ಮದುವೆ ಬಗ್ಗೆ ಹೀಗಾ ಹೇಳೋದು ರಾಕುಲ್? ಆ ನಿರ್ಮಾಪಕನ ಕತೆ ಏನು?

ಮದುವೆಯ ಬಗ್ಗೆ ಚಿತ್ರರಂಗದ ಪುರುಷರಿಗಿಂತಲೂ ಮಹಿಳೆಯರಿಗೆ ಹೆಚ್ಚು ಸ್ಪಷ್ಟನೆ ಇದೆ. ಯಾವ ವರ್ಷದಲ್ಲಿ ಮದುವೆ ಆಗಬೇಕು? ಎಂಥಹವರನ್ನು ಮದುವೆ ಆಗಬೇಕು? ಮದುವೆಯಾದ ಬಳಿಕ ಭವಿಷ್ಯ ಹೀಗೆ ಹಲವು ವಿಷಯಗಳಲ್ಲಿ ಈಗಿನ ನಟಿಯರಿಗೆ ಸ್ಪಷ್ಟತೆ ಇದೆ. ಅಂಥಹವರಲ್ಲಿ ನಟಿ ರಾಕುಲ್ ಪ್ರೀತಿ ಸಿಂಗ್ ಸಹ ಒಬ್ಬರು.

ರಾಕುಲ್‌ಗೆ ಈಗ 31 ವರ್ಷ ವಯಸ್ಸು. ತೀರ ಈಗಲೇ ಮದುವೆ ಆಗಿಯೇ ಬಿಡಬೇಕು ಎನ್ನುವ ವಯಸ್ಸೇನೂ ಅಲ್ಲ. ಆದರೆ ನಟಿಯರ ವಯಸ್ಸು 30 ದಾಟುತ್ತಿದ್ದಂತೆ ಮಾಧ್ಯಮಗಳು, ಅಕ್ಕ-ಪಕ್ಕದವರು ಮದುವೆಯ ಬಗ್ಗೆ ಪ್ರಶ್ನಿಸಲಾರಂಭಿಸುತ್ತಾರೆ.

ಹೀಗೆಯೇ ರಾಕುಲ್‌ಗೂ ಪ್ರಶ್ನೆ ಬಂದಿದೆ. ಆದರೆ ರಾಕುಲ್‌ ತಿರುಗಾ-ಮುರುಗಾ ಉತ್ತರ ಕೊಟ್ಟು ಪ್ರಶ್ನೆ ಕೇಳಿದವರನ್ನೇ ಗೊಂದಲಕ್ಕೆ ಸಿಲುಕಿಸಿದ್ದಾರೆ. ಹಿಂದಿ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಾಕುಲ್, ''ಮದುವೆ ಎಂದರೆ ಬೋರಿಂಗ್, ಪ್ರೀತಿ ಆದರೆ ಓಕೆ' ಎಂದಿದ್ದಾರೆ. ಆ ಮೂಲಕ ತಾವು ಮದುವೆ ಆಗುವುದಿಲ್ಲವೆಂದು ಅಥವಾ ಕನಿಷ್ಟ ಪಕ್ಷ ಈಗ ಮದುವೆ ಆಗುವುದಿಲ್ಲವೆಂದು ಹೇಳಿದ್ದಾರೆ.

Rakul Preet Singh Talks About Her Wedding

ಆದರೆ ಕೆಲವು ತಿಂಗಳ ಹಿಂದಷ್ಟೆ ರಾಕುಲ್ ಪ್ರೀತ್ ಸಿಂಗ್ ತಾವು ವ್ಯಕ್ತಿಯೊಬ್ಬರೊಟ್ಟಿಗೆ ಪ್ರೀತಿಯಲ್ಲಿರುವುದಾಗಿ ಬಹಿರಂಗಪಡಿಸಿದ್ದರು. ನಿರ್ಮಾಪಕ, ನಟ ಜಾಕಿ ಭಗ್ನಾನಿ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ಇಬ್ಬರೂ ಒಟ್ಟಿಗಿರುವ ಚಿತ್ರವನ್ನು ರಾಕುಲ್ ಪ್ರೀತ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇಬ್ಬರೂ ಇದೇ ವರ್ಷ ಮದುವೆ ಆಗುತ್ತಾರೆಂಬ ಸುದ್ದಿಯೂ ಜೋರಾಗಿಯೇ ಹರಿದಾಡಿತ್ತು. ಆದರೆ ಈಗ ನೋಡಿದರೆ ರಾಕುಲ್ ಮದುವೆಯೇ ಬೇಡ ಎಂಬರ್ಥದ ಮಾತುಗಳನ್ನು ಆಡಿದ್ದಾರೆ.

ರಾಕುಲ್ ಪ್ರೀತ್ ಸಿಂಗ್ ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಹಾಗಾಗಿ ಈಗ ವೃತ್ತಿಯ ಕಡೆಗಷ್ಟೆ ಗಮನ ಕೊಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ರಾಕುಲ್-ಜಾಕಿ ಭಗ್ನಾನಿ ಪ್ರೀತಿಯಲ್ಲಿರುವುದೇನೋ ನಿಜ ಆದರೆ ಮದುವೆ ಇನ್ನೂ ದೂರದ ಮಾತು. ''ನಾನು ಮದುವೆ ಆಗಬೇಕು ಎಂದು ನಿಶ್ಚಯಿಸಿದಾಗ ಮಾತ್ರವೇ ನನ್ನ ಮದುವೆ ಸುದ್ದಿಯನ್ನು ಮನೆಯಲ್ಲಿ ಮಾತನಾಡುತ್ತಾರೆ. ಅಲ್ಲಿವರೆಗೆ ನಾನು ಸ್ವತಂತ್ರ್ಯಳು'' ಎಂದು ರಾಕುಲ್ ತಮ್ಮ ಹಿಂದಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ನಟಿ ರಾಕುಲ್ ಪ್ರೀತ್ ಸಿಂಗ್ ನಟಿಸಿರುವ ತೆಲುಗು ಸಿನಿಮಾ 'ಕೊಂಡ ಪಾಲೆಂ' ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಗಮನ ಸೆಳೆದಿದೆ. ಅದರ ಹೊರತಾಗಿ ಹಲವು ಹಿಂದಿ ಸಿನಿಮಾಗಳನ್ನು ರಾಕುಲ್ ಒಪ್ಪಿಕೊಂಡಿದ್ದಾರೆ. ಪ್ರತಿಭಾನ್ವಿತ ನಟ ಆಯುಷ್ಮಾನ್ ಖುರಾನಾ ಜೊತೆಗೆ 'ಡಾಕ್ಟರ್ ಜಿ', ಅಜಯ್ ದೇವಗನ್, ಅಮಿತಾಬ್ ಬಚ್ಚನ್ ಜೊತೆಗೆ 'ಮೇ ಡೆ', ಅಕ್ಷಯ್ ಕುಮಾರ್ ಜೊತೆಗೆ ಇನ್ನೂ ಹೆಸರಿಡದ ರೀಮೇಕ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಜಾನ್ ಅಬ್ರಾಹಂ ಜೊತೆಗೆ 'ಅಟ್ಯಾಕ್' ಸಿನಿಮಾದಲ್ಲಿಯೂ ರಾಕುಲ್ ನಟಿಸಲಿದ್ದಾರೆ. ಇಷ್ಟೋಂದು ಬ್ಯುಸಿಯಾಗಿರುವ ನಟಿಗೆ ಮದುವೆ ಆಗಲು ಪಾಪ ಸಮಯವಾದರೂ ಎಲ್ಲಿದೆ!

More from Filmibeat

English summary
Actress Rakul Preet Singh talks about her wedding. She said marriage is boaring, love is good. She is in relation with actor-producer Jacky Bhaglani.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X