For Quick Alerts
  ALLOW NOTIFICATIONS  
  For Daily Alerts

  ರಾಮ್ ಚರಣ್-ಶಂಕರ್ ಚಿತ್ರಕ್ಕೆ ರಶ್ಮಿಕಾ ಬದಲು ಮತ್ತೋರ್ವ ಸ್ಟಾರ್ ನಟಿ ಆಯ್ಕೆ

  |

  ಟಾಲಿವುಡ್ ನ ಸ್ಟಾರ್ ನಟ ರಾಮ್ ಚರಣ್ ಮುಂದಿನ ಸಿನಿಮಾಗೆ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಂಕರ್ ಮತ್ತು ರಾಮ್ ಚರಣ್ ಸಿನಿಮಾದ ಅನೌನ್ಸ್ ಆಗುತ್ತಿದ್ದಂತೆ ಅಭಿಮಾನಿಗಳ ಕುತೂಹಲ, ನಿರೀಕ್ಷೆ ದುಪ್ಪಟ್ಟಾಗಿದೆ.

  ಇನ್ನು ಟೈಟಲ್ ಇಡದ ಪ್ಯಾನ್ ಇಂಡಿಯಾ 3ಡಿ ಸಿನಿಮಾದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ವಿಶೇಷ ಎಂದರೆ ರಾಮ್ ಚರಣ್ ಗೆ ನಾಯಕಿಯಾಗಿ ಯಾರು ಎನ್ನುವ ಚರ್ಚೆ ಜೋರಾಗಿದೆ. ಘಟಾನುಘಟಿಗಳ ಸಿನಿಮಾ ಅಂದ್ಮೇಲೆ ನಾಯಕಿಯ ಪಾತ್ರಕ್ಕೆ ದೊಡ್ಡ ಸ್ಟಾರ್ ನಟಿಯರ ಹೆಸರುಗಳು ಕೇಳಿಬರುವುದು ಸಹಜ. ಈಗಾಗಲೇ ಸಾಕಷ್ಟು ನಟಿ ಮಣಿಯರ ಹೆಸರು ಕೇಳಿಬರುತ್ತಿದೆ.

  'ಇಂಡಿಯನ್' ನಿರ್ದೇಶಕರ ಜೊತೆ ರಾಮ್ ಚರಣ್ ಸಿನಿಮಾ ಕನ್ಫರ್ಮ್; ಚಿತ್ರದಲ್ಲಿ ಇರ್ತಾರಾ ಯಶ್?'ಇಂಡಿಯನ್' ನಿರ್ದೇಶಕರ ಜೊತೆ ರಾಮ್ ಚರಣ್ ಸಿನಿಮಾ ಕನ್ಫರ್ಮ್; ಚಿತ್ರದಲ್ಲಿ ಇರ್ತಾರಾ ಯಶ್?

  ಈ ಮೊದಲು ರಶ್ಮಿಕಾ ಮಂದಣ್ಣ ನಾಯಕಿಯಾಗಲಿದ್ದಾರೆ ಎನ್ನಲಾಗುತ್ತಿತ್ತು. ಹರಿದಾಡುತ್ತಿದ್ದ ಮಾಹಿತಿ ಪ್ರಕಾರ ಈ ಸಿನಿಮಾಗೆ ರಶ್ಮಿಕಾನೆ ನಾಯಕಿಯಾಗಲಿ ಎಂದು ಸ್ವತಃ ರಾಮ್ ಚರಣ್ ಅವರೇ ಸೂಚಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದರೀಗ ನಾಯಕಿಯರ ಲಿಸ್ಟ್ ನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗುತ್ತಿದೆ.

  ಹೌದು, ನಟಿ ರಕುಲ್ ಪ್ರೀತ್ ಸಿಂಗ್, ರಾಮ್ ಚರಣ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ನಿರ್ಮಾಪಕ ದಿಲ್ ರಾಜು, ರಾಕುಲ್ ಪ್ರೀತ್ ಸಿಂಗ್ ಅವರನ್ನು ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಲು ನಿರ್ಧರಿಸಿದ್ದಾರಂತೆ.

  ಅಂದಹಾಗೆ ರಾಮ್ ಚರಣ್ ಮತ್ತು ರಕುಲ್ ಈ ಮೊದಲು ಎರಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳಿಗೂ ಇಷ್ಟವಾಗಿದೆ. ಇದೀಗ ಮೂರನೇ ಬಾರಿ ಒಂದಾಗುವ ಮೂಲಕ ಹ್ಯಾಟ್ರಿಕ್ ಹಿಟ್ ಕೊಡಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಿನಿಮಾತಂಡ ಅಧಿಕೃತವಾಗಿ ಬಹಿರಂಗ ಪಡಿಸುವವರೆಗೂ ಕಾಯಲೇ ಬೇಕು.

  English summary
  Actress Rakul Preet Singh likely to play lead opposite Ram Charan next movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X