»   » ರಕ್ಷಿತ್ ಶೆಟ್ಟಿ ಜತೆ ಪಾರ್ವತಿ ಮೆನನ್ ಲವ್ ಕಹಾನಿ

ರಕ್ಷಿತ್ ಶೆಟ್ಟಿ ಜತೆ ಪಾರ್ವತಿ ಮೆನನ್ ಲವ್ ಕಹಾನಿ

By: ಜೀವನರಸಿಕ
Subscribe to Filmibeat Kannada

'ಉಳಿದವರು ಕಂಡಂತೆ' ಚಿತ್ರ ಈಗಾಗಲೇ ನಿರೀಕ್ಷೆಯ ಅಲೆಯಲ್ಲಿ ತೇಲ್ತಾ ಇದೆ. ಚಿತ್ರದ ಸಂಗೀತ ಮತ್ತು ಟ್ರೈಲರ್ ಸಿನಿಮಾದ ಬಗ್ಗೆ ಇನ್ನಿಲ್ಲದ ನಿರೀಕ್ಷೆ ಹುಟ್ಟುಹಾಕಿವೆ. ಹೊಸ ರೀತಿಯ ಸಂಗೀತ ಮತ್ತು ಸಾಹಿತ್ಯ ಕೊಡ್ತಾ ಇರೋ ಥ್ರಿಲ್ ಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಈಗ ಈ ಚಿತ್ರತಂಡದಿಂದ ಹೊಸದೊಂದು ಸುದ್ದಿ ಬಂದಿದೆ.

ರಕ್ಷಿತ್ ಶೆಟ್ಟಿ ಮತ್ತೊಂದು ಸಿನಿಮಾಗೇ ನಾಯಕನಾಗಿ ಆಯ್ಕೆಯಾಗಿದ್ದಾರೆ. ಸಿನಿಮಾದ ಹೆಸ್ರು 'ರಿಕ್ಕಿ' ಇದು ಸಿನಿಮಾದಲ್ಲಿ ಹೀರೋನ ಹೆಸರಂತೆ. 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರತಂಡದ ಮತ್ತೊಬ್ಬ ಪ್ರತಿಭೆ ನಿರ್ದೇಶಕರಾಗುತ್ತಿದ್ದಾರೆ. 'ರಿಕ್ಕಿ'ಗೆ ಆಕ್ಷನ್ ಕಟ್ ಹೇಳ್ತಿರೋದು ವೃಷಭ್ ಶೆಟ್ಟಿ. [ನಾಯಕ ರಕ್ಷಿತ್ ಶೆಟ್ಟಿ ಸಂದರ್ಶನ]


ಈಗಾಗಲೇ 'ಉಳಿದವರು ಕಂಡಂತೆ' ಸಿನಿಮಾದಲ್ಲಿ ಉಳಿದವರು ಕಾಣದಂತಹಾ ಥ್ರಿಲ್ಲಿಂಗ್ ಮ್ಯೂಸಿಕ್ ಕೊಟ್ಟಿರೋ ಅಜನೀಶ್ ಲೋಕನಾಥ್ ಅವರು 'ರಿಕ್ಕಿ'ಗೆ ಸಂಗೀತ ನೀಡಲಿದ್ದಾರೆ. ಇನ್ನು ನಾಯಕಿಯಾಗಿ ಪಾರ್ವತಿ ಮೆನನ್ ರನ್ನ ತರೋ ಬಗ್ಗೆ ಮಾತುಕತೆ ನಡೀತಾ ಇದೆ.

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರತಂಡದಿಂದ ಹುಟ್ಟಿದ ಮತ್ತೊಂದು ಸಿನಿಮಾಗೆ ಬಗ್ಗೆ ಒಂಚೂರು ನಿರೀಕ್ಷೆ, ಒಂದಷ್ಟು ನಂಬಿಕೆ ಖಂಡಿತಾ ಇರುತ್ತೆ. ಸಿನಿಮಾದ ಬಗ್ಗೆ ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಇಷ್ಟು. ಮತ್ತಷ್ಟು ಮಾಹಿತಿ ನಿರೀಕ್ಷಿಸಿ.

English summary
A new generation Kannada film actor and director Rakshit Shetty ('Simple Agi Ondh Love Story' fame) signed one more movie titled as 'Ricky'. Actress Parvathi Menon playing opposite to Rakshit. Music is composed by B Ajaneesh Loknath. More details are awaited.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada