್ ಎಂದು ಹೇಳುತ್ತಿದ್ದಾರೆ. ಮೇಘನಾ ಇನ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋಗೆ ಸಾಕಷ್ಟು ಕಮೆಂಟ್ಸ್ ಬಂದಿದ್ದು, ನೀವಿಬ್ಬರೂ ಒಳ್ಳೆಯ ಜೋಡಿ ಎಂದು ಅನೇಕರು ತಮ್ಮ ಅಭಿಪ್ರಾಯ ಹೇಳಿಕೊಳ್ಳುತ್ತಿದ್ದಾರೆ.

ಮತ್ತೆ ರಕ್ಷಿತ್ ಬದುಕಿನಲ್ಲಿ ಪ್ರೀತಿ?

ಮತ್ತೆ ರಕ್ಷಿತ್ ಬದುಕಿನಲ್ಲಿ ಪ್ರೀತಿ?

ಈ ಫೋಟೋ ನೋಡಿದ ಸಾಕಷ್ಟು ಜನರು ಮತ್ತೆ ರಕ್ಷಿತ್ ಬದುಕಿನಲ್ಲಿ ಪ್ರೀತಿ ಮೂಡಿದೆ ಎನ್ನುತ್ತಿದ್ದಾರೆ. ಆದರೆ, ನಿಜವಾಗಿಯೂ ರಕ್ಷಿತ್ ಶೆಟ್ಟಿ ಹಾಗೂ ಮೇಘನಾ ನಡುವೆ ಪ್ರೀತಿ ಮೂಡಿದೆಯೇ ಅಥವಾ ಅವರಿಬ್ಬರು ಸ್ನೇಹಿತ - ಸ್ನೇಹಿತೆ ಅಷ್ಟೇನಾ ತಿಳಿದಿಲ್ಲ.

6 ವರ್ಷದ ಸ್ನೇಹ

6 ವರ್ಷದ ಸ್ನೇಹ

ನಟ ರಕ್ಷಿತ್ ಶೆಟ್ಟಿ ಮೊದಲ ನಟನಾಗಿ ಕಾಣಿಸಿಕೊಂಡಿದ್ದ ಸಿನಿಮಾ 'ತುಗ್ಲಕ್'. ಈ ಸಿನಿಮಾದಲ್ಲಿ ರಕ್ಷಿತ್ ನಾಯಕಿ ಆಗಿದ್ದು, ಮೇಘನಾ ಗಾಂವ್ಕರ್. ತಮ್ಮ ಮೊದಲ ಸಿನಿಮಾದಿಂದ ಪರಿಚಿತವಾದ ಮೇಘನಾ ಅವರ ಜೊತೆಗೆ ರಕ್ಷಿತ್ ಸ್ನೇಹ ಇಂದಿಗೂ ಮುಂದಿವರೆದಿದೆ.

ಫಿಟ್ನೆಸ್ ಚಾಲೆಂಜ್

ಫಿಟ್ನೆಸ್ ಚಾಲೆಂಜ್

ಕೆಲ ತಿಂಗಳುಗಳ ಹಿಂದೆ ಚಾಲ್ತಿಯಲ್ಲಿದ್ದ ಫಿಟ್ನೆಸ್ ಚಾಲೆಂಜ್ ವೇಳೆ ರಕ್ಷಿತ್ ಶೆಟ್ಟಿ ತಮ್ಮ ಸ್ನೇಹಿತೆ ಮೇಘನಾ ಗಾಂವ್ಕರ್ ಅವರಿಗೆ ಚಾಲೆಂಜ್ ಹಾಕಿದ್ದರು. ರಕ್ಷಿತ್ ಚಾಲೆಂಜ್ ಅನ್ನು ಮೇಘನಾ ಸ್ವೀಕರಿಸಿದ್ದರು. ಅದಲ್ಲದೆ, ಅನೇಕ ಬಾರಿ ಎಷ್ಟೋ ಕಾರ್ಯಕ್ರಮಗಳಲ್ಲಿ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು.

ರಕ್ಷಿತ್ ಪರವಾಗಿ ಪ್ರಶಸ್ತಿ

ರಕ್ಷಿತ್ ಪರವಾಗಿ ಪ್ರಶಸ್ತಿ

ಈ ಹಿಂದೆ ಒಮ್ಮೆ ಬೆಂಗಳೂರು ಟೈಮ್ಸ್ ನೀಡಿದ ಪ್ರಶಸ್ತಿ ಕಾರ್ಯಕ್ರಮಕ್ಕೆ ರಕ್ಷಿತ್ ಶೆಟ್ಟಿ ಬರಲು ಸಾಧ್ಯ ಆಗಿರಲಿಲ್ಲ. ರಕ್ಷಿತ್ ಗೆ 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಚಿತ್ರದ ಹಾಡಿಗೆ ಅತ್ಯುತ್ತಮ ಸಾಹಿತಿ ಪ್ರಶಸ್ತಿ ಸಿಕಿತ್ತು. ಆಗ ಅವರ ಪರವಾಗಿ ಮೇಘನಾ ಈ ಪ್ರಶಸ್ತಿ ಸ್ವೀಕರಿಸಿದ್ದರು.

More from Filmibeat

English summary
Kannada actor Rakshit Shetty and kannada actress Meghana Gaonkar photo creating new gossip.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X