ನಾಗಾರ್ಜುನ ಜೊತೆ ನಟಿಸಲು ರಕುಲ್ ಗೆ ಸಿಕ್ಕಿದ್ದು ದುಬಾರಿ ಸಂಭಾವನೆ.!

ತೆಲುಗು ಸೂಪರ್ ಸ್ಟಾರ್ ನಾಗಾರ್ಜುನ ಅವರ ವಯಸ್ಸು 59. ಈ ವಯಸ್ಸಿನಲ್ಲೂ 20ರ ಹರೆಯದ ಯುವಕನಂತೆ ಕಾಣಿಸ್ತಾರೆ. ಈಗಲೂ ಸೋಲೋ ಹೀರೋ ಆಗಿ ಸಿನಿಮಾ ಮಾಡ್ತಾರೆ. ಟಾಲಿವುಡ್ ನಲ್ಲಿ ಮನ್ಮಥ ಎಂದೇ ಇವರನ್ನ ಕರೆಯುತ್ತಾರೆ.

ಇದೀಗ, 'ಮನ್ಮಥಡು-2' ಎಂಬ ಚಿತ್ರದಲ್ಲಿ ನಾಗಾರ್ಜುನ ನಟಿಸಿದ್ದು, ಆಗಸ್ಟ್ 9 ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಅಕ್ಕಿನೇನಿಗೆ 28 ವರ್ಷದ ರಕುಲ್ ಪ್ರೀತ್ ಸಿಂಗ್ ನಾಯಕಿ.

ಶೀರ್ಷಿಕೆಗೆ ತಕ್ಕ ಹಾಗೆ ಈ ಚಿತ್ರದಲ್ಲಿ ನಾಗಾರ್ಜುನ ಅವರದ್ದು ಮನ್ಮಥನ ಪಾತ್ರವೇ. ಅಂದ್ರೆ, ರಸಿಕ. ಮದುವೆ ಬಗ್ಗೆ ಆಸಕ್ತಿ ತೋರದ ನಾಯಕ, ಲವ್ವ, ರೋಮ್ಯಾನ್ಸ್ ಗೆ ಹೆಚ್ಚು ಒತ್ತು ಕೊಡ್ತಾನೆ. ಇಂತಹ ಪಾತ್ರದಲ್ಲಿ ನಟಿಸಿರುವ ನಾಗಾರ್ಜುನ ಜೊತೆ ರಕುಲ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

Rakul Preet Singh Remuneration for Manmadhudu 2

ಅತಿಯಾದ ಚುಂಬನ ದೃಶ್ಯಗಳು, ರೋಮ್ಯಾನ್ಸ್ ಹೆಚ್ಚಾಗಿದೆ. ಹೀಗಾಗಿ, ರಕುಲ್ ಇಂತಹ ಪಾತ್ರಕ್ಕೆ ಹೇಗೆ ಒಪ್ಪಿಕೊಂಡರು ಎಂಬ ಪ್ರಶ್ನೆ ಉದ್ಭವವಾಗಿದೆ. ನಾಗಾರ್ಜುನ ಅಂತಹ ಹಿರಿಯ ನಟರೊಂದಿಗೆ ಈ ಮಟ್ಟಿಗೆ ರೋಮ್ಯಾನ್ಸ್ ಅಗತ್ಯ ಇತ್ತಾ ಎಂದು ಕೆಲವು ಅಭಿಪ್ರಾಯ ವ್ಯಕ್ತವಾಗಿದೆ.

ಅದೆಲ್ಲ ಬಿಡಿ, ನಾಗಾರ್ಜುನಗೆ ಜೋಡಿಯಾಗಿ ನಟಿಸಲು ರಕುಲ್ ಪ್ರೀತ್ ಸಿಂಗ್ ಎಷ್ಟು ಸಂಭಾವನೆ ಪಡೆದುಕೊಂಡಿರಬಹುದು ಎಂಬ ಕುತೂಹಲ ಕಾಡ್ತಿದೆ. ಟಾಲಿವುಡ್ ವರದಿಗಳ ಪ್ರಕಾರ ಮನ್ಮಥಡು ಚಿತ್ರಕ್ಕಾಗಿ ರಕುಲ್ ಸುಮಾರು 1.55 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರಂತೆ. ಇದನ್ನ ಕೇಳಿ ಟಾಲಿವುಡ್ ಇಂಡಸ್ಟ್ರಿ ಅಚ್ಚರಿಯಾಗಿದೆ.

ಇದನ್ನ ಬಿಟ್ಟರೆ, ಶಿವಕಾರ್ತಿಕೆಯನ್ ಜೊತೆ ರಕುಲ್ ಒಂದು ಸಿನಿಮಾ ಮಾಡ್ತಿದ್ದಾರೆ. ಹಿಂದಿಯಲ್ಲೂ ಒಂದು ಸಿನಿಮಾ ಮಾಡ್ತಿದ್ದಾರೆ. ವಿಶೇಷ ಅಂದ್ರೆ, ರಕುಲ್ ಪ್ರೀತಿ ಸಿಂಗ್ ಕನ್ನಡ ಚಿತ್ರರಂಗದ ಮೂಲಕ ಸಿನಿವೃತ್ತಿ ಆರಂಭಿಸಿದ್ದರು. ಜಗ್ಗೇಶ್ ಮಗ ಗುರು ಅಭಿನಯಿಸಿದ್ದ ಗಿಲ್ಲಿ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದರು.

More from Filmibeat

English summary
South actress Rakul Preet Singh charge 1.55 crore Remuneration for Manmadhudu-2 movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X